ಕೆಪಿಸಿಸಿ ಕಾರ್ಯಾಧ್ಯಕ್ಷರು, ಶಿಕೆಪಿಸಿಸಿ ಕಾರ್ಯಾಧ್ಯಕ್ಷರು, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಹಾಗೂ ವಿಧಾನ ಪರಿಷತ್ತಿನ ಸದಸ್ಯರಾದ ಮಂಜುನಾಥ ಭಂಡಾರಿ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಏನಂದ್ರು?*

 

*ಕೆಪಿಸಿಸಿ ಕಾರ್ಯಾಧ್ಯಕ್ಷರು, ಶಿಕೆಪಿಸಿಸಿ ಕಾರ್ಯಾಧ್ಯಕ್ಷರು, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಹಾಗೂ ವಿಧಾನ ಪರಿಷತ್ತಿನ ಸದಸ್ಯರಾದ ಮಂಜುನಾಥ ಭಂಡಾರಿ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಏನಂದ್ರು?*

ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವಂತಾಗಿದ್ದು ಮಾಧ್ಯಮಗಳಿಂದ.

7 ಪಾರ್ಲಿಮೆಂಟ್ ಕ್ಷೇತ್ರಗಳ ಜೊತೆಗೆ, ಯುವ ಮತ್ತು ಮಹಿಳಾ ಕಾಂಗ್ರೆಸ್ ಜವಾಬ್ದಾರಿ ನೀಡಿದ್ದಾರೆ. ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ಹೇಳಿದಂತೆ ಸಂವಿಧಾನ ಮತ್ತು ಪ್ರಜಾಸತ್ತೆ ಉಳಿಸುವ ಪ್ರಯತ್ನ ಈ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡುತ್ತಿದೆ.

ಪ್ರಜಾಪ್ರಭುತ್ವದಲ್ಲಿ ಕಗ್ಗೊಲೆ ನಡೆಯುತ್ತಿದೆ. ಬಲಿದಾನದ ಮೂಲಕ ಸಿಕ್ಕ ಹಕ್ಕುಗಳ ಮೇಲೆ ತೊಂದರೆಗಳಾಗುತ್ತಿವೆ. ಸಾಮಾನ್ಯ ವ್ಯಕ್ತಿಯೂ ರಾಜನಾಗಬಹುದು ಅಂತ ತೋರಿಸಿಕೊಟ್ಟಿದ್ದು ಸಂವಿಧಾನ ಮತ್ತು ಕಾಂಗ್ರೆಸ್ ಪಕ್ಷದ ಕೊಡುಗೆ.

ಪ್ರಜಾಸತ್ತಾತ್ಮಕ ಆಡಳಿತಗಳನ್ನು ಕಳೆದ ಐದಾರು ವರ್ಷಗಳಲ್ಲಿ ಪ್ರಜೆಗಳಿಂದ ಆಯ್ಕೆ ಆದ 8 ರಾಜ್ಯಗಳಲ್ಲಿ ಕಗ್ಗೊಲೆ ಆಗ್ತಿದೆ. ಗೆದ್ದ ಶಾಸಕರುಗಳನ್ನು, ಉದಾಹರಣೆಗೆ ಅರುಣಾಚಲದಲ್ಲಿ ಈ ಕಗ್ಗೊಲೆ ಕಾಣಬಹುದು.

ಸಿಬಿಐ, ಇಡಿ ರೈಡ್ ಗಳನ್ನು ಭ್ರಷ್ಟರ ಮೇಲೆ ಮಾಡಿಸಿ, ಬಿಜೆಪಿಗೆ ಸೇರಿಸಿಕೊಂಡು ಕ್ಲೀನ್ ಚಿಟ್ ಕೊಡಲಾಗುತ್ತಿದೆ. ಆಪ್ ಮುಖ್ಯಮಂತ್ರಿ ಕೇಜ್ರಿವಾಲ್ ರನ್ನ ಜೈಲಿಗೆ ಕಳಿಸಲಾಗಿದೆ. ಅಬಕಾರಿ ನೀತಿ ಸರಿ ಇಲ್ಲವೆಂದು ಬಂಧಿಸಲಾಗಿದೆ. ಆಪ್ ಸರಕಾರ ತಪ್ಪು ನೀಡಿ ಮಾಡಿದೆಯಾದರೆ, ಎಲೆಕ್ಟ್ರೋಲ್ ಬಾಂಡ್ ಗಳಿಗೆ ಅದೇ ಕಾನೂನು ಜೈಲಿಗೆ ಕಳಿಸಬೇಕಿತ್ತಲ್ಲ. ಚುನಾವಣೆಯ ಈ ಸಂದರ್ಭದಲ್ಲಿ ಬ್ಯಾಂಕ್ ಖಾತೆಗಳನ್ನು ಸೀಝ್ ಮಾಡಲಾಗಿದೆ. ಬಿಜೆಪಿಗೆ ಹೆದರಿಕೆ ಶುರುವಾಗಿದೆ, ಕಾಂಗ್ರೆಸ್ ಬಗ್ಗೆ, ರಾಹುಲ್ ಗಾಂಧಿ ಬಗ್ಗೆ. ಆದರೆ, ದುರುದ್ದೇಶದಿಂದ ಕಾಂಗ್ರೆಸ್ ಮೇಲೆ ಹಿಂಸೆ. ಬಿಜೆಪಿ ಮೇಲೆ ಯಾವುದೇ ಕ್ರಮ ಯಾಕಿಲ್ಲ? ಪ್ರಜಾಪ್ರಭುತ್ವದ ಕತ್ತು ಹಿಸುಕಲಾಗುತ್ತಿದೆ.

ಸಂವಿಧಾನದ ಹಕ್ಕುಗಳು ಮಾನವೀಯವಾಗಿವೆ. ಅದನ್ನೆಲ್ಲ ಬದಲಾಯಿಸಲು ಹೊರಟಿದ್ದಾರೆ. ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಅಭಿವೃದ್ಧಿ ಆಧಾರದ ಮೇಲೆ ಮತಕೇಳುತ್ತಿದ್ದೆವು. ಆದರೆ, ಧರ್ಮ, ಜಾತಿ ಆಧಾರದ ಮೇಲೆ ಕೇಳಿಲ್ಲ. ಆದರೆ, ಚುನಾವಣೆ ಪ್ರಚಾರಕ್ಕೆ ಇದನ್ನೆಲ್ಲ ಬಿಜೆಪಿ ಬಳಸಿಕೊಳ್ಳುತ್ತಿರುವುದು ಎಷ್ಟು ಸರಿ?

ಪ್ರಣಾಳಿಕೆ ಮುಖಾಂತರ ಭರವಸೆ ಕೊಡುತ್ತಿದ್ದೆವು ಮೊದಲೆಲ್ಲ. ಜನಾಭಿಪ್ರಾಯದ ಮೂಲಕ ಈಗ ಪ್ರಣಾಳಿಕೆ. ಅದರ ಆಧಾರದ ಮೇಲೆ ಗ್ಯಾರಂಟಿಗಳ ಘೋಷಣೆ ಆಯಿತು. ಗ್ಯಾರಂಟಿಗೆ ವಾರಂಟಿ ಇಲ್ಲ ಅಂದ ಬಿಜೆಪಿ ಗ್ಯಾರಂಟಿಯನ್ನೇ ಕದಿಯುತ್ತಿದೆ.

98.03 ಶೇ.ದಷ್ಟು ಗ್ಯಾರಂಟಿ ಉಪಯೋಗ ಆಗಿದೆ. ಜನ ಸಂಪೂರ್ಣ ಉಪಯೋಗ ಪಡೆದಿದ್ದಾರೆ. ಮತ ಹಾಕುತ್ತಾರೆ ಈ ಗ್ಯಾರಂಟಿಗಳ ಮೂಲಕ. ಆ ನಂಬಿಕೆ ಇದೆ. ಜನ ಕಾಂಗ್ರೆಸ್ ಕೈ ಹಿಡಿಯುವುದು ಗ್ಯಾರಂಟಿ.

ನಾವು ಅಭಿವೃದ್ಧಿ ಅನ್ನುತ್ತಿದ್ದೇವೆ. ಅವರು ಭಾವನಾತ್ಮಕವಾಗಿ ರಾಷ್ಟ್ರಪ್ರೇಮ, ದೇವಸ್ಥಾನದ ವಿಷಯ ತರುತ್ತಿದ್ದಾರೆ. 150 ಲಕ್ಷ ಕೋಟಿ ಸಾಲ ಬಿಜೆಪಿ ಹತ್ತು ವರ್ಷಗಳಲ್ಲಿ ಮಾಡಿದೆ. ಹತ್ತು ಲಕ್ಷ ರೂ ಒಬ್ಬೊಬ್ಬರ ತಲೆ ಮೇಲಿದೆ. ಸಾಲ ಮಾಡಿದ್ದೇ ಅಭಿವೃದ್ಧಿ.

ರಾಷ್ಟ್ರಪ್ರೇಮ ಕಾಂಗ್ರೆಸ್ ಕಾರ್ಯಕರ್ತನ ಡಿಎನ್ ಎ ನಲ್ಲಿಯೇ ಇದೆ. ನಮ್ಮ ಹಿಂದುತ್ವ ಸಂವಿಧಾನದ್ದು. ಬಸವ ಬುದ್ಧ ಅಂಬೇಡ್ಕರ್ ಸಂವಿಧಾನದ ಹಿಂದುತ್ವ ನಮ್ಮದು.

ಘಟಾನುಘಟಿಗಳ ಯುದ್ಧ 2014ರಲ್ಲಿ ನಡೆದಾಗ ಇಬ್ಬರೂ ಸ್ಪರ್ಧಿಸಿದ್ದೆವು.ಈಗ ಅವರೇ ಅಭ್ಯರ್ಥಿಯಾಗಿದ್ದಾರೆ. ಗೀತಾ ಶಿವರಾಜ್ ಕುಮಾರ್ ಸ್ಪರ್ಧೆಯಿಂದ ಕಾಂಗ್ರೆಸ್ ಗೆಲುವು ನಿಶ್ಚಿತ.

ಆತ್ಮವಿಶ್ವಾಸವಿದೆ…

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತಿ;
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್, ಹೆಚ್.ಸಿ.ಯೋಗೇಶ್, ಪ್ರಚಾರ ಸಮಿತಿ ಅಧ್ಯಕ್ಷರಾದ ಎನ್.ರಮೇಶ್, ಚಂದ್ರಭೂಪಾಲ್, ಕಾಶಿ ವಿಶ್ವನಾಥ್, ಮಧು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಕುಮಾರಿ, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್,ವಿಜಯಲಕ್ಷ್ಮೀ ಪಾಟೀಲ್, ಚಂದ್ರಶೇಖರ್, ಮೂರ್ತಿ ಮತ್ತಿತರರು ಇದ್ದರು.