ಅಂಬೇಡ್ಕರ್ ಜಯಂತಿಯಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಏನಂದ್ರು?

ಅಂಬೇಡ್ಕರ್ ಜಯಂತಿಯಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಏನಂದ್ರು?

ಸಾಗರ ತಾಲೂಕಿನ ಕಾರೆಹೊಂಡ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಕಾರೆಹೊಂಡ ಗ್ರಾಮಕ್ಕೆ ತೆರಳಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು ಈ ಸಂಧರ್ಭದಲ್ಲಿ ಗ್ರಾಮದ ಮುಖಂಡರಾದ ಮಂಜುನಾಥ್, ಬಸವರಾಜ್, ನಾಗರಾಜ್, ಸುರೇಶ್, ಶಾಂತಮ್ಮ, ಸೀಮಾ ಪರಶುರಾಮ್ ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.

*ಹೇಮಾ ರವಿ;
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿಜೆಪಿ ಪಕ್ಷದ ಓಬಿಸಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಹೇಮಾ ರವಿ ಮಾತನಾಡಿ ಕೆ.ಎಸ್.ಈಶ್ವರಪ್ಪರವರು ಹಿಂದುಳಿದ ವರ್ಗಗಳ ನಾಯಕ ಅವರನ್ನು ಭೇಟಿಯಾಗಲು ಯಾವುದೇ ಮಧ್ಯವರ್ತಿಗಳ ಅವಶ್ಯಕತೆ ಇಲ್ಲ. ಸುಲಭವಾಗಿ ಸಿಗುತ್ತಾರೆ ಯಾರೆ ಬಂದರು ಆತ್ಮೀಯವಾಗಿ ಕಾಣುತ್ತಾರೆ. ಎಲ್ಲಾ ಕಷ್ಟ ಸಮಸ್ಯೆಗಳಿಗೆ ಜೊತೆ ನಿಲ್ಲುವ ಈಶ್ವರಪ್ಪರವರು ಈಗ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ರಾಜ್ಯದ ಯಾವ ಲೋಕಸಭಾ ಅಭ್ಯರ್ಥಿಗಳ ಪೈಕಿ ಈಶ್ವರಪ್ಪ ಅತಿ ಉತ್ತಮವಾದ ವ್ಯಕ್ತಿತ್ವ ಹೊಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷದ ಬಗ್ಗೆ ಜನ ಸಾಮನ್ಯರಿಗೆ ಗೊತ್ತಿಲ್ಲದ ಸಂಧರ್ಭದಲ್ಲಿ ಪಕ್ಷವನ್ನು ಕಟ್ಟಿದ್ದಾರೆ. ಪಕ್ಷದಲ್ಲಿ ಇವರನ್ನು ಕಡೆಗಣಿಸಿದ ಕಾರಣ ನೋವಿನಿಂದ ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದಾರೆ. ಮೋದಿಯವರ ಸಿದ್ಧಾಂತ ಪರವಾಗಿ ಹೋರಾಟ ಮಾಡುತ್ತಿರುವ ಕೆ.ಎಸ್.ಈಶ್ವರಪ್ಪರವರನ್ನು ಈ ಬಾರಿ ಚುನಾವಣೆಯಲ್ಲಿ ನೀವೆಲ್ಲಾ ಗೆಲ್ಲಿಸಬೇಕೆಂದು ಮನವಿ ಮಾಡುತ್ತೇನೆ.

*
ಮೊದಲ ಬಾರಿಗೆ ಈ ಗ್ರಾಮಕ್ಕೆ ಬಂದಿದ್ದೇನೆ ನನ್ನನ್ನು ಇಷ್ಟು ಪ್ರೀತಿಯಿಂದ ಸ್ವಾಗತಿಸಿದ ನಿಮಗೆ ಧನ್ಯವಾದಗಳು.
ಇಂದು ಪ್ರಪಂಚಾದ್ಯಂತ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತಿದೆ. ಹಿಂದುಳಿದವರಿಗೆ ದಲಿತರ ಪರವಾಗಿ ನ್ಯಾಯಕ್ಕಾಗಿ ಹೋರಾಟ ಮಾಡಿದವರ ಪೈಕಿ ಮೊದಲಿಗರು ಅಂಬೇಡ್ಕರ್.
ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕೆಂಬ ಒತ್ತಾಸೆ ಆದರೆ ಸ್ವತಂತ್ರ ಬಂದು 75ವರ್ಷವಾಗಿದೆ ಎಷ್ಟು ಜನಕ್ಕೆ ಶಿಕ್ಷಣ ಸಿಕ್ಕಿದೆ. ಶಿಕ್ಷಣಕ್ಕಾಗಿ ಜನರೆಲ್ಲಾ ಒಗ್ಗಟ್ಟಾಗಿ ಸಂಘಟಕರಾಗಬೇಕೆಂದು ಬಯಸಿದ್ದರು ಶಿಕ್ಷಣಕ್ಕಾಗಿ ಸಂಘಟನೆ ಅನಿವಾರ್ಯ ಆದರೆ ಸಂಘಟನೆ ಆಗಿಲ್ಲ. ಶಿಕ್ಷಣ ಸಂಘಟನೆಯನ್ನು ಸಂಘರ್ಷ ಮಾಡಿ ತೆಗೆದುಕೊಳ್ಳಬೇಕಾಗಿ ಬಂದಿದೆ. ಶಿಕ್ಷಣ ಸಂಘಟನೆ ಸಂಘರ್ಷ ಅಂಶಗಳು ಅಂಬೇಡ್ಕರ್ ನಿರಂತರವಾಗಿ ಹೇಳುತ್ತಿದ್ದರು.
ಅಂಬೇಡ್ಕರ್ ಜಯಂತಿ ದಿನದಂದು ನಿಮ್ಮನ್ನೆಲ್ಲಾ ಭೇಟಿ ಮಾಡಿದ್ದು ನನ್ನ ಪುಣ್ಣ. ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಕಾರ್ಯ ಇಂದಿನಿಂದ ಆರಂಭವಾಗಿದೆ ಕಾರ್ಯಕ್ರಮದ ಉದ್ಘಾಟನೆ ಮುಗಿಸಿ ಬರುವುದರಲ್ಲಿ ತಡವಾಗಿರುವುದರಿಂದ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ.
ಅಂಬೇಡ್ಕರ್ ಜಯಂತಿ ದಿನದಂದು ರಾಜಕಾರಣ ಮತನಾಡಲು ಇಷ್ಟವಿಲ್ಲ ಆದರೆ ಮಾತನಾಡುವುದು ಅನಿವಾರ್ಯವಾಗಿದೆ. ನಲವತ್ತು ವರ್ಷಗಳಿಂದ ಬಿಜೆಪಿ ಪಕ್ಷಕ್ಕೆ ಕೆಲಸ ಮಾಡಿದ್ದೇನೆ ಪಕ್ಷದಲ್ಲಿ ಈ ಬಾರಿ ಲೋಕ ಸಭಾ ಚುನಾವಣೆಯಲ್ಲಿ ಅವರಿಗೆ ಬೇಕಾದವರಿಗೆ ಟಿಕೆಟ್ ಕೊಡಲಾಗಿದೆ. ಈ ದೇಶದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷ ಹಾಗು ದೇಶ ರಾಹುಲ್ ಗಾಂಧಿ ಸೋನಿಯಾ ಗಾಂಧಿಯವರ ಕುಟುಂಬದ‌ ಹಿಡಿತದಲ್ಲಿದೆ ಇದನ್ನು ಮುಕ್ತ ಮಾಡಬೇಕೆಂದು ಹೇಳುತ್ತಿದ್ದರು. ರಾಜ್ಯದಲ್ಲಿ ಯಡಿಯೂರಪ್ಪ, ಅವರ ಮಗ ರಾಘವೇಂದ್ರ, ಮತ್ತೊಬ್ಬ ಮಗ ವಿಜಯೇಂದ್ರ ಒಂದು ಕುಟುಂಬದ ಕೈನಲ್ಲಿ ಬಿಜೆಪಿ ಇದೆ. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಪ್ಪ ಮಕ್ಕಳ ಕೈನಿಂದ ಮುಕ್ತ ಮಾಡಬೇಕಿದೆ.
ದಲಿತರು ದಲಿತರಾಗೆ ಇದ್ದಾರೆ ಹಿಂದುಳಿದವರು ಕೂಡ ಹಿಂದೆ ಇದ್ದಾರೆ ಮುಂದುವರೆದವರು ಮುಂದೆ ಇದ್ದಾರೆ ಇಡೀ ಹಿಂದೂ ಸಮಾಜ ಒಟ್ಟಿಗೆ ಇರಬೇಕೆಂಬುದು ಭಾರತೀಯ ಜನತಾ ಪಕ್ಷದ ಇಚ್ಛೆಯಾಗಿದೆ ಎಲ್ಲರಿಗೂ ನ್ಯಾಯ ಸಿಗಬೇಕೆಂದು ಅಂಬೇಡ್ಕರ್ ರವರ ಬಯಕೆಯಂತೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ ಗೆದ್ದ ನಂತರವೂ ಇದೇ ಅಂಶಗಳನ್ನು ಇಟ್ಟುಕೊಂಡು ಹೋರಾಟ ಮಾಡುತ್ತೇನೆ. ಏ.24 ನನ್ನ ಚಿಹ್ನೆ ಏನೆಂದು ಗೊತ್ತಾಗಲಿದೆ ನೀವೆಲ್ಲಾ ಅದೇ ಚಿಹ್ನೆಗೆ ಮತ ನೀಡಿ ಸಹಕಾರ ನೀಡಿ ಎಂದು ಮನವಿ ಮಾಡುತ್ತೇನೆ.