ಏನಂದ್ರು ಜಿಲ್ಲಾಧಿಕಾರಿ? ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರ ಜೊತೆ ಪ್ರೆಸ್ ಟ್ರಸ್ಟ್ ನಿಂದ ಪತ್ರಿಕಾ ಸಂವಾದ*
*ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರ ಜೊತೆ ಪ್ರೆಸ್ ಟ್ರಸ್ಟ್ ನಿಂದ ಪತ್ರಿಕಾ ಸಂವಾದ*
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ;
ಬೀದರ್, ಕೊಪ್ಪಳ, ಮೈಸೂರು, ಧಾರವಾಡದಲ್ಲಿ ಕೆಲಸ ಮಾಡಿದ ನಂತರ ಇದೀಗ ಶಿವಮೊಗ್ಗದಲ್ಲಿ ಕೆಲಸ.
ವೈಬ್ರೆಂಟ್ ಇರೋ ಜಾಗ ಶಿವಮೊಗ್ಗ ಮಾಧ್ಯಮ. ಇಲ್ಲಿನ ಜನ ಜಾಗೃತರಾಗಿದ್ದಾರೆ. ಮಾಧ್ಯಮಗಳ ಸಂಪರ್ಕದಲ್ಲಿ ಅವರಿರುವುದರಿಂದ ಜನರಲ್ಲಿ ಜಾಗೃತಿ ಇದೆ. ಜನರೇ ಬಂದು ಸಲಹೆ ಕೊಡಬಲ್ಲ ಮಟ್ಟದಲ್ಲಿದ್ದಾರೆ.
ಅರಣ್ಯ ಕಾನೂನು, ಅರಣ್ಯ ರಕ್ಷಣೆ ಬಗ್ಗೆ ಬಹಳಷ್ಟು ಸಮಸ್ಯೆಗಳು ಇಲ್ಲಿ ಭಿನ್ನವಾಗಿವೆ. ಶಿರಸಿ ಮೂಲವಾದರೂ ಬೆಳೆದಿದ್ದು ಬಯಲು ಧಾರವಾಡದಲ್ಲಿ.
ಚುನಾವಣಾ ಜಾಗೃತಿ ನಡೆಯುತ್ತಿದೆ. ಮಾಧ್ಯಮದಲ್ಲಿ ಪೈಯ್ಡ್ ನ್ಯೂಸ್, ಮುಖವಾಡ ಹೊತ್ತ ಸುದ್ದಿಗಳ ಮೇಲೆ ಗಮನ ಇರಿಸಿದ್ದೇವೆ. ಒಂದೆಡೆ ವಾಲದಂತೆ ಮಾಧ್ಯಮಗಳು ಕೆಲಸ ಮಾಡಬೇಕು. ಹೊಸ ಸರ್ಕಾರ ರಚನೆಗೆ ಜನರಿಗೆ ಮಾಹಿತಿಕೊಟ್ಟು ಜಾಗೃತಿ ಮೂಡಿಸಿ.
ಜನ ಆಮಿಷಕ್ಕೆ ಒಳಗಾಗುವಂತೆ ಅಥವಾ ಧರ್ಮಗಳ ವ್ಯಾಪ್ತಿಯಲ್ಲಿ ಸುದ್ದಿಗಳನ್ನು ಮಾಡದೇ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ.
ಮಾಧ್ಯಮಗಳು ಚುನಾವಣಾ ಸಮಿತಿ ಜೊತೆ ಸಹಕರಿಸಬೇಕು.ನಮ್ಮ ಮತ್ತು ನಿಮ್ಮ ಉದ್ದೇಶ ಒಂದೇ- ಜಿಲ್ಲೆಗೆ, ಜನರಿಗೆ ಅನುಕೂಲವಾಗಬೇಕು.
* ಚುನಾವಣಾ ಬಹಿಷ್ಕಾರದಂತಹ ಕೆಲ ಪ್ರಯತ್ನಗಳು ನಡೆದಿವೆ. ತೀರ್ಥಹಳ್ಳಿ ಬಳಿಯ ಗ್ರಾಮಸ್ಥರ ಜೊತೆ ಮಾತಾಡಿದ್ದೇವೆ. ಹೊಸನಗರದ ಬಳಿಯೂ ಇಂಥ ಬಹಿಷ್ಕಾರದ ಮಾತು ತಿಳಿದು ಬಂದಿದೆ.
ತೀರಾ ಮೂಲಭೂತ ಸಮಸ್ಯೆಗಳು ಇದ್ದೇ ಇವೆ. ಜನರ ಜೊತೆ ಮಾತಾಡಿ ಬಗೆಹರಿಸುತ್ತಿದ್ದೇವೆ
* ನಕ್ಸಲ್ ಸಮಸ್ಯೆ ಚುನಾವಣೆ ಮೇಲೆ ಯಾವುದೇ ಸಮಸ್ಯೆ ಬೀರಲ್ಲ. ಕಾನೂನು ಸುರಕ್ಷತೆ ದೃಷ್ಟಿಯಿಂದ ಮತಗಟ್ಟೆಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದೇವೆ.
* ಕಡಿಮೆ ಮತದಾನದ ಕೇಂದ್ರಗಳಲ್ಲಿ ಹೆಚ್ಚಿನ ಮತದಾನಕ್ಕೆ ಸ್ವೀಪ್ ಕಡೆಯಿಂದ ಕೆಲಸ ನಡೆಯುತ್ತಿದೆ. ಯುವ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡ್ತಿದ್ದೇವೆ. ಜಿಲ್ಲಾ ಐಕಾನ್ ಗಳನ್ನು ಮುಂದಿಟ್ಟುಕೊಂಡು ಕೆಲಸ ನಡೆಯುತ್ತಿದೆ.
* ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಶಿಸ್ತುಬದ್ಧ ಕೆಲಸ
* 15 ಪ್ರಕರಣಗಳಲ್ಲಿ ಗಡಿಪಾರಿನ ಪ್ರಕ್ರಿಯೆ ನಡೆ
-17.50 ಲಕ್ಷ ಹೊಸ ಮತದಾರರು. ಇದು ಶಿವಮೊಗ್ಗ ಜಿಲ್ಲೆಯಲ್ಲೇ ದಾಖಲೆ. ಪ್ರಥಮ ಬಾರಿ ವೋಟ್ ಮಾಡುವ ಸಂಭ್ರಮ ಅವರು ಅನುಭವಿಸಲಿದ್ದಾರೆ.
– ಮಂಗನ ಕಾಯಿಲೆ ಬಾಧಿತ ಪ್ರದೇಶಗಳಲ್ಲೂ ವಿಶೇಷ ಕಾಳಜಿ ಮೂಲಕ ಮತದಾನಕ್ಕೆ ಕ್ರಮ.
– ವೃದ್ಧರಿಗಷ್ಟೇ ಅಲ್ಲ ರೋಗ ಪೀಡಿತರಿಗೂ ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆ ಮುಂದೆ ಚಾಲ್ತಿಗೆ ಬರಬಹುದು. ಸದ್ಯಕ್ಕೆ ಮತಗಟ್ಟೆಗೇ ಬಂದು ಮತಹಾಕಬೇಕಿದೆ.
– ಬರ ನಿರ್ವಹಣೆ 380 ಹಳ್ಳಿಗಳಲ್ಲಿ ಯೋಜನೆ ರೂಪಿಸಲಾಗಿದೆ. ಸುಮಾರು 14 ಹಳ್ಳಿಗಳಲ್ಲಿ ತೀವ್ರ ಬರ ಇದೆ. ನೀರು ಪೋಲು ಮಾಡದಂತೆ ಜಾಗೃತಿ ಮೂಡಿಸಲಾಗುವುದು.
– 60 ಕ್ಕಿಂತ ಹೆಚ್ಚಿನ ಕೇಸ್ ಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕಾರಣಕ್ಕಾಗಿ ದಾಖಲಾಗಿವೆ. ಧರ್ಮ ಆಧಾರಿತ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ದಾಖಲಾಗಿವೆ.
– ಆಂಬುಲೆನ್ಸ್ ಗಳಲ್ಲಿ ಚುನಾವಣಾ ಹಣ ಸಾಗಾಟ. ಈ ಬಗ್ಗೆ ಸೂಕ್ತ ಎಚ್ಚರಿಕೆ ಸಿಬ್ಬಂದಿಗಳಿಗೆ ನೀಡಿದೆ. 17 ಕೋಟಿಯಷ್ಟು ಹಣ, ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
– ಮೇಜರ್ ಚಾಲೆಂಜಸ್ ಏನೂ ಇಲ್ಲ.ಸಫಿಷಿಯಂಟ್ ವ್ಯವಸ್ಥೆ ಇದೆ. ಬರದ ಮಧ್ಯೆ ಚುನಾವಣೆ ಎನ್ನುವುದೇ ಚಾಲೆಂಜಿಂಗ್. ಸೋಷಿಯಲ್ ಮೀಡಿಯಾ ಜಾಗೃತ ಸ್ಥಿತಿಯಲ್ಲಿ ಕೆಲಸ ಮಾಡಬೇಕಿದೆ.
– ಮಹಿಳೆಯರಿಗಾಗಿ ಸಖಿ ಮತಕೇಂದ್ರಗಳು ಗಮನ ಸೆಳೆಯುವಂತಿವೆ. ಮಹಿಳೆಯರೇ ಹೆಚ್ಚಿದ್ದಾರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ…
ಅಧ್ಯಕ್ಷತೆ -ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ರವರ ಮಾತು;
ಒಳ್ಳೆಯ ಹೆಸರು ಮಾಡಿರುವ ಜಿಲ್ಲಾಧಿಕಾರಿ ಶಿವಮೊಗ್ಗದಲ್ಲೂ ಜನಮಾನಸದಲ್ಲಿ ಉಳಿಯಬಲ್ಲ ವ್ಯಕ್ತಿತ್ವ.
ಉಪಸ್ಥಿತಿ; ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಪ್ರೆಸ್ ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ
ನಿರೂಪಣೆ; ಹೊನ್ನಾಳಿ ಚಂದ್ರಶೇಖರ್