ಆನಂದ ಬಾರ್ ಪಕ್ಕದ ಕನ್ಸರ್ ವೆನ್ಸಿ ಈಗ ಸಾರ್ವಜನಿಕ ವಾಹನ ನಿಲ್ದಾಣ**ಸಂಚಾರಿ ಎಸ್ ಐ ತಿರುಮಲೇಶ್ ತಂಡ ಹೊಗಳುತ್ತಿರುವ ಸಾರ್ವಜನಿಕರು**ಕುಡುಕರ ಶೌಚಾಲಯವೂ ಆಗಿಬಿಡುವ ಅಪಾಯವಿದೆ ಇಲ್ಲಿ!*

  • *ಆನಂದ ಬಾರ್ ಪಕ್ಕದ ಕನ್ಸರ್ ವೆನ್ಸಿ ಈಗ ಸಾರ್ವಜನಿಕ ವಾಹನ ನಿಲ್ದಾಣ*

    *ಸಂಚಾರಿ ಎಸ್ ಐ ತಿರುಮಲೇಶ್ ತಂಡ ಹೊಗಳುತ್ತಿರುವ ಸಾರ್ವಜನಿಕರು*

    *ಕುಡುಕರ ಶೌಚಾಲಯವೂ ಆಗಿಬಿಡುವ ಅಪಾಯವಿದೆ ಇಲ್ಲಿ!*

    ಶಿವಮೊಗ್ಗ ನಗರದ *ಸವಾರ್ ಲೈನ್ ರಸ್ತೆಯ ಮಲ್ನಾಡ್ ಕೆಫೆಯ ಹತ್ತಿರ, ಆನಂದ ಬಾರ್ ಪಕ್ಕ ಇರುವ ಕನ್ಸರ್ ವೆನ್ಸಿ* ಈಗ ವಾಹನ ನಿಲ್ದಾಣದ ತಾಣವಾಗಿದ್ದು, ಇದರ ಹಿಂದೆ ಟ್ರಾಫಿಕ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ತಿರುಮಲೇಶ್ ಮತ್ತು ತಂಡವನ್ನು ಸಾರ್ವಜನಿಕರು ಹೊಗಳುವಂತಾಗಿದೆ.

    ಈ ಕನ್ಸರ್ ವೆನ್ಸಿಯಲ್ಲಿ ಗಿಡ ಗಂಟಿಗಳು ಬೆಳೆದಿದ್ದು, ಸಾರ್ವಜನಿಕರು ಕಸವನ್ನು ಅಲ್ಲಿಯೇ ಎಸೆಯುತ್ತಿದ್ದರು. ಇದರಿಂದ ಸದರಿ ಕನ್ಸರ್ ವೆನ್ಸಿಯು ಸಾರ್ವಜನಿಕ ಬಳಕೆಗೆ ಯೋಗ್ಯವಲ್ಲದ ರೀತಿಯಲ್ಲಿತ್ತು, ಆದ್ದರಿಂದ ಇವತ್ತು ತಿರುಮಲೇಶ್, ಪಿಎಸ್ಐ* ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ, * ಪ್ರಕಾಶ್* ಎಆರ್ ಎಸ್ ಐ, ಡಿಎಆರ್ ಶಿವಮೊಗ್ಗ, * ಸಂದೀಪ್* ಸಿ ಹೆಚ್ ಸಿ, ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ, * ಪ್ರಕಾಶ್* ಸಿಪಿಸಿ, ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಮತ್ತು * ಪ್ರಶಾಂತ್* ಸಿಪಿಸಿ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ರವರುಗಳು ಶಿವಮೊಗ್ಗ ಸ್ಮಾರ್ಟ್ ಸಿಟಿ ಯ *ಸಹಯೋಗದೊಂದಿಗೆ* ಸದರಿ ಸ್ಥಳದಲ್ಲಿದ್ದ *ಕಸ ಮತ್ತು ಗಿಡಗಂಟಿಗಳನ್ನು ಸ್ವಚ್ಚಗೊಳಿಸಿ,* ಸಾರ್ವಜನಿಕರ *ವಾಹನಗಳ ನಿಲುಗಡೆಗೆ ಅನುಕೂಲವಾಗುವಂತೆ ವ್ಯವಸ್ಥೆ* ಮಾಡಿದರು.

    ಮಾನಸ ಆಸ್ಪತ್ರೆ ಮತ್ತು ಆ ಕಡೆಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಇಲ್ಲಿ ನಿಲುಗಡೆ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಆ ಪ್ರದೇಶದಲ್ಲಿ *ಸಂಚಾರ ದಟ್ಟಣೆ ಕಡಿಮೆಯಾಗಿ ಸುಗಮ ಸಂಚಾರಕ್ಕೆ* ಅನುಕೂಲವಾಗುವುದರಲ್ಲಿ ಅನುಮಾನವಿಲ್ಲ. ಆದರೆ, ಇದೇ ಕನ್ಸರ್ ವೆನ್ಸಿ ಸುತ್ತ ಮುತ್ತ ವೈನ್ ಶಾಪ್ ಗಳ ಹಾವಳಿ ಇದ್ದು, ಈ ಜಾಗ ಕುಡುಕರ ಶೌಚಾಲಯದ ಸ್ಥಳವಾಗಿಯೂ ಪರಿವರ್ತನೆಯಾಗುವ ಅಪಾಯವಿದೆ. ಪೊಲೀಸರು ಈ ಬಗ್ಗೆಯೂ ನಿಗಾ ವಹಿಸಬೇಕು.

    ಈ ರಸ್ತೆಯಲ್ಲಿ ಈಗಾಗಲೇ *ಬದಲೀ ದಿನಗಳಂದು ಪಾರ್ಕಿಂಗ್* ಮಾಡಲು ಅಧಿಸೂಚನೆಯನ್ನು ಹೊರಡಿಸಿದ್ದು, ಸಂಚಾರ ನಿಯಮಗಳನ್ನು *ಉಲ್ಲಂಘನೆ ಮಾಡಿದಲ್ಲಿ ಅಂತಹವರ ವಿರುದ್ಧ ಐಎಂವಿ ಕಾಯ್ದೆಯಡಿ* ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿರುಮಲೇಶ್ ಹೇಳಿದ್ದಾರೆ.