ದೇವೇಗೌಡರ ಜನ್ಮದಿನ ಆಚರಿಸಿ ಸಂಭ್ರಮಿಸಿದ ಶಿವಮೊಗ್ಗ ಜೆಡಿಎಸ್
ದೇವೇಗೌಡರ ಜನ್ಮದಿನ ಆಚರಿಸಿ ಸಂಭ್ರಮಿಸಿದ ಶಿವಮೊಗ್ಗ ಜೆಡಿಎಸ್
ಭಾರತದ 11ನೇ ಪ್ರಧಾನಿ ಜಾತ್ಯತೀತ ಜನತಾದಳ ಪಕ್ಷದ ರಾಷ್ಟ್ರಧ್ಯಕ್ಷರಾದ ಹೆಚ್.ಡಿ ದೇವೇಗೌಡ ರವರ 92ನೇ ಹುಟ್ಟುಹಬ್ಬದ ಅಂಗವಾಗಿ ನಗರದ ರವೀಂದ್ರ ನಗರದ ಶ್ರೀ ಗಣಪತಿ ದೇವಸ್ಥಾನದಲ್ಲಿ ನಾಗರಾಧ್ಯಕ್ಷ ದೀಪಕ್ ಸಿಂಗ್ ರವರ ನೇತೃತ್ವದಲ್ಲಿ ಶಿವಮೊಗ್ಗ ನಗರ ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಸನ್ಮಾನ್ಯ ದೇವೇಗೌಡ್ರ ಹೆಚ್ಚಿನ ಅರೋಗ್ಯಕ್ಕಾಗಿ ಪ್ರಾರ್ಥಿಸಿ ಭಕ್ತಾದಿಗಳಿಗೆ ಸಿಹಿ ವಿತರಣೆ ಮಾಡಿದರು.
ಇದೆ ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಾ ಕಡಿದಾಳು ಗೋಪಾಲ್, ಮಾಜಿ ಶಾಸಕರು ರಾಜ್ಯ ಜೆಡಿಎಸ್ ಉಪಾಧ್ಯಕ್ಷರು ಆದ ಕೆ ಬಿ ಪ್ರಸನ್ನ ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಸಿದ್ದಪ್ಪ, ಪ್ರಮುಖರಾದ ಸಂಗಯ್ಯ, ಕೃಷ್ಣಪ್ಪ ಗೋವಿಂದ್ ದಯಾನಂದ್,ಚಂದ್ರು, ಶ್ಯಾಮ್ ಸಿದ್ದೇಶ್, ಪ್ರಶಾಂತ್ ಮಹಿಳಾ ಮುಖಂಡರಾದ ಜ್ಯೋತಿ, ಲಕ್ಷ್ಮಿ ನರಸಿಂಹ ಹಾಗೂ ಮತ್ತಿತರರು ಉಪಸ್ಥಿತರಿದ್ದರು.