ಅಕ್ರಮ ಬಡ್ಡಿ ದಂಧೆಕೋರರೇ ಹುಷಾರ್! ಬಡ್ಡಿ ಮಕ್ಕಳ ಚಡ್ಡಿ ಒದ್ದೆ ಮಾಡಲು ಸಿದ್ಧವಾಗಿದೆ ಪೊಲೀಸ್ ಇಲಾಖೆ! ಬಡ್ಡಿಕೋರರು ತೊಂದರೆ ಕೊಡುತ್ತಿದ್ದಾರಾ? ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ಕೊಡಿ ಇಲ್ಲವೇ 112 ನಂಬರಿಗೆ ಫೋನ್ ಮಾಡಿ ದೂರು ಕೊಡಿ

ಅಕ್ರಮ ಬಡ್ಡಿ ದಂಧೆಕೋರರೇ ಹುಷಾರ್!

ಬಡ್ಡಿ ಮಕ್ಕಳ ಚಡ್ಡಿ ಒದ್ದೆ ಮಾಡಲು ಸಿದ್ಧವಾಗಿದೆ ಪೊಲೀಸ್ ಇಲಾಖೆ!

ಬಡ್ಡಿಕೋರರು ತೊಂದರೆ ಕೊಡುತ್ತಿದ್ದಾರಾ? ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ಕೊಡಿ ಇಲ್ಲವೇ 112 ನಂಬರಿಗೆ ಫೋನ್ ಮಾಡಿ ದೂರು ಕೊಡಿ

ಅಕ್ರಮ ಬಡ್ಡಿ ವ್ಯವಹಾರ ಮಾಡುವವರ ವಿರುದ್ಧ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮತ್ತವರ ಪೊಲೀಸ್ ಇಲಾಖೆ ಯುದ್ಧ ಸಾರಿದ್ದು, ಅಕ್ರಮ ಬಡ್ಡಿ ತಿನ್ನುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಜೈಲಿಗಟ್ಟಲಾರಂಭಿಸಿದೆ.

ಈಗಾಗಲೇ ಅಕ್ರಮ ಬಡ್ಡಿ ವ್ಯವಹಾರಸ್ಥರಿಂದ ತೊಂದರೆಗೊಳಗಾಗಿರುವವರಿಗಾಗಿ ಸಾರ್ವಜನಿಕ ದೂರು ಕೇಂದ್ರವನ್ನು ಆರಂಭಿಸಿದೆ.ಹತ್ತಿರದ ಪೊಲೀಸ್ ಠಾಣೆಗೆ ಅಥವಾ 112 ಸಹಾಯವಾಣಿಗೆ ಮಾಹಿತಿ ಅಥವಾ ದೂರು ನೀಡಲು ಪೊಲೀಸ್ ಇಲಾಖೆ ವ್ಯವಸ್ಥೆ ಮಾಡಿದೆ.

ಈಗಾಗಲೇ, ಅಕ್ರಮ ಬಡ್ಡಿ ವ್ಯವಹಾರದ ಕಾರಣದಿಂದಾಗಿ ತೊಂದರೆಗೊಳಗಾದವರು ದೂರುಗಳನ್ನು ಪೊಲೀಸ್ ಇಲಾಖೆಗೆ ನೀಡುತ್ತಿದ್ದಾರೆ. ಗೊಂದಿ ಚಟ್ನಳ್ಳಿಯ ವಾಸಿ ರಂಗನಾಥ್ ಎಂಬುವವರು ಮನೆ ನಿರ್ಮಾಣಕ್ಕಾಗಿ ಪ್ರತಿ ತಿಂಗಳು 3% ಬಡ್ಡಿಗೆ ಅನಿಲ, ರಾಜಣ್ಣ, ಪ್ರಭಣ್ಣ, ವಿಜಯೇಂದ್ರಣ್ಣ, ಪ್ರದೀಪ ಮತ್ತು ಹಾಲೇಶಪ್ಪರಿಂದ ಹಣ ಪಡೆದಿದ್ದರು.
ಸಕಾಲದಲ್ಲಿ ಸಾಲ ಮತ್ತು ಬಡ್ಡಿ ಹಣ ನೀಡಲು ಸಾಧ್ಯವಾಗದಿದ್ದಾಗ ರಂಗನಾಥ್ ವಿರುದ್ಧ ಇವರೆಲ್ಲ ಗಲಾಟೆ ಮಾಡಿದ್ದರು. ಈ ಸಂಬಂಧ ರಂಗನಾಥ್ ದೂರು ನೀಡಿದ್ದರು.

ಎಸ್ ಪಿ ಮಿಥುನ್ ಕುಮಾರ್, ಅಡಿಷನಲ್ ಎಸ್ ಪಿ ಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಎ.ಜಿ.ಕಾರಿಯಪ್ಪರವರ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಸುರೇಶ್ ರವರ ಮೇಲ್ವಿಚಾರಣೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಸಿಪಿಐ ಸತ್ಯನಾರಾಯಣ ನೇತೃತ್ವದ ಪೊಲೀಸರು ಅನಿಲ, ರಾಜಣ್ಣ, ಪ್ರಭಣ್ಣ, ವಿಜಯೇಂದ್ರಣ್ಣ, ಪ್ರದೀಪ, ಹಾಲೇಶಪ್ಪರ ವಿರುದ್ಧ ಪ್ರಕರಣ ದಾಖಲಿಸಿ ದಾಳಿ ಮಾಡಿದ್ದಾರೆ. ಒಟ್ಟು 217 ಸಹಿ ಇರುವ ಖಾಲಿ ಚೆಕ್ ಗಳು, ಪ್ರಾಮಿಸರಿ ನೋಟ್ ಗಳು, ನಿವೇಶನ, ವಾಹನ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ವೆಂಕಟೇಶ ನಗರದ ಅಕ್ರಮ ಬಡ್ಡಿ ದಂಧೆಕೋರ ವೆಂಕಟೇಶ್ ವಿರುದ್ಧ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶೇ.5% ಬಡ್ಡಿಯಂತೆ ಸಾಲ ಪಡೆದಿದ್ದ ಮಹಿಳೆಯಿಂದ ಮನೆಯ ದಾಖಲೆ ಪತ್ರ, ಸಹಿ ಹಾಕಿದ ಖಾಲಿ ಚೆಕ್ಕುಗಳನ್ನು ವೆಂಕಟೇಶ್ ಪಡೆದುಕೊಂಡಿದ್ದ.

ಬಡ್ಡಿ ಹಣ ಕೊಡು, ಇಲ್ಲದಿದ್ದರೆ ಸುಮ್ಮನೆ ಬಿಡುವುದಿಲ್ಲ. ಕೊಟ್ಟಿರೋ ಚೆಕ್ಕುಗಳನ್ನೇ ಇಟ್ಟುಕೊಂಡು ಹೆಚ್ಚಿನ ಹಣಕ್ಕಾಗಿ ಕೋರ್ಟಿನಲ್ಲಿ ಕೇಸ್ ಹಾಕ್ತೀನಿ ಎಂದು ಬೆದರಿಸುತ್ತಿದ್ದ.

ಈ ಹಿನ್ನೆಲೆಯಲ್ಲಿ ಮಹಿಳೆ ದೂರು ನೀಡಿದ್ದರು. ಜಯನಗರ ಸಿಪಿಐ ಸಿದ್ದೇಗೌಡರು ತಮ್ಮ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ 29,750₹ ನಗದು ಹಣ, 13 ಖಾಲಿ ಚೆಕ್ಕುಗಳು, ಹಣ ತುಂಬಿದ ಚೆಕ್, ಸಹಿ ಮಾಡಿದ ಸ್ಟ್ಯಾಂಪ್ ಪೇಪರ್ ಗಳು, ನಿವೇಶನ ದಾಖಲಾತಿಗಳು, ಬಡ್ಡಿ ವ್ಯವಹಾರ ನಮೂದಾಗಿರುವ ದಾಖಲೆ ಪುಸ್ತಕಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.

ಈಗಲಾದರೂ ಶಿವಮೊಗ್ಗ ಅಕ್ರಮ ಬಡ್ಡಿ ದಂಧೆಕೋರರಿಂದ ಮುಕ್ತವಾಗುತ್ತಾ?