ಈವರೆಗೆ 500ಕ್ಕೂ ಹೆಚ್ಚು ಮೊಬೈಲ್ ಪತ್ತೆ ಹಚ್ಚಿದ CIER ಪೋರ್ಟಲ್ ಈಗ 12.10 ಲಕ್ಷ ರೂ ಮೌಲ್ಯದ 100 ಮೊಬೈಲ್ ಪತ್ತೆ- ವಿತರಣೆ

ಈವರೆಗೆ 500ಕ್ಕೂ ಹೆಚ್ಚು ಮೊಬೈಲ್ ಪತ್ತೆ ಹಚ್ಚಿದ CIER ಪೋರ್ಟಲ್

ಈಗ 12.10 ಲಕ್ಷ ರೂ ಮೌಲ್ಯದ 100 ಮೊಬೈಲ್ ಪತ್ತೆ- ವಿತರಣೆ

ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸರು ಕಳುವಾಗಿದ್ದ 12.10ಲಕ್ಷ ರೂ., ಮೌಲ್ಯದ ಒಟ್ಟು 100 ಮೊಬೈಲ್ ಗಳನ್ನು ಪತ್ತೆ ಹಚ್ಚಿದ್ದು, ಏ.1ರಂದು ಮೂಲ ಮಾಲೀಕರಿಗೆ ಅವರವರ ಮೊಬೈಲ್ ಗಳನ್ನು ಹಿಂದಿರುಗಿಸಿದೆ.

ಈ ಬಗ್ಗೆ ಸುದ್ದಿಗೋಷ್ಠಿ ಮಾಡಿದ ಎಸ್ ಪಿ ಮಿಥುನ್ ಕುಮಾರ್, ಸೈಬರ್ ಕ್ರೈಂ ಸಿಬ್ಬಂದಿಗಳನ್ನೊಳಗೊಂಡ ಸಿಇಐಆರ್ ಪೋರ್ಟಲ್ ನಲ್ಲಿ ಪತ್ತೆಯಾದ ಮೊಬೈಲ್ ಗಳು ಇವಾಗಿವೆ ಎಂದರು.

ಈವರೆಗೆ ಈ ಪೋರ್ಟಲ್ ಮೂಲಕ 500 ಕ್ಕೂ ಹೆಚ್ಚಿನ ಮೊಬೈಲ್ ಗಳನ್ನು ಪತ್ತೆ ಹಚ್ಚಲಾಗಿದೆ. ಪತ್ತೆಹಚ್ಚಿದ ಪೊಲೀಸರಿಗೆ ಎಸ್ ಪಿ ಮಿಥುನ್ ಕುಮಾರ್ ಅಭಿನಂದಿಸಿದರು.

ಮೊಬೈಲ್ ಕಳೆದುಕೊಂಡ ಸಾರ್ವಜನಿಕರು ಪೊಲೀಸ್ ಠಾಣೆಗೆ ಭೇಟಿ ನೀಡದೇ ತಾವೇ ಸ್ವತಃ KSP ಅಪ್ಲಿಕೇಷನ್ ನ e-LOST APP ಮೂಲಕ ದೂರು ದಾಖಲಿಸಿ ಸ್ವೀಕೃತಿ ಪಡೆದುಕೊಳ್ಳಬೇಕು. ಅಲ್ಲಿ ಅರ್ಜಿ ತುಂಬಿ ಅಗತ್ಯ ವಿವರಗಳನ್ನು ದಾಖಲಿಸಿದರೆ ದೂರು ದಾಖಲಾದ 24 ಗಂಟೆಯೊಳಗೆ ಕಳೆದುಹೋದ ಮೊಬೈಲ್ ಬ್ಲಾಕ್ ಆಗುತ್ತದೆ. ಆಗ ಮೊಬೈಲ್ ದುರ್ಬಳಕೆಯಾಗುವುದಿಲ್ಲ. ಆಗ ಮೊಬೈಲ್ ಬಳಸಲು ಪ್ರಯತ್ನಿಸಿದಲ್ಲಿ ಅದರ ವಿವರ ಪೊಲೀಸರಿಗೆ ಸಿಗುತ್ತದೆ‌. ಸುಲಭವಾಗಿ ಇದರಿಂದ ಮೊಬೈಲ್ ಕಳ್ಳತನ ಪತ್ತೆಹಚ್ಚಬಹುದು ಎಂದರು.

ಎಸ್ ಪಿ ಮಿಥುನ್ ಕುಮಾರ್, ಅಡಿಷನಲ್ ಎಸ್ ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ನಿರೀಕ್ಷಕ ಜೆ.ಎಸ್.ತಿಪ್ಪೇಸ್ವಾಮಿ ನೇತೃತ್ವದಲ್ಲಿ ಸೈಬರ್ ಕ್ರೈಂ ಪೊಲೀಸರು ಕಾರ್ಯನಿರ್ವಹಿಸಿದ್ದಾರೆ.