ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ವಿ.ರಾಜು- ಆರ್.ಕೆ.ಸಿದ್ದರಾಮಣ್ಣ ಜಂಟಿ ಪತ್ರಿಕಾಗೋಷ್ಠಿ…* *’ಜನಗಣತಿ ಮಾಡಿಲ್ಲ- ಅರಸು ಭವನ ಪೂರ್ಣಗೊಳಿಸಿಲ್ಲ-ಖಾಲಿ ಹುದ್ದೆಗಳು ಭರ್ತಿಯಾಗಿಲ್ಲ’*
*ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ವಿ.ರಾಜು- ಆರ್.ಕೆ.ಸಿದ್ದರಾಮಣ್ಣ ಜಂಟಿ ಪತ್ರಿಕಾಗೋಷ್ಠಿ…*
*’ಜನಗಣತಿ ಮಾಡಿಲ್ಲ- ಅರಸು ಭವನ ಪೂರ್ಣಗೊಳಿಸಿಲ್ಲ-ಖಾಲಿ ಹುದ್ದೆಗಳು ಭರ್ತಿಯಾಗಿಲ್ಲ’*
• ಶಿವಮೊಗ್ಗ ಬಾಲರಾಜ್ ಅರಸ್ ರಸ್ತೆಯಲ್ಲಿ ದಿ. ದೇವರಾಜ್ ಅರಸು ಭವನ ನಿರ್ಮಾಣಗೊಳ್ಳುತ್ತಲೇ ಇದ್ದು, ಈ ಕಾಮಗಾರಿ ಪೂರ್ಣಗೊಳಿಸಲು ರೂ. 3 ಕೋಟಿಗಳ ಅನುದಾನ ಬಿಡುಗಡೆಗೊಳಿಸಲು ದೇಶದ 3ನೇ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸುತ್ತೇವೆ. ಜೊತೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕದಿಂದ ಆಯ್ಕೆಯಾದ ಸಚಿವರುಗಳನ್ನು ಮನವಿ, ಲೋಕಸಭಾ ಸದಸ್ಯರನ್ನು, ಕರ್ನಾಟಕ ವಿಧಾನಸಭಾ ಸದಸ್ಯರುಗಳನ್ನು ಒಕ್ಕೂಟವು ಅಭಿನಂದಿಸಿ ಒತ್ತಾಯಿಸುತ್ತದೆಂದು ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ವಿ.ರಾಜು ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರವು ಇತ್ತೀಚೆಗೆ 2019ರ ವರದಿ-2014ರಂದು ಸ್ವೀಕರಿಸುವುದನ್ನು ಸರ್ಕಾರವು ವರದಿಯನ್ನು ಸಚಿವ ಸಂಪುಟದಲ್ಲಿ ಅಂಗೀಕರಿಸಿ ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕೆಂದು ಮತ್ತು ಅದರ ಅಂಕಿ-ಅಂಶಗಳನ್ನು ಅಧ್ಯಯನ ನಡೆಸಲು ಉನ್ನಮಟ್ಟದ ಸಮಿತಿಯನ್ನು ರಚಿಸಬೇಕೆಂದು ಒತ್ತಾಯಿಸಿದರು.
ನೂತನ ಭಾರತ ಸರ್ಕಾರವು ದೇಶದಾದ್ಯಂತ “ಸಾಮಾಜಿಕ ಶೈಕ್ಷಣಿಕ ಜನಗಣತಿ ಸಮೀಕ್ಷೆ” ನಡೆಸಬೇಕೆಂದು ಒಕ್ಕೂಟವು ಒತ್ತಾಯಿಸುತ್ತದೆ. ಸರ್ವೋಚ್ಚ ನ್ಯಾಯಾಲದ ಆಶಯದಂತೆ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯನವರು ಈ ಹಿಂದೆ ಮುಖ್ಯ ಮಂತ್ರಿಯಾಗಿದ್ದಾಗ ಅವರ ಆಡಳಿತಾವಧಿಯಲ್ಲಿ ಹಿಂದುಳಿದ ಆಯೋಗದ ವತಿಯಿಂದ ಕಾಂತರಾಜ್ ವರದಿಯನ್ನು ಸಿದ್ಧಪಡಿಸಿದ್ದು, ಇದು ಎಲ್ಲ ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗು ಶೈಕ್ಷಣಿಕ ಸಮೀಕ್ಷೆಯಾಗಿದ್ದು, ಮುಖ್ಯ ಮಂತ್ರಿಗಳು ಇದನ್ನು ಸ್ವೀಕರಿಸಿ ಸಾವರ್ಜನಿಕ ಚರ್ಚೆಗೆ ಬಿಟ್ಟು ಅನುಷ್ಠಾನಗೊಳಿಸಲು ಒಕ್ಕೂಟ ಒತ್ತಾಯಿಸುತ್ತದೆ ಎಂದರು.
ಭಾರತದ ಜನಗಣತಿ ಸಮೀಕ್ಷೆ 2021ರಲ್ಲಿ ನಡೆಯಬೇಕಾಗಿದ್ದು (10 ವರ್ಷಗಳಿಗೊಮ್ಮೆ) ಇಲ್ಲಿಯವಗೂ ನಡೆಸಿರುವುದಿಲ್ಲ. ಕೂಡಲೇ ಸರ್ಕಾರವು ಜನಣತಿ ಸಮೀಕ್ಷೆ ನಡೆಸಬೇಕು.ಭಾರತದ ಜನಸಂಖ್ಯೆಗೆ ಅನುಗುಣವಾಗಿ ಸಾಮಾಜಿಕ ನ್ಯಾಯ, ಆರ್ಥಿಕವಾಗಿ, ಮತ್ತು ರಾಜಕೀಯ ಮೀಸಲಾತಿಯನ್ನು ನೀಡಬೇಕು. ಇದಕ್ಕೆ ಕೇಂದ್ರ ಸರ್ಕಾರವು ಸಂವಿಧಾನ ತಿದ್ದುಪಡಿಯನ್ನು ಮಾಡಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು
ರಾಜ್ಯ ಸರ್ಕಾರವು ಇತ್ತೀಚೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಉದ್ಯೋಗಗಳಲ್ಲಿ “ಮೀಸಲಾತಿ ಅನ್ವಯಿಸುವುದನ್ನು” ಕಡ್ಡಾಯ ಮಾಡಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದರು.
ಕೇಂದ್ರ ಸರ್ಕಾರದಲ್ಲಿ ಸುಮಾರು 9 ಲಕ್ಷಕ್ಕೂ ಹೆಚ್ಚು ಸರ್ಕಾರದ ಹುದ್ದೆಗಳು ಖಾಲಿ ಇವೆ. ಕರ್ನಾಟಕದಲ್ಲಿ ಹಲವು ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇದನ್ನು ಸರ್ಕಾರವು ಭರ್ತಿ ಮಾಡಿಕೊಳ್ಳಬೇಕು. ಖಾಸಗಿ ವಲಯದಲ್ಲಿಯೂ ಮೀಸಲಾತಿಯನ್ನು ಜಾರಿಗೆ ತರಬೇಕು.
ಕೇಂದ್ರ ಸರ್ಕಾರವು ಸಾರ್ವಜನಿಕ ಉದ್ದಿಮೆಗಳನ್ನು ಮನಸೋ ಇಚ್ಛೆ ಖಾಸಗೀಕರಣಗೊಳಿಸುವುದನ್ನು ಮಾಡುತ್ತಿದೆ. ಇದನ್ನು ಕೈ ಬಿಡಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಸ್ ಬಿ. ಅಶೋಕ್ ಕುಮಾರ್, ಟಿ.ರಾಜೇಶ್, ಪಿ.ಆರ್.ಗಿರಿಯಪ್ಪ, ಡಿ.ಟಿ.ವೆಂಕಟೇಶ್, ಚಂದ್ರಶೇಖರ್, ವಿ.ಎನ್.ನಾಗರತ್ನ, ಶಾರದಾ, ಹೆಚ್.ಜಿ.ಲೋಕೇಶ್ ಉಪಸ್ಥಿತರಿದ್ದರು.