ಸುದ್ದಿಗೋಷ್ಠಿ- ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಹೇಳಿದ್ದೇನು? ಸಂಸದ ರಾಘವೇಂದ್ರ ಶಿವಮೊಗ್ಗದ ಸುಳ್ಳಿನ ಸರದಾರ ಈಶ್ವರಪ್ಪ- ರಾಘವೇಂದ್ರ; ಡಮ್ಮಿ ಯಾರು? ಕಮ್ಮಿ ಯಾರು? ಆರಗ ಜ್ಞಾನೇಂದ್ರರೇ 420- ಪಂಚ ಗ್ಯಾರಂಟಿಗಳಲ್ಲ!
ಸುದ್ದಿಗೋಷ್ಠಿ-
ಜಿಲ್ಲಾ ಉಸ್ತುವಾರಿ ಸಚಿವರಾದ
ಮಧು ಬಂಗಾರಪ್ಪ ಹೇಳಿದ್ದೇನು?
ಸಂಸದ ರಾಘವೇಂದ್ರ ಶಿವಮೊಗ್ಗದ ಸುಳ್ಳಿನ ಸರದಾರ
ಈಶ್ವರಪ್ಪ- ರಾಘವೇಂದ್ರ; ಡಮ್ಮಿ ಯಾರು? ಕಮ್ಮಿ ಯಾರು?
ಆರಗ ಜ್ಞಾನೇಂದ್ರರೇ 420- ಪಂಚ ಗ್ಯಾರಂಟಿಗಳಲ್ಲ!
ಕಾಂಗ್ರೆಸ್ ನಿಂದ ಬೈಂದೂರು ಸೇರಿದಂತೆ ಎಲ್ಲ ಕಡೆ ಹಠ ತೊಟ್ಟು ಚುನಾವಣೆ ಮಾಡಲಾಗುತ್ತಿದೆ. ಸುಕುಮಾರ್ ಶೆಟ್ಟಿ, ಗೋಪಾಲ್ ಪೂಜಾರಿ ಓಡಾಟ, ಕೆಲಸ ಅದ್ಭುತವಾಗಿ ಮಾಡ್ತಿದಾರೆ. ಮಾಧ್ಯಮದ ಜೊತೆಗೆ ನಾವು ಹೇಳಿದ್ದನ್ನು ಮತದಾರರ ಬಳಿಯೂ ಒಯ್ಯಬೇಕು.
ತಾಲ್ಲೂಕು ಮಟ್ಟದ ಸಭೆಗಳೆಲ್ಲ ನಡೆಯುತ್ತಿವೆ. ಗ್ರಾಮೀಣ ಭಾಗದಲ್ಲೂ ಯೋಜನೆ ರೂಪಿಸ್ತಿದೀವಿ. ಗೀತಕ್ಕ ಗ್ರಾ.ಪಂ.ಮಟ್ಟದಲ್ಲೂ ಪ್ರಚಾರ ಮಾಡ್ತಿದಾರೆ.
ಮತದಾರರ ಬಳಿ ಹೆಚ್ಚು ಹೆಚ್ಚಾಗಿ ಶಿವರಾಜ್ ಕುಮಾರ್ ಓಡಾಡ್ತಿದಾರೆ. ಡಮ್ಮಿ ಕಮ್ಮಿ ಅನ್ನುವವರಿಗೆಲ್ಲ ಉತ್ತರ ಸಿಗುತ್ತೆ. ದೇಶದಲ್ಲೇ ಬದಲಾವಣೆ ಗಾಳಿ ಬೀಸ್ತಿದೆ. ಸೋಷಿಯಲ್ ಮೀಡಿಯಾಗಳ ರೆಸ್ಪಾನ್ಸ್ ನೋಡಿದ್ರೆ ಬಿಜೆಪಿ ಸೋಲುತ್ತೆ.
ಶಿವಮೊಗ್ಗದ ಜೊತೆ ಮಂಗಳೂರು, ಉಡುಪಿ, ಕಾರವಾರದಲ್ಲೂ ಪ್ರಚಾರದ ಜವಾಬ್ದಾರಿ ಇದೆ. ಜನರ ಬಳಿ ಉಗಿಸಿಕೊಂಡು ಬರುವ ಕೆಲಸ ಬಿಜೆಪಿ ಮಾಡ್ತಿದೆ.
ಜನರ ಎದುರು ಹೋಗೋಕೆ ಸಂಸದರಿಗೆ ಧೈರ್ಯವಿಲ್ಲ. 15 ವರ್ಷ ಬಿವೈ ಇದ್ದು ಏನು ಮಾಡಿದರು.ರಾಘವೇಂದ್ರ ಶಿವಮೊಗ್ಗದ ಸುಳ್ಳಿನ ಸರದಾರ. ನಂಬರ್ ಒನ್ ಅವಾರ್ಡ್ ರಾಘವೇಂದ್ರರಿಗೆ ಕೊಡಬೇಕು. ಬಿಜೆಪಿ ದೊಡ್ಡ ಸಮಾವೇಶ ಮಾಡಿ, ರಾಜ್ಯದ ಜನರಿಗೆ ಪಂಪ್ ಸೆಟ್ ಫ್ರೀ ಕೊಟ್ಟಿದ್ಯಾರು? ಅಂತ ಹೇಳಲಿ. ನಾಚಿಕೆ ಆಗಬೇಕು ಇವರಿಗೆ…ಸುಳ್ಳು ಹೇಳೋದೇ ಕೆಲಸ.
ಬಿಜೆಪಿಯಿಂದ ಬ್ರಿಟೀಷ್ ಸಂಪ್ರದಾಯ ಪಾಲನೆ ಆಗ್ತಿದೆ. ಪಾಕಿಸ್ತಾನದ ವಿಚಾರ ಬಿಟ್ರು, ಅಯೋಧ್ಯ ರಾಮನ ವಿಚಾರ ಬಿಟ್ರು. ಮೋದಿ, ಅಮಿತ್ ಷಾ ಬಂದು ಹೋಗ್ತಿದಾರೆ. ಮೋದಿಗೆ ವಿಶ್ವ ಮಾನವ ಮಾಡಬೇಕಂತೆ.
ಶರಾವತಿ ಸಂತ್ರಸ್ತರಿಗೆ ಅನ್ಯಾಯ ಮಾಡಿ ಕೋರ್ಟಿಗೆ ಓಡಾಡುವಂತೆ ಮಾಡಿದ್ದಾರೆ. ಏರ್ ಪೋರ್ಟ್, ಹೈ ವೇ ವಿಚಾರದಲ್ಲೂ ಸುಳ್ಳು. ತೆರಿಗೆ ಹಣದಲ್ಲಿ ನಿರ್ಮಾಣ.
ಮತ ಕೇಳೋ ಯೋಗ್ಯತೆಯೇ ಬಿಜೆಪಿಗಿಲ್ಲ. ಪಂಪ್ ಸೆಟ್, ಶರಾವತಿ ಸಂತ್ರಸ್ತರ ವಿಷಯದಲ್ಲೂ ಸುಳ್ಳು ಹೇಳುತ್ತಿದ್ದಾರೆ ರಾಘವೇಂದ್ರ. ಯಾರು ಡಮ್ಮಿ? ಯಾರು ಕಮ್ಮಿ? ಅರ್ಥಮಾಡಿಕೊಳ್ಳಿ.
ರಾಘವೇಂದ್ರ, ಈಶ್ವರಪ್ಪ ತೀರ್ಮಾನ ಮಾಡಲಿ. ಡಮ್ಮಿ ಯಾರು? ಕಮ್ಮಿ ಯಾರು? ನಮ್ಮ ತಟ್ಟೆ ಕ್ಲೀನ್ ಇದೆ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ.
ಏ.15 ಕ್ಕೆ ಗೀತಕ್ಕ ನಾಮಪತ್ರ ಸಲ್ಲಿಕೆ. ಶಿವರಾಜ್ ಕುಮಾರ್ ಸೇರಿದಂತೆ ಎಲ್ಲ ಗಣ್ಯರು ಇರ್ತಾರೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಅತ್ಯಂತ ಹೆಚ್ಚಿನ ಲೀಡ್ ಗೀತಕ್ಕನಿಗೆ ಸಿಗಲಿದೆ.
ಶೇ.65 ರಷ್ಟು ಹೆಣ್ಣು ಮಕ್ಕಳು ನಂಬಿಕೆಯಿಂದ ಗೀತಾರನ್ನು ಒಪ್ಪಿಕೊಂಡು ಗೆಲ್ಲಿಸಲು ಶ್ರಮಿಸುವ ನಂಬಿಕೆ ಇದೆ.
ಶಾಸಕ ಆರಗ ಜ್ಞಾನೇಂದ್ರ ಗ್ಯಾರಂಟಿಗಳಿಗೆ 420 ಗ್ಯಾರಂಟಿ ಅಂದಿದಾರೆ. ನೀವೇ 420. ಬಡವರಿಗೆ ಸಿಗುತ್ತಿರುವ ಗ್ಯಾರಂಟಿಗಳಲ್ಲಿ ನಿಮಗೆ ಮತ ಹಾಕಿದ ಶೇ.90 ರಷ್ಟು ಜನ ಪಡೆದುಕೊಳ್ಳುತ್ತಿದ್ದಾರೆ. ಹಾಗಾಗಿ, ನೀವೇ 420.
ಅಡಿಕೆ ಸಂಶೋಧನೆಯ ಮಾತಾಡಿ ಹತ್ತು ವರ್ಷಗಳ ಹಿಂದೆ ಹೋದ್ರಲ್ಲ ಅವರಿಗೆ 420 ಅನ್ನಿ. ಮತದಾರರಿಗೆ ಯಾವತ್ತೂ 420 ಅನ್ನಬೇಡಿ.
ಚೇಲಾ ಅನ್ನೋ ಪದ ಬಳಕೆ ಮಾಡದಿದ್ರೂ ಅದನ್ನೂ ರಾಘವೇಂದ್ರ ಸುಳ್ಳು ಹಬ್ಬಿಸಿದ್ದಾರೆ. ಬರ ಬಿದ್ದಿದ್ರೂ ಪರಿಹಾರದ ಮಾತಾಡುವ ಯೋಗ್ಯತೆ ಸಂಸದರಿಗಿಲ್ಲ.
ಭಾರತಾಂಬೆಯ ಮಗಳನ್ನ, ಇದೇ ಜಿಲ್ಲೆಯ ಮಗಳನ್ನ ಗೌರವದಿಂದ ಕಾಣಿ. ಆ ಹೆಣ್ಣು ಮಗಳಿಂದಲೇ ರಾಘವೇಂದ್ರ ಹೀನಾಯವಾಗಿ ಸೋಲುವುದು ಖಂಡಿತ.
ಮೋದಿ ಹೆಸರಲ್ಲಿ 27 ಗೆದ್ದಿದ್ದೀರಿ. ಈಗ ಗೆದ್ದು ತೋರಿಸಿ…
ರಾಮಣ್ಣಶ್ರೇಷ್ಠಿ ಪಾರ್ಕ್ ಮೂಲಕ ಆರಂಭವಾಗಲಿದೆ. ಗ್ಯಾರಂಟಿ ಫಲಾನುಭವಿಗಳೇ ಚುನಾವಣಾ ಠೇವಣಿ ಕಟ್ಟಲು ಮುಂದೆ ಬಂದಿದ್ದಾರೆ.
ಭಾರತ್ ಅಕ್ಕಿ ಎಲ್ಲಿ ಹೋಯ್ತು? ಸಂಸದರೇ ಹೇಳಿ. ಬಡವರ ಹೊಟ್ಟೆಗೆ ತಲುಪುತ್ತಿರೋದು ಸಿದ್ದರಾಮಯ್ಯರ ಅಕ್ಕಿ…ಕೋವಿಡ್ ಸಾವಿನ ಲೆಕ್ಕ ಕೊಟ್ಟಿಲ್ಲ…
ನಾವು ಒರಿಜಿನಲ್…ಅವರಿಬ್ಬರೂ ಡೂಪ್ಲಿಕೇಟ್…ಅವರಲ್ಲಿ ಯಾರು ಕಮ್ಮಿ? ಅವರೇ ನಿರ್ಧರಿಸಲಿ…
ಜೆಡಿಎಸ್ ಬಿಜೆಪಿಯ ಬಿ ಟೀಂ ಅಲ್ಲ…ಅದೀಗ ಓ ಟೀಂ…