ಶಿವಮೊಗ್ಗದ ಗಾಂಧಿ ಬಜಾರಿನಲ್ಲಿ* *ಫೆವಿಕ್ವಿಕ್ ಕೂಡ ನಕಲಿ ಸಿಗುತ್ತೆ!**ದೊಡ್ಡಪೇಟೆ ಠಾಣೆಯಲ್ಲಿ ಎರಡು ಅಂಗಡಿಗಳ ಮೇಲೆ FIR…*

*ಶಿವಮೊಗ್ಗದ ಗಾಂಧಿ ಬಜಾರಿನಲ್ಲಿ*
*ಫೆವಿಕ್ವಿಕ್ ಕೂಡ ನಕಲಿ ಸಿಗುತ್ತೆ!*

*ದೊಡ್ಡಪೇಟೆ ಠಾಣೆಯಲ್ಲಿ ಎರಡು ಅಂಗಡಿಗಳ ಮೇಲೆ FIR…*

ಶಿವಮೊಗ್ಗದ ಗಾಂಧಿ ಬಜಾರ್ ಮತ್ತು ಕಸ್ತೂರ ಬಾ ರಸ್ತೆಯ ಎರಡು ಅಂಗಡಿಗಳ ಮಾಲೀಕರು ನಕಲಿ ಫೆವಿಕ್ವಿಕ್ ಮಾರಾಟ ಮಾಡುತ್ತಿದ್ದಾರೆಂದು ಮೂಲ ಕಂಪನಿಯ ವ್ಯಕ್ತಿ ಜಿ.ರವಿ ಎನ್ನುವವರು ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹೈದ್ರಾಬಾದ್ ನ ಜಿ.ರವಿ ಈ ದೂರು ನೀಡಿದ್ದಾರೆ. ಕಸ್ತೂರ ಬಾ ರಸ್ತೆಯಲ್ಲಿರುವ ರಾಕೇಶ್ ಟ್ರೇಡಿಂಗ್ ಕಂಪನಿಯ ಮಾಲೀಕ ಮತ್ತು ಗಾಂಧಿ ಬಜಾರಿನ ಎಂ.ಕೆ.ಪಾವಿಜನ್ ಸ್ಟೋರ್ ನ ಮಾಲೀಕರು ಪೆಡಲೈಟ್ ಇಂಡಸ್ಟ್ರೀಸ್ ಲಿ., ನ ಫೆವಿಕ್ವಿಕ್ ನ್ನು ನಕಲಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ತಪಾಸಣೆ ಮಾಡಿದ್ದು ನಕಲಿ ಎಂದು ಕಂಡು ಬಂದಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.

ಈ ಸಂಬಂಧ ದೊಡ್ಡಪೇಟೆ ಪೊಲೀಸರು ಕಲಂ 63,65 ಕಾಪಿರೈಟ್ ಆ್ಯಕ್ಟ್ 1957 ಮತ್ತು ಕಲಂ 420 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದಾರೆ.