ಬಕ್ರೀದ್ ಹಬ್ಬದ ಶಾಂತಿ ಸಭೆಯಲ್ಲಿ ಏನೆಲ್ಲ ನಡೀತು?ಪೊಲೀಸ್ ಪ್ರಕಟಣೆ ಯಥಾವತ್ತು ವರದಿ ಇಲ್ಲಿದೆ…
ಬಕ್ರೀದ್ ಹಬ್ಬದ ಶಾಂತಿ ಸಭೆಯಲ್ಲಿ ಏನೆಲ್ಲ ನಡೀತು?
ಪೊಲೀಸ್ ಪ್ರಕಟಣೆ ಯಥಾವತ್ತು ವರದಿ ಇಲ್ಲಿದೆ…
ಮುಂಬರುವ *ಬಕ್ರೀದ್ ಹಬ್ಬದ* ಹಿನ್ನೆಲೆಯಲ್ಲಿ, ಈ ದಿನ ಬೆಳಗ್ಗೆ ಡಿಎಆರ್ ಪೊಲೀಸ್ ಸಭಾಂಗಣ ಶಿವಮೊಗ್ಗ ದಲ್ಲಿ, *ಶ್ರೀ ಗುರುದತ್ ಹೆಗ್ಡೆ,* ಮಾನ್ಯ ಜಿಲ್ಲಾಧಿಕಾರಿಗಳು ಶಿವಮೊಗ್ಗ ಜಿಲ್ಲೆ ಮತ್ತು *ಶ್ರೀ ಮಿಥುನ್ ಕುಮಾರ್ ಜಿ.ಕೆ. ಐಪಿಎಸ್,* ಮಾನ್ಯ ಪೊಲೀಸ್ ಅಧಿಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಶಾಂತಿ ಸಮಿತಿ ಸಭೆಯನ್ನು ನಡೆಸಲಾಯಿತು.
ಮಾನ್ಯ *ಜಿಲ್ಲಾಧಿಕಾರಿಗಳು* ಸಭೆಯನ್ನುದ್ದೇಶಿಸಿ ಮಾತನಾಡಿ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದರು.
1) ಹಬ್ಬವನ್ನು ಎಲ್ಲರೂ ಸೇರಿ *ಸಹಬಾಳ್ವೆಯಿಂದ* ಆಚರಣೆ ಮಾಡಬೇಕು, ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾಡಳಿತವು ಎಲ್ಲಾ ರೀತಿಯ *ತಯಾರಿಯನ್ನು* ಮಾಡಿಕೊಂಡಿದ್ದು, ಹಬ್ಬವನ್ನು *ಧಾರ್ಮಿಕ ಮನೋಭಾವದಿಂದ* ಎಲ್ಲಾ ಸಮುದಾಯವರೂ ಸೇರಿಕೊಂಡು ಶಾಂತ ರೀತಿಯಲ್ಲಿ ಆಚರಣೆ ಮಾಡೋಣ.
2) ಹೆಚ್ಚಿನದಾಗಿ *ಯುವ ಪೀಳಿಗೆಯು* ಯಾವುದೇ ಮಾಹಿತಿಯ ಸತ್ಯಾಸತ್ಯತೆಯ ಬಗ್ಗೆ ತಿಳಿಯದೇ *ಸಾಮಾಜಿಕ ಜಾಲತಾಣದಲ್ಲಿ* ಅಪ್ ಲೋಡ್ ಮಾಡುತ್ತಾರೆ. ಇದರಿಂದ ಬೇರೆಯವರಿಗೆ ಪ್ರಚೋದನೆಯಾಗುತ್ತದೆಯೇ ಹೊರತು, ಸಮಾಜಕ್ಕೆ ಯಾವುದೇ ರೀತಿಯ ಒಳಿತು ಆಗುವುದಿಲ್ಲ ಮತ್ತು ಸಮಸ್ಯೆಗಳು ಉಲ್ಭಣವಾಗುವ ಸಾಧ್ಯತೆ ಇರುವುದರಿಂದ ಯಾವುದೇ ವಿಷಯದ ಬಗ್ಗೆ ಮಾಹಿತಿ ಇದ್ದಾಗ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೊದಲು *ಸಂಬಂಧ ಪಟ್ಟ ಇಲಾಖೆಗೆ ಮಾಹಿತಿ* ನೀಡಿದ್ದಲ್ಲಿ, ಅಧಿಕಾರಿಗಳು ಅದರ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಲ್ಳುವುದು *ಮುಖಂಡರಾದ ನಿಮ್ಮೆಲ್ಲರ* ಜವಾಬ್ದಾರಿಯೂ ಸಹಾ ಆಗಿರುತ್ತದೆ. ಯಾವುದೇ ಘಟನೆಗೆ ಸಂಬಂದಿಸಿದಂತೆ ಜವಾಬ್ದಾರಿಯುತವಾಗಿ ವರ್ತಿಸುವಂತೆ *ಪ್ರಮುಖವಾಗಿ ಯುವ ಪೀಳಿಗೆಗೆ ತಿಳಿಹೇಳಿ.*
3) ಹಬ್ಬದ ಆಚರಣೆಯ ಸಂದರ್ಭದಲ್ಲಿ *ನೀರು, ಸ್ವಚ್ಚತೆ ಮತ್ತು ಇನ್ನಿತರೆ ಮೂಲ ಭೂತ ಸೌಕರ್ಯಗಳ* ಕುರಿತಂತೆ ಜಿಲ್ಲಾಡಳಿತದಿಂದ ಮತ್ತು ಸಂಬಂಧಪಟ್ಟ ಇಲಾಖೆಗಳಿಂದ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಯಾವುದೇ ಸಮಸ್ಯೆ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.
*ಎಲ್ಲರೂ ಸೇರಿ ವಿಜೃಂಭಣೆಯಿಂದ ಹಬ್ಬ ಆಚರಣೆ ಮಾಡೋಣ ಎಂದು ಹೇಳಿದರು.*
ಮಾನ್ಯ *ಪೊಲೀಸ್ ಅಧೀಕ್ಷಕರು* ಸಭೆಯನ್ನುದ್ದೇಶಿಸಿ ಮಾತನಾಡಿ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದರು.
1) ಯಾವುದೇ ಹಬ್ಬವನ್ನು ಆಚರಣೆ ಮಾಡುವಾಗ ನಾವೆಲ್ಲರೂ ವಿಜೃಂಬಣೆಯಿಂದ ಹಬ್ಬವನ್ನು ಆಚರಿಸುತ್ತೇವೆ. ಆದ್ದರಿಂದ ಹಬ್ಬದ ಆಚರಣೆಗೆ ಎಲ್ಲರೂ ಸಹಾಕರ ನೀಡುವುದು ಮುಖ್ಯವಾಗಿರುತ್ತದೆ.
2) ಸಮಾಜದಲ್ಲಿ ಯಾರೋ ಕೆಲವು ಜನ ಕಿಡಿಗೇಡಿಗಳು *ಎಲ್ಲಿಯೋ ನಡೆದ ಸಣ್ಣಪುಟ್ಟ ಘಟನೆಗಳನ್ನು* ದೊಡ್ಡದು ಮಾಡಿ ಸಮಸ್ಯೆಯನ್ನುಂಟು ಮಾಡುತ್ತಾರೆ. ಆದ್ದರಿಂದ ಮುಖಂಡರಾದ ನೀವು ಗಳು ಯಾವುದೇ *ಸಮಸ್ಯೆಯುಂಟಾಗದಂತೆ* ನೋಡಿಕೊಳ್ಳಬೇಕು ಮತ್ತು ಈ ಸಭೆಯಲ್ಲಿ ನೀಡಿದ ಸಲಹೆ ಸೂಚನೆಗಳನ್ನು ಉಳಿದವರಿಗೂ ಸಹಾ ತಿಳಿಸಬೇಕು.
3) ಜಿಲ್ಲೆಯಾದ್ಯಂತ ಈಗಾಗಲೇ ಠಾಣಾ ಮಟ್ಟದಲ್ಲಿ *ಮೊಹಲ್ಲಾ ಸಭೆ ಮತ್ತು ಬೀಟ್ ಸಮಿತಿ ಸಭೆಗಳನ್ನು* ನಡೆಸಲಾಗುತ್ತಿದ್ದು, *ಸೂಕ್ಷ್ಮ ಪ್ರದೇಶಗಳಲ್ಲಿ* ಹೆಚ್ಚಿನ ಒತ್ತು ನೀಡಿ ಇನ್ನು ಹೆಚ್ಚಿನ ಸಭೆಗಳನ್ನು ನಡೆಸಲಾಗುವುದು.
4) ಯಾವುದೆ ಸಮಸ್ಯೆ ಇದ್ದಲ್ಲಿ ತಕ್ಷಣ *ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದಾಗ* ಕಾನೂನು ಚೌಕಟ್ಟಿನ ಒಳಗೆ ಸಮಸ್ಯೆಯನ್ನು ಮೂಲದಲ್ಲಿಯೇ ಬಗೆಹರಿಸಲು ಸಾಧ್ಯವಿರುತ್ತದೆ.
5) *ಆಕ್ಷೇಪಾರ್ಹ* ವಿಡಿಯೋ ಗಳನ್ನು ಮತ್ತು ಫೋಟೋಗಳನ್ನು *ಸಾಮಾಜಿಕ ಜಾಲತಾಣಗಳಲ್ಲಿ* ಹರಿಬಿಟ್ಟಾಗ ಅದು ಬಹುಬೇಗ ಪ್ರಸರಿಸಿ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಆಕ್ಷೇಪಾರ್ಹ ವಿಡಿಯೋ ಗಳನ್ನು ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ *ಅಪ್ ಲೋಡ್ ಮಾಡದಂತೆ ತಿಳಿ ಹೇಳಿ.*
6) ಕಳೆದ ಮೂರು ವರ್ಷಗಳಲ್ಲಿ *ಸಮಸ್ಯೆಯನ್ನುಂಟು ಮಾಡಿದಂತಹ ವ್ಯಕ್ತಿಗಳನ್ನು* ಗುರುತಿಸಿ ಅಂತಹವ ವಿರುದ್ದ ಮುಂಜಾಗೃತಾ ಕ್ರಮ, ಗಡಿಪಾರು ಮತ್ತು ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಿದ್ದು, ಹಬ್ಬದ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಾಗದಂತೆ ಮುಂಜಾಗೃತೆವಹಿಸಲಾಗಿದೆ.
7) ಹಬ್ಬದ ಸಂದರ್ಭದಲ್ಲಿ ಮತ್ತು ವಿಶೇಷವಾಗಿ ಪ್ರಾರ್ಥನೆ ಮಾಡುವ ಸ್ಥಳಗಳಲ್ಲಿ *ಪೊಲೀಸ್ ಅಧಿಕಾರಿ ಸಿಬ್ಬಂಧಿಗಳನ್ನು ನಿಯೋಜನೆ* ಮಾಡಿ, ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲರೂ ಸೇರಿ ಸಹಬಾಳ್ವೆಯಿಂದ ಹಬ್ಬವನ್ನು ಆಚರಣೆ ಮಾಡೋಣ.
*ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಷಯಗಳನ್ನು ತಿಳಿಸಿದರು.*
ಈ ಸಂದರ್ಭದಲ್ಲಿ *ಶ್ರೀ ಮಾಯಣ್ಣ ಗೌಡ,* ಆಯುಕ್ತರು ಮಹಾನಗರ ಪಾಲಿಕೆ ಶಿವಮೊಗ್ಗ, *ಶ್ರೀ ಅನಿಲ್ ಕುಮಾರ್ ಭೂಮರಡ್ಡಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, *ಶ್ರೀ ಎ ಜಿ ಕಾರ್ಯಪ್ಪ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶಿವಮೊಗ್ಗ ಜಿಲ್ಲೆ, *ಶ್ರೀ ಶಿವಯೋಗಿ,* ಉಪ ನಿರ್ದೇಶಕರು, ಪಶು ವೈಧ್ಯಕೀಯ, ಇಲಾಖೆ, ಪೊಲೀಸ್ ಉಪಾಧೀಕ್ಷಕರು ಮತ್ತು ಎಲ್ಲಾ ಸಮುದಾಯದ ಮುಖಂಡರರುಗಳು ಉಪಸ್ಥಿತರಿದ್ದರು.