ದೇವೇಗೌಡರ ಪತ್ರ

ದೇವೇಗೌಡರ ಪತ್ರ

ವಿಕೃತ ಸಮೂಹ ಲೈಂಗಿಕ ದೌರ್ಜನ್ಯದ ವಿಡಿಯೋಗಳು ಹೊರಬಂದು ಒಂದು ತಿಂಗಳಾದ ಮೇಲೆ ಮಾಜಿ ಪ್ರಧಾನಿ ದೇವೇಗೌಡರು ಮೊಮ್ಮಗ ಪ್ರಜ್ವಲ್ ರೇವಣ್ಣನಿಗೆ ಎಚ್ಚರಿಕೆ ಎಂಬ ಎರಡು ಪುಟದ ಪತ್ರ ಬರೆದಿದ್ದಾರೆ.

ಇದರಲ್ಲಿ ಎರಡನೇ ಪುಟದ ಎರಡು ಪ್ಯಾರಾಗಳಷ್ಟೇ ಈಗ ಮುಖ್ಯವಾದದ್ದು. ಇಷ್ಟನ್ನು ಮೂರು ವಾರ ಮೊದಲೇ ಬರೆದಿದ್ದರೆ ಮೊದಲ ಮೂರು ಪ್ಯಾರಾ ಬರೆಯುವ ಕಷ್ಟವೇ ಇರುತ್ತಿರಲಿಲ್ಲ.

ಮೊದಲ ಪುಟದ ಸಾಲುಗಳು ಯಥಾಪ್ರಕಾರ ತಮ್ಮ ಪರವಾಗಿ ಅನುಕಂಪ ಗಿಟ್ಟಿಸಲು ಬರೆದಂತಿದೆ.
ಎಲ್ಲರ ರಾಜಕೀಯದಾಟಗಳನ್ನು ಮಹಾಭಾರತದ ಕಾಲದಿಂದಲೂ ನೋಡುತ್ತಲೇ ಬಂದಿರುವ ನಾವು ಇವುಗಳನ್ನು ಸುಲಭವಾಗಿ ನಂಬಲು ಸಾಧ್ಯವಿಲ್ಲ. ಅದರಲ್ಲೂ ಇತ್ತೀಚೆಗೆ ಮೋದಿಯ ಆಪ್ತರಾಗಿರುವವರ ಕಣ್ಣೀರಿನ ಬಗ್ಗೆ ನಮಗೆ ತುಸು ಹೆಚ್ಚೇ ಎಚ್ಚರ ಇರಬೇಕು.

ಜನಚಳವಳಿಗಳು ಹೋರಾಟವನ್ನು ತೀವ್ರಗೊಳಿಸಿರುವ ಬೆನ್ನಲ್ಲಿ ಬಂದಿರುವ ಈ ಪತ್ರ ಪತ್ರಿಕೆಗಳಲ್ಲಿ ಪ್ರಚಾರಕ್ಕೆ ಸೀಮಿತವಾಗುತ್ತದೆ. ಇದನ್ನು ಪ್ರಜ್ವಲ್ ರೇವಣ್ಣ ಇರುವ ಅಡ್ರೆಸ್ ಗೆ ಕಳಿಸಲಾಗಿದೆಯಾ? ಅವನನ್ನು ಉದ್ದೇಶಿಸಿ ಬರೆಯಲಾಗಿದೆಯಾ? ಇಲ್ಲ. ನಮ್ಮ ನಿಮ್ಮೆಲ್ಲರಿಗಾಗಿ ಬರೆದ ಪತ್ರವಷ್ಟೇ.

ಇದರ ಬದಲು ಮಾಜಿ ಪ್ರಧಾನಿಗಳು ಹಾಲಿ ಪ್ರಧಾನಿಗೆ ಪತ್ರ ಬರೆದು ಸಂಸತ್ ಸದಸ್ಯನಾದ ಪ್ರಜ್ವಲ್ ರೇವಣ್ಣನನ್ನು ಕರೆತರಲು ಎಲ್ಲ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಬೇಕಿತ್ತು. ಈಗಲೂ ಕಾಲ ಮೀರಿಲ್ಲ. ಬರೆಯಬಹುದು.

– ಸತ್ಯ.ಎಸ್