ಮೂವರು ಶಿಕ್ಷಕರಿಗೆ ಕಲಾಶಿಸಂ ಪ್ರತಿಷ್ಠಾನದ ‘ಮಕ್ಕಳ ಸ್ನೇಹಿ ಶಿಕ್ಷಕ’ ಪ್ರಶಸ್ತಿ: ಶಿವಮೊಗ್ಗದ ಶಿಕ್ಷಕಿ ಲಕ್ಷ್ಮಿಗೂ ಒಲಿದ ಪ್ರಶಸ್ತಿ
ಮೂವರು ಶಿಕ್ಷಕರಿಗೆ ಕಲಾಶಿಸಂ ಪ್ರತಿಷ್ಠಾನದ
‘ಮಕ್ಕಳ ಸ್ನೇಹಿ ಶಿಕ್ಷಕ’ ಪ್ರಶಸ್ತಿ:
ಶಿವಮೊಗ್ಗದ ಶಿಕ್ಷಕಿ ಲಕ್ಷ್ಮಿಗೂ ಒಲಿದ ಪ್ರಶಸ್ತಿ
ಮುಂಡರಗಿಯ ಕಲಾ ಶಿಕ್ಷಣ ಸಂಸ್ಕೃತಿ ಪ್ರತಿಷ್ಠಾನವು ಶಿಕ್ಷಕ ದಿನಾಚರಣೆಯ ಅಂಗವಾಗಿ ರಾಜ್ಯದ ಮೂರು ಜನ ಶಿಕ್ಷಕರಿಗೆ ,’2024ರ
ಮಕ್ಕಳಸ್ನೇಹಿ ಶಿಕ್ಷಕ’ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದು ಶಿವಮೊಗ್ಗದ ಲಕ್ಷ್ಮಿ ಎಸ್., ಗುಲ್ಬರ್ಗಾದ ರವೀಂದ್ರ ರುದ್ರವಾಡಿ, ಗದಗ ಜಿಲ್ಲೆಯ ನಾಗನಗೌಡ ಮೇಟಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 5000 ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಪಲಕ ನೀಡಿ ಗೌರವಿಸಲಾಗುವಿದೆಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ನಿಂಗು ಸೊಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವುದೇ ರೀತಿ ಅರ್ಜಿ ಹಾಕಿಸಿಕೊಳ್ಳದೇ ರಾಜ್ಯಾದ್ಯಂತ ಇರುವ ನಮ್ಮ ಗೆಳೆಯರು, ಆಯಾ ಭಾಗದ ಅದಿಕಾರಿಗಳು, ಶಿಕ್ಷಕರೊಂದಿಗೆ ಮಾತುಕತೆ ನಡೆಸಿ ಮಕ್ಕಳ ಸ್ನೆಹಿಯಾಗಿ ನಾವಿನ್ಯಯುತ ಸೃಜನಾತ್ಮಕ ಪ್ರಯೋಗ, ಚಟುವಟಿಕೆಗಳೊಂದಿಗೆ ಕಾರ್ಯ ಮಾಡುತ್ತಿರುವ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಇದೇ ಸೆಪ್ಟಂಬರ್ 21 ರಂದು ಮುಂಡರಗಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ರವೀಂದ್ರ ರುದ್ರವಾಡಿ: ಕಲಬುರ್ಗಿ ಜಿಲ್ಲೆಯ ಆಳಂದ ತಲೂಕಿನ ನಂದಗೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ರವೀಂದ್ರ ರುದ್ರವಾಡಿಯವರು ಶಾಲಾ ಅಂಗಳದಲ್ಲಿ ಪರಿಸರ ಸಂರಕ್ಷಣೆ, ಸಾಹಿತ್ಯ ಮೇಳ, ಪುಸ್ತಕ ಮೇಳ, ದೇಸೀ ಆಹಾರ ಮೇಳ, ವಿಜ್ಞಾನ ಮೇಳ ಹೀಗೆ ಹಲವು ರೀತಿಯ ಸೃಜನಾತ್ಮಕ ಹಾಗೂ ಪ್ರಾಯೋಗಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಲ್ಲದೇ ಮಕ್ಕಳಲ್ಲಿ ಸೃಜನಾತ್ಮಕ ಬರಹ ಕೌಶಲ ಮೂಡಿಸುವಲ್ಲಿ ನಿರಂತರ ಕಾರ್ಯ ಚಟುವಟಿಕೆಗಳನ್ನು ಅನುಷ್ಠಾನ ಮಾಡುತ್ತ ಬಂದಿದ್ದಾರೆ. ಮಕ್ಕಳ ಬರಹದ ‘ಅಂಕುರ’ ಕವನ ಸಮಕಲನ ಸಮಪಾದಿಸಿ ಪ್ರಕಟಿಸಿದ್ದಾರೆ.
ಲಕ್ಷ್ಮಿ ಎಸ್ : ಲಕ್ಷ್ಮಿಯವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರಾಗಿದ್ದು ಸಿರಿಗೆರೆ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಂಗ ಕಲಾವಿದೆ ನೃತ್ಯ ಹಾಗೂ ಸಂಗೀತ ಕಲಾವಿದೆಯಾಗಿ ಜನಮನ್ನಣೆ ಪಡೆದಿದ್ದು ಮಕ್ಕಳ ಸ್ನೇಹಿಯಾಗಿ ನೃತ್ಯ ಹಾಗೂ ರಂಗ ಚಟುವಟಿಕೆಗಳನ್ನು ರೂಪಿಸಿ ಮಕ್ಕಳಲ್ಲಿ ಭಾಷಾ ಪ್ರೌಢಿಮೆ ಹೆಚ್ಚಿಸಲು ಕಲಾ ಪ್ರತಿಭೆ ಹೊರಹೊಮ್ಮಿಸಲು ನಿರಂತರ ಪ್ರಯತ್ನಿಸುತ್ತ ಬಂದಿದ್ದಾರೆ. ಭಾರತಾಂಬೆ, ಮಾತೆ ಮಂಡೋದರಿ, ಅಂಬೆ, ಕೆಳದಿ ಚೆನ್ನಮ್ಮ, ಉಡುತಡಿ ಮೊದಲಾದ ನಾಟಕಗಳಲ್ಲಿ ಅಭಿನಯಿಸಿ ರಂಗಭೂಮಿಯಲ್ಲೂ ಉತ್ತಮ ಪ್ರತಿಭೆ ಮೆರೆದು ಮಕ್ಕಳ ಸ್ನೇಹಿ ಆದರ್ಶ ಶಿಕ್ಷಕಿಯಾಗಿದ್ದಾರೆ.
ನಾಗನಗೌಡ ಮೇಟಿ: ನಾಗನಗೌಡ ಮೇಟಿಯವರು ಗದಗ ಜಿಲ್ಲೆಯ ಕಣವಿ ಸರಕಾರಿ ಪ್ರೌಢ ಶಾಲೆಯಲ್ಲಿ ಸಮಾವಿಜ್ಞನ ಭೋದಿಸುವ ನಿರಂತರ ಅಧ್ಯನ ಹಾಗೂ ಪ್ರಯೋಗಶೀಲ ಶಿಕ್ಷಕರಾಗಿದ್ದು ಶಾಲೆಯಲ್ಲಿ ವಿದ್ಯಾರ್ಥಿಗಳ ಸ್ವಯಂ ಕಲಿಕೆಗೆ ನೆರವಾಗುವಂತೆ ಸಮಾಜ ವಿಜ್ಞಾನ ಲ್ಯಾಬ್ ನಿರ್ಮಿಸಿಕೊಂಡಿದ್ದಾರೆ. ಶಾಸನಗಳು, ವಾಸ್ತುಸಿಲ್ಪ ಹಾಗೂ ಪ್ರಾಚ್ಯ ವಸ್ತುಗಳ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಮತ್ತು ಪ್ರಯೋಗಶೀಲಾಗಿದ್ದು ಎನ್.ಸಿ.ಆರ್.ಟಿ ಹಾಗೂ ಡಿ.ಎಸ್.ಇ. ಆರ್.ಟಿ. ಗಳಿಗೆ ಸಮಾಜವಿಜ್ಞಾನ ವಿಷಯದ ‘ಇ’ ಕಂಟೆಂಟ್ ನಿರ್ಮಾಣದಲ್ಲಿ ತಜ್ಞ ಸಮಪನ್ಮೂಲವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ವಿದ್ಯಾರ್ಥಿಗಲಲ್ಲಿ ಹಾಗೂ ಸಮುದಾಯದಲ್ಲಿ ಮತದಾನ ಸಾಕ್ಷರತೆ ಮೂಡಿಸಲು ಅತ್ಯಂತ ಕ್ರಿಯಾತ್ಮಕ ಚಟುವಟಿಕೆಗಳನ್ನು ರುಪಿಸಿ ಅನುಷ್ಠಾನಗೊಳಿಸಿದ್ದಾರೆ.