ಮಾಸ್ತಿ ಗ್ರಾಮದ ಕೆ.ಪಿ.ಎಸ್ ಶಾಲೆಯ ಸುಧಾರಣೆಗೆ ವೈಯಕ್ತಿಕ 5 ಲಕ್ಷ ಸಹಾಯಧನದ ಚೆಕ್ ವಿತರಿಸಿದ ಸಚಿವ ಮಧು ಬಂಗಾರಪ್ಪ”*

*”ಮಾಸ್ತಿ ಗ್ರಾಮದ ಕೆ.ಪಿ.ಎಸ್ ಶಾಲೆಯ ಸುಧಾರಣೆಗೆ ವೈಯಕ್ತಿಕ 5 ಲಕ್ಷ ಸಹಾಯಧನದ ಚೆಕ್ ವಿತರಿಸಿದ ಸಚಿವ ಮಧು ಬಂಗಾರಪ್ಪ”*

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ OSAAT (One School At a Time) ಸಂಸ್ಥೆಯ ವತಿಯಿಂದ ಶ್ರೀಮತಿ ಲಿಂಡಾ ಠಕ್ಕರ್ ಮತ್ತು ಶ್ರೀ ಜನಾರ್ದನ್ ಠಕ್ಕರ್ ಅವರು ನಿರ್ಮಿಸಿದ ನೂತನ ಕರ್ನಾಟಕ ಪಬ್ಲಿಕ್ ಶಾಲೆ (ಕೆ.ಪಿ.ಎಸ್) ಕಟ್ಟಡವನ್ನು ಉದ್ಘಾಟಿಸಿ, ಮಾಸ್ತಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಸರ್ವಾಂಗೀಣ ಪ್ರಗತಿಗೆ ನನ್ನ ಸಂಬಳದಲ್ಲಿ 5 ಲಕ್ಷ ನೀಡುವುದಾಗಿ ಘೋಷಿಸಿದ್ದರು.

ಅದರಂತೆ ಇಂದು ವಿಧಾನಸೌಧದಲ್ಲಿ ಮಾಲೂರು ಕ್ಷೇತ್ರದ ಶಾಸಕರಾದ ಕೆ.ವೈ ನಂಜೇಗೌಡ್ರು ಸಮ್ಮುಖದಲ್ಲಿ 5 ಲಕ್ಷ ಸಹಾಯಧನದ ಚೆಕ್ ಅನ್ನು ಶಾಲಾ ಅಭಿವೃದ್ಧಿ ಸಮಿತಿಗೆ ಹಸ್ತಾಂತರಿಸಲಾಯಿತು.

ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ನಮ್ಮ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಜೊತೆಗೆ ಗಡಿಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಅನೇಕ ಉಚಿತ ಭಾಗ್ಯಗಳನ್ನು ಶಿಕ್ಷಣ ಇಲಾಖೆ ನೀಡಿದ್ದು ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.