ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ; ಗೆದ್ದು ಬೀಗಿದ ಆರ್ ಎಂ ಎಂ- ಬೇಳೂರು ಗ್ಯಾಂಗ್ಬಿಜೆಪಿಗೆ ಭೀಕರ ಮುಖಭಂಗಇಲ್ಲಿದೆ ಗೆದ್ದವರು ಮತ್ತು ಸೋತವರು ಪಡೆದ ಮತಗಳ ಸಂಪೂರ್ಣ ವಿವರ

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ; ಗೆದ್ದು ಬೀಗಿದ ಆರ್ ಎಂ ಎಂ- ಬೇಳೂರು ಗ್ಯಾಂಗ್

ಬಿಜೆಪಿಗೆ ಭೀಕರ ಮುಖಭಂಗ

ಇಲ್ಲಿದೆ ಗೆದ್ದವರು ಮತ್ತು ಸೋತವರು ಪಡೆದ ಮತಗಳ ಸಂಪೂರ್ಣ ವಿವರ

ಪ್ರತಿಷ್ಠಿತ ಶಿವಮೊಗ್ಗ ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಧುರೀಣ ಆರ್.ಎಂ.ಮಂಜುನಾಥ ಗೌಡ, ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಆರ್.ಎಂ.ಮಂಜುನಾಥ ಗೌಡ, ಬೇಳೂರು ಗೋಪಾಲಕೃಷ್ಣ, ಸಿ.ಹನುಮಂತಪ್ಪ, ಬಸವಾನಿ ವಿಜಯದೇವ್, ಎಸ್ ಪಿ ಚಂದ್ರಶೇಖರ ಗೌಡ, ಕೆ.ಪಿ.ರುದ್ರಗೌಡ, ಜಿ.ಎನ್.ಸುಧೀರ, ಎಸ್.ಕೆ.ಮರಿಯಪ್ಪ, ಪಿ.ಎಲ್.ಬಸವರಾಜ್, ಮಹಾಲಿಂಗ ಶಾಸ್ತ್ರೀ, ಟಿ.ಶಿವಶಂಕರಪ್ಪ ಬೇರೆ ಬೇರೆ ಕ್ಷೇತ್ರಗಳಿಂದ ಇಂದು ನಡೆದ ಚುನಾವಣೆಯಲ್ಲಿ ಗೆದ್ದು ಬೀಗಿದರು.
ಇಲ್ಲಿ ಕ್ಷೇತ್ರವಾರು ಗೆದ್ದವರ ಮತ್ತು ಸೋತವರ ವಿವರ ಹಾಕಲಾಗಿದೆ. ಹೆಸರುಗಳ ಪಕ್ಕದಲ್ಲಿ ಅವರು ಪಡೆದ ಮತಗಳ ವಿವರ ಇದೆ.

ಕ್ಷೇತ್ರ1-
ಶಿವಮೊಗ್ಗ ತಾಲ್ಲೂಕು
– ಕೆ.ಪಿ.ದುಗ್ಗಪ್ಪ ಗೌಡ(13)
– ಶಿವನಂಜಪ್ಪ (12)

ಭದ್ರಾವತಿ ತಾಲ್ಲೂಕು
– ಹೆಚ್.ಎಲ್.ಷಡಾಕ್ಷರಿ(7)
– ಸಿ.ಹನುಮಂತಪ್ಪ( 9)

ತೀರ್ಥಹಳ್ಳಿ ತಾಲ್ಲೂಕು
– ಬಸವಾನಿ ವಿಜಯದೇವ್(14)
-ಕೆ.ಎಸ್.ಶಿವಕುಮಾರ್(9)

ಸಾಗರ ತಾಲ್ಲೂಕು
– ಗೋಪಾಲಕೃಷ್ಣ ಬೇಳೂರು(15)
– ರತ್ನಾಕರ ಹುನಗೋಡು(14)

ಶಿಕಾರಿಪುರ ತಾಲ್ಲೂಕು
– ಅಗಡಿ ಅಶೋಕ್(11)
-ಎಸ್.ಪಿ. ಚಂದ್ರಶೇಖರ ಗೌಡ(26)

ಸೊರಬ ತಾಲ್ಲೂಕು
– ಕೆ.ಪಿ.ರುದ್ರಗೌಡ(14)
– ಶಿವಮೂರ್ತಿ ಗೌಡ(10)

ಹೊಸನಗರ ತಾಲ್ಲೂಕು
– ಎಂ.ಎಂ.ಪರಮೇಶ್
(ಅವಿರೋಧ ಆಯ್ಕೆ)

ಕ್ಷೇತ್ರ-2
ಶಿವಮೊಗ್ಗ ಉಪವಿಭಾಗ
– ಆರ್.ಎಂ.ಮಂಜುನಾಥ ಗೌಡ(15)
– ವಿರೂಪಾಕ್ಷಪ್ಪ(3)
ತಿರಸ್ಕೃತ-1

ಸಾಗರ ಉಪವಿಭಾಗ
– ಬಿ.ಡಿ.ಭೂಕಾಂತ್(21)
-ಜಿ.ಎನ್.ಸುಧೀರ(23)

ಕ್ಷೇತ್ರ-3
ಶಿವಮೊಗ್ಗ ಉಪವಿಭಾಗ
-ಎಸ್.ಪಿ.ದಿನೇಶ(16)
– ಎಸ್.ಕೆ.ಮರಿಯಪ್ಪ(39)

ಸಾಗರ ಉಪವಿಭಾಗ
– ಬಸವರಾಜ್ ಪಿ.ಎಲ್.(32)
– ರವೀಂದ್ರ ಹೆಚ್.ಎಸ್.(21)
– ತಿರಸ್ಕೃತ(3)

ಕ್ಷೇತ್ರ- 4
ಶಿವಮೊಗ್ಗ ಉಪವಿಭಾಗ
– ಡಿ.ಆನಂದ(16)
– ಕೆ.ಎಲ್.ಜಗದೀಶ್ವರ್(45)
-ಮಹಾಲಿಂಗಯ್ಯ ಶಾಸ್ತ್ರೀ(47)
– ಜೆ.ಪಿ.ಯೋಗೇಶ್ (14)

ಸಾಗರ ಉಪವಿಭಾಗ
– ಟಿ.ಶಿವಶಂಕರಪ್ಪ(75)
– ಎಂ.ಡಿ.ಹರೀಶ್(61)
– ತಿರಸ್ಕೃತ (1)

ಒಟ್ಟು 621 ಮತಗಳಲ್ಲಿ 5 ಮತಗಳು ತಿರಸ್ಕರಿಸಲ್ಪಟ್ಟಿವೆ ಎಂದು ಚುನಾವಣಾಧಿಕಾರಿ ಸತ್ಯನಾರಾಯಣ್ ಮಲೆನಾಡು ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.