ಮಳೆಗೆ ಬಿದ್ದ ಮಿಳಘಟ್ಟ ಶಾಲಾ ಕಾಂಪೌಂಡ್;ಕಾರು ಜಖಂ*

*ಮಳೆಗೆ ಬಿದ್ದ ಮಿಳಘಟ್ಟ ಶಾಲಾ ಕಾಂಪೌಂಡ್;ಕಾರು ಜಖಂ*

ಶಿವಮೊಗ್ಗದ ಹಳೆಯ ಶಾಲೆಗಳಲ್ಲಿ ಒಂದಾದ ಮಿಳಘಟ್ಟ ಸರ್ಕಾರಿ ಶಾಲೆಯ ಆಳೆತ್ತರದ ಕಾಂಪೌಂಡ್ ಮಳೆ ಕಾರಣದಿಂದಾಗಿ ಕುಸಿದು ಬಿದ್ದಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ, ಕಾಂಪೌಂಡ್ ಪಕ್ಕದಲ್ಲಿಯೇ ಇದ್ದ ಕಾರೊಂದು ನಜ್ಜುಗೊಜ್ಕಾಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ಕೂಡಲೇ ಇತ್ತ ಗಮನಹರಿಸಬೇಕು ಎಂದು ಸ್ಥಳೀಯ ಮುಖಂಡರಾದ ತುಕಾರಾಂ(ಪಾಂಡು) ಒತ್ತಾಯಿಸಿದ್ದಾರೆ.