ಹೊಸೂರು ಗ್ರಾಮದಲ್ಲಿ ಮಳೆಗೆ ನಾಶವಾದ ಕೋಳಿ ಫಾರಂ;* *5500ಕ್ಕೂ ಹೆಚ್ಚಿನ ಕೋಳಿಗಳ ಮಾರಣ ಹೋಮ!*

*ಹೊಸೂರು ಗ್ರಾಮದಲ್ಲಿ ಮಳೆಗೆ ನಾಶವಾದ ಕೋಳಿ ಫಾರಂ;*
*5500ಕ್ಕೂ ಹೆಚ್ಚಿನ ಕೋಳಿಗಳ ಮಾರಣ ಹೋಮ!*

ಶಿವಮೊಗ್ಗ ಸಮೀಪದ ಸೋಮಿನ ಕೊಪ್ಪ ದಾಟಿ ಇರುವ ಹೊಸೂರು ಗ್ರಾಮದ ಕೋಳಿ ಫಾರಂ ಮಳೆಯ ಕಾರಣದಿಂದ ಸಂಪೂರ್ಣ ಕುಸಿದು ಬಿದ್ದಿದ್ದು, 5 ಸಾವಿರಕ್ಕೂ ಹೆಚ್ಚಿನ ಕೋಳಿಗಳು ಸಾವು ಕಂಡಿವೆ.
ಇಮ್ತಿಯಾಝ್ ಅಹಮದ್ ಎಂಬುವವರಿಗೆ ಸೇರಿದ ಕೋಳಿ ಫಾರಂ ಇದಾಗಿದ್ದು, ಸುಮಾರು 6500ಕ್ಕೂ ಹೆಚ್ಚಿನ ಕೋಳಿಗಳ ಸಾಕಾಣಿಕೆ ಇಲ್ಲಿ ನಡೆದಿತ್ತು.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಕೋಳಿ ಫಾರಂನ ಶೆಡ್ ಸಂಪೂರ್ಣ ಕುಸಿದು ಬಿದ್ದಿದ್ದು, 5500ಕ್ಕೂ ಹೆಚ್ಚಿನ ಕೋಳಿಗಳ ಮಾರಣ ಹೋಮ ಸಂಭವಿಸಿದೆ.
ಕೂಡಲೇ ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡಿ ಮೃತ ಕೋಳಿಗಳ ತೆರವು ಕಾರ್ಯಾಚರಣೆ ಮಾಡದಿದ್ದರೆ ರೋಗ ಹರಡುವ ಸಂಭವ ತೀವ್ರವಾಗಿದೆ.
ಲಕ್ಷಾಂತರ ರೂ.,ಗಳ ನಷ್ಟ ಸಂಭವಿಸಿದೆ.