ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ; ಅತ್ಯಂತ ಹೆಚ್ಚು ಮತ ಪಡೆದ ಎಸ್.ಕೆ.ಮರಿಯಪ್ಪರಿಗೆ ಅಭಿನಂದನೆಗಳ ಮಹಾಪುರ*

*ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ; ಅತ್ಯಂತ ಹೆಚ್ಚು ಮತ ಪಡೆದ ಎಸ್.ಕೆ.ಮರಿಯಪ್ಪರಿಗೆ ಅಭಿನಂದನೆಗಳ ಮಹಾಪುರ*

ಪ್ರತಿಷ್ಠೆಯ ಚುನಾವಣೆ ಎಂದೇ ಪರಿಗಣಿಸಲ್ಪಟ್ಟ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ ಶುಕ್ರವಾರದಂದು ನಡೆದು, ಸಂಜೆ ಫಲಿತಾಂಶ ಹೊರಬಿದ್ದಿದ್ದು, ಮಾಜಿ ಮೇಯರ್, ಕಾಂಗ್ರೆಸ್ ಧುರೀಣ ಕ್ಷೇತ್ರ-3 ಶಿವಮೊಗ್ಗ ವಿಭಾಗದಿಂದ ಸ್ಪರ್ಧಿಸಿ ಅತ್ಯಂತ ಹೆಚ್ಚು, ಅಂದರೆ, 39 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ. ಮರಿಯಪ್ಪ  ಎರಡನೇ ಬಾರಿಗೆ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸಿದ್ದರು. ಇವರ ಎದುರಾಳಿ ಮಾಜಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಸ್.ಪಿ.ದಿನೇಶ್ ರವರು 16 ಮತಗಳನ್ನು ಪಡೆದು ಪರಾಜಿತರಾಗುವಂತಾಯ್ತು.

ಗೆದ್ದ ಎಸ್.ಕೆ.ಮರಿಯಪ್ಪರನ್ನು ನೂರಾರು ಅಭಿಮಾನಿಗಳು ಅಭಿನಂದಿಸಿದರು.