ಅದಿಶಕ್ತಿ ಸಮೂಹ ಸಂಸ್ಥೆಯಿಂದ ಭಾವಸಾರ ಕ್ಷತ್ರಿಯ ಮಹಾಜನ ಸಮಾಜಕ್ಕೆ ಮೋಕ್ಷ ವಾಹಿನಿ ವಾಹನ ಹಸ್ತಾಂತರ*

*ಅದಿಶಕ್ತಿ ಸಮೂಹ ಸಂಸ್ಥೆಯಿಂದ ಭಾವಸಾರ ಕ್ಷತ್ರಿಯ ಮಹಾಜನ ಸಮಾಜಕ್ಕೆ ಮೋಕ್ಷ ವಾಹಿನಿ ವಾಹನ ಹಸ್ತಾಂತರ*

ಶಿವಮೊಗ್ಗ : ವ್ಯಾಪಾರದೊಂದಿಗೆ ಸಮಾಜ ಸೇವೆ ಮಾಡಬೇಕೆಂಬುದು ನಮ್ಮ ಸಂಸ್ಥೆಯ ಉದ್ದೇಶ. ರಾಜ್ಯದ ಹಲವು ಕಡೆ ಶಾಖೆಗಳನ್ನು ತೆರೆದು ಇಲ್ಲಿಯವರೆಗೆ ೧೦೦೦ ಉದ್ಯೋಗಗಳನ್ನು ಸೃಷ್ಟಿ ಮಾಡಿದ್ದೇವೆ. ಇವರನ್ನು ಅವಲಂಬಿಸಿದ ಜನರನ್ನು ಲೆಕ್ಕ ಹಾಕಿದರೆ ೫೦೦೦ ಸಾವಿರದಷ್ಟು ಜನ ನಮ್ಮ ಸಂಸ್ಥೆಯಿಂದಾಗಿ ಬದುಕು ಸಾಗಿಸುತ್ತಿದ್ದಾರೆ ಎಂದು ಅದಿಶಕ್ತಿ ಸಮೂಹ ಸಮಸ್ಥೆ ಚೇರ್ ಮನ್ ನಾರಾಯಣ ರಾವ್ ತಾತುಸ್ಕರ್ ಹೇಳಿದರು.

ನಗರದ ಶಂಕರಮಠ ರಸ್ತೆಯಲ್ಲಿರುವ ಅಧಿಶಕ್ತಿ ಟಾಟಾ ಮೋಟರ್ಸ್ ನ ಸಭಾಂಗಣದಲ್ಲಿ ತಮ್ಮ ಸಂಸ್ಥೆವತಿಯಿಂದ ಭಾವಸಾರ ಕ್ಷತ್ರಿಯ ಮಹಾಜನ ಸಮಾಜಕ್ಕೆಕೊಡುಗೆಯಾಗಿ ಮೋಕ್ಷವಾಹಿನಿ (ಡಿಸ್ಟ್ರಿಬುಶನ್ ಅಫ್ ಹಾರ್ಸ್ ವ್ಯಾನ್) ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಸ್ಥೆಯ ಸಮೂಹ ಘಟಕಗಳನ್ನು ವಿಸ್ತರಿಸಿ ಉದ್ಯೋಗ ಸೃಷ್ಟಿಸುವ ಜೊತೆಗೆ ಈ ರೀತಿಯ ಸಮಾಜ ಸೇವೆಯು ನಮ್ಮ ಕುಟುಂಬ ಸದಸ್ಯರಿಗೆ ಖುಷಿ ಕೊಡುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ಮನುಷ್ಯನ ಯಾಂತ್ರಿಕ ಬದುಕು ಶವ ಸಂಸ್ಕಾರ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಸಮಯವಿಲ್ಲದಂತಾಗಿದ್ದು ದುರದೃಷ್ಟಕರ, ಪಟ್ಟಣದ ಪ್ರದೇಶದಲ್ಲಂತೂ ಇಂತಹವರ ಪ್ರಮಾಣ ಇನ್ನೂ ಹೆಚ್ಚಾಗಿದ್ದು ಹೀಗಾಗಿ ಮೃತದೇಹವನ್ನು ಸಾಗಿಸಲು ಮೋಕ್ಷ ವಾಹಿನಿ ಎಂಬ ವಾಹನವನ್ನು ಸಾರ್ವಜನಿಕ ಸೇವೆಗೆ ಅರ್ಪಿಸಲಾಗುತ್ತಿದೆ ಮೃತರಾದ ಬಳಿಕ ನಮ್ಮ ಶವ ಸಂಸ್ಕಾರ ಹೀಗೆ ಆಗಬೇಕೆಂಬ ಬಯಕೆ ಯಾರಿಗೂ ಇರುವುದಿಲ್ಲ, ಆದರೆ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ಅಂಗ ಸಂಸ್ಥೆಗಳಾದ ಯುವಕ ಮಂಡಳಿ ಹಾಗೂ ಭಾವಸಾರ ವಿಷನ್ ಇಂಡಿಯಾದಿಂದ ಒಲೆಗಳ ನಿರ್ಮಾಣವಾಗಿದೆ. ಇದೀಗ ಮೃತ ದೇಹವನ್ನು ಮೆರವಣಿಗೆ ಮೂಲಕ ಸಾಗಿಸಲು ಮೋಕ್ಷ ವಾಹಿನಿ ಎಂಬ ಸುಂದರ ವಾಹನವನ್ನು ಅರ್ಪಿಸಲಾಗಿದೆ ಎಂದರು.

ಈ ವೇಳೆ ಸಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ಎನ್.ತಾತುಸ್ಕರ್ ಮಾತನಾಡಿ, ಸಮಾಜ ಸೇವೆಯ ಭಾಗವಾಗಿ ನಮ್ಮ ಅಧಿಶಕ್ತಿ ಸಮೂಹ ಸಂಸ್ಥೆ ವತಿಯಿಂದ ೨೧ ಲಕ್ಷ ರೂ. ವೆಚ್ಚದ ಮೋಕ್ಷ ವಾಹಿನಿಯೆಂಬ ಮೃತದೇಹವನ್ನು ಸಾಗಿಸುವ ವಾಹನವನ್ನು ಇಂದು ಲೋಕಾರ್ಪಣೆ ಮಾಡುತ್ತಿದ್ದೇವೆ. ಈ ಹಿಂದೆಯು ನಮ್ಮ ಸಂಸ್ಥೆಯು ಕೃತಕ ಕಾಲು ಜೋಡಣೆ, ಉಚಿತ ಹೊಲಿಗೆ ಯಂತ್ರಗಳ ವಿತರಣೆಯಂತಹ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಇದಕ್ಕೆನಮ್ಮ ವ್ಯಾಪಾರ ವಹಿವಾಟಿನ ಕರ್ಮಭೂಮಿಯಾದ ಶಿವಮೊಗ್ಗ ನಗರಕ್ಕೆ ಇದನ್ನು ಸಮರ್ಪಿಸುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತದೆ. ಕೇವಲ ೧೭ ವರ್ಷದ ಹಿಂದೆ ೨೫ ಉದ್ಯೋಗಿಗಳೊಂದಿಗೆ ಪ್ರಾರಂಭವಾದ ನಮ್ಮ ಸಂಸ್ಥೆಯು ಇಂದು ೧೦೦೦ ಉದ್ಯೋಗ ಸೃಷ್ಟಿಸುವುದರ ಜೊತೆಗೆ ೫೦೦೦ ಜನರ ಬದುಕಿಗೆ ಆಸರೆಯಾಗಿರುವುದು ನಮ್ಮ ಸಂಸ್ಥೆಯ ಸಮಾಜ ಸೇವೆ ಒಂದು ಭಾಗ. ತಾನಿಷ್ಕ್ ಜ್ಯುಯೆಲ್ಲರಿಯಂತಹ ಕಂಪೆನಿಗಳನ್ನು ಸ್ಥಾಪಿಸುವ ಮಟ್ಟಕ್ಕೆ ನಮ್ಮ ಪ್ರಯಾಣ ಮುಂದುವರಿದಿದೆ. ಇದಕ್ಕೆಲ್ಲಾ ಸಮಾಜವು ಕಾರಣವಾಗಿದೆ. ಆ ಸಮಾಜಕ್ಕೆ ಮೋಕ್ಷ ವಾಹಿನಿ ವಾಹನ ಸಮರ್ಪಣೆ ಒಂದು ಚಿಕ್ಕ ಸೇವೆ ಎಂದು ನುಡಿದರು.

ಅದಿಶಕ್ತಿ ಸಂಸ್ಥೆವತಿಯಿಂದ ಮೋಕ್ಷವಾಹಿನಿ ವಾಹನವನ್ನು ಹುಬ್ಬಳ್ಳಿಯ ರೋಟರಿ ಕ್ಲಬ್ ಗೆ ಹಸ್ತಾಂತರಿಸಿ, ಬಳಿಕ ಭಾವಸರ ಕ್ಷತ್ರಿಯ ಮಹಾಜನ ಸಮಾಜಕ್ಕೆ ಉಸ್ತುವಾರಿಗಾಗಿ ಹಸ್ತಾಂತರಿಸಲಾಯಿತು.

ಈ ವೇಳೆ ಭಾವಸಾರ ಸಮಾಜದ ಅಧ್ಯಕ್ಷ ಗಜೇಂದ್ರನಾಥ್ ಮಾಳೋದೆ, ರೋಟರಿ ಕ್ಲಬ್ ಹುಬ್ಬಳ್ಳಿಯ ಅಧ್ಯಕ್ಷ ಅರವಿಂದ್ ಕುಪ್ಸದ್, ಸಂಸ್ಥೆ ನಿರ್ದೇಶಕರಾದ ಜಯಶ್ರೀ ತಾತುಸ್ಕರ್, ಗೀತಾ ತಾತುಸ್ಕರ್, ಪ್ರತೀಕ್ ತಾತುಸ್ಕರ್, ಉಪಸ್ಥಿತರಿದ್ದರು. ಗೊ.ವ. ಮೋಹನಕೃಷ್ಣ ಕಾರ್ಯಕ್ರಮದ ನಿರೂಪಣೆ ನೆರವೇರಿಸಿದರೆ, ಬಿವಿಐ ಅಧ್ಯಕ್ಷ ದಿನೇಶ್ ಕುಂಟೆ ವಂದನಾರ್ಪಣೆಯನ್ನು ನೆರವೇರಿಸಿದರು.