ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಕಳ್ಳಿ ತಾಹಿರಾ ರೋಹಿಯನ್ನು ಮಾಲು ಸಮೇತ ಬೇಟೆಯಾಡಿದ ದೊಡ್ಡಪೇಟೆ ಪೊಲೀಸರು….ಮಂಜುನಾಥ ಬಡಾವಣೆಯ ಈ ಕಳ್ಳಿ ಕದ್ದಿದ್ದು ಬರೋಬ್ಬರಿ 5.45 ಲಕ್ಷದ ಚಿನ್ನಾಭರಣ!
*ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಕಳ್ಳಿ ತಾಹಿರಾ ರೋಹಿಯನ್ನು ಮಾಲು ಸಮೇತ ಬೇಟೆಯಾಡಿದ ದೊಡ್ಡಪೇಟೆ ಪೊಲೀಸರು….
ಮಂಜುನಾಥ ಬಡಾವಣೆಯ ಈ ಕಳ್ಳಿ ಕದ್ದಿದ್ದು ಬರೋಬ್ಬರಿ 5.45 ಲಕ್ಷದ ಚಿನ್ನಾಭರಣ!
ಕಳೆದ ಜೂನ್ 29 ರಂದು ಭದ್ರಾವತಿ ಕೂಡ್ಲಿಗೆರೆ ಗ್ರಾಮದ ಮಹಿಳೆಯೊಬ್ಬರು ಭದ್ರಾವತಿಗೆ ಹೋಗಲು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ, ಟಿಕೆಟ್ ಮಾಡಿಸಲು ವ್ಯಾನಿಟಿ ಬ್ಯಾಗ್ ಅನ್ನು ತೆಗೆದು ನೋಡಿದಾಗ ಅದರಲ್ಲಿಟ್ಟಿದ್ದ ಬಂಗಾರದ ನೆಕ್ಲೆಸ್ ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆ ಗುನ್ನೆ *ಸಂಖ್ಯೆ 0268/2024 ಕಲಂ 379 ಐಪಿಸಿ ರೀತ್ಯಾ ಪ್ರಕರಣ* ದಾಖಲಿಸಲಾಗಿತ್ತು.
ಈ ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತ ಪತ್ತೆಗಾಗಿ ಎಸ್. ಪಿ. ಮಿಥುನ್ ಕುಮಾರ್ ಜಿ.ಕೆ ನೇತೃತ್ವದಲ್ಲಿ, ಅನಿಲ್ ಕುಮಾರ್ ಭೂಮಾರೆಡ್ಡಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಮತ್ತು ಕಾರಿಯಪ್ಪ ಎ.ಜಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 2 ರವರ ಮಾರ್ಗದರ್ಶನದಲ್ಲಿ, ಬಾಬು ಆಂಜಿನಪ್ಪ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ – ಎ ಉಪ ವಿಭಾಗರವರ ಮೇಲ್ವಿಚಾರಣೆಯಲ್ಲಿ ರವಿ ಪಾಟೀಲ್, ಪಿ.ಐ.ದೊಡ್ಡಪೇಟೆ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ನಾಗರಾಜ್ ಎಎಸ್ಐ, ಹೆಚ್ ಸಿ ರವರಾದ ಪಾಲಾಕ್ಷ ನಾಯ್ಕ, ಲಚ್ಚಾನಾಯ್ಕ್, ಸಿಪಿಸಿ ರವರಾದ ಚಂದ್ರನಾಯ್ಕ, ಗುರುನಾಯ್ಕ, ನಿತಿನ್, ಪುನೀತ್ರಾವ್ ಮತ್ತು ಪ್ರಕಾಶ್ ಹಾಗೂ ಮಹಿಳಾ ಸಿಬ್ಬಂದಿ ವಿಜಯ ಲಕ್ಷ್ಮಿ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.
ಈ ತನಿಖಾ ತಂಡವು ಪ್ರಕರಣದ *ಆರೋಪಿತಳಾದ ತಾಹಿರಾ ರೋಹಿ, (32 ವರ್ಷ, ಮಂಜುನಾಥ ಬಡಾವಣೆ, ಶಿವಮೊಗ್ಗ*) ಯನ್ನು ದಸ್ತಗಿರಿ ಮಾಡಿ, ಆರೋಪಿತಳಿಂದ 02 ಕಳ್ಳತನ ಪ್ರಕಣ ಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 5,45,000/- ರೂ ಗಳ 81 ಗ್ರಾಂ 800 ಮಿಲಿ ತೂಕದ ಬಂಗಾರದ ಆಭರಣಗಳನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ.
ಈ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿದ್ದಾರೆ.