ಮಾಜಿ ಮಂತ್ರಿ, ರಾಷ್ಟ್ರಭಕ್ತರ ಬಳಗದ ಮುಖ್ಯಸ್ಥ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿಸಚಿವ ಮುನಿರತ್ನ ಪ್ರಕರಣ ಅಸಹ್ಯ ರಾಷ್ಟ್ರದ್ರೋಹಿ ಮುಸ್ಲೀಮರಿಂದ ಗಲಭೆ ಹಿಂದೂ ಮಹಾಸಭಾ ಮೆರವಣಿಗೆ ಮೇಲೂ ಎಚ್ಚರಿಕೆ ವಹಿಸಿ

ಮಾಜಿ ಮಂತ್ರಿ, ರಾಷ್ಟ್ರಭಕ್ತರ ಬಳಗದ ಮುಖ್ಯಸ್ಥ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ

ಸಚಿವ ಮುನಿರತ್ನ ಪ್ರಕರಣ ಅಸಹ್ಯ
ರಾಷ್ಟ್ರದ್ರೋಹಿ ಮುಸ್ಲೀಮರಿಂದ ಗಲಭೆ
ಹಿಂದೂ ಮಹಾಸಭಾ ಮೆರವಣಿಗೆ ಮೇಲೂ ಎಚ್ಚರಿಕೆ ವಹಿಸಿ

ರಾಷ್ಟ್ರದ್ರೋಹಿ ಮುಸಲ್ಮಾನರಿಂದ ಗಲಭೆ.ಕೇರಳ ಮೂಲದ ಮುಸಲ್ಮಾನ್ ರಾಷ್ಟ್ರದ್ರೋಹಿಗಳು ಇಲ್ಲಿ ಬೀಡು ಬಿಡ್ತಿದ್ದಾರೆ. ಪ್ರಧಾನಿ ಮೋದಿಯವರೂ ಖಂಡಿಸಿದ್ದಾರೆ.ಕಾಂಗ್ರೆಸ್ ಹಗುರವಾಗಿ ತೆಗೆದುಕೊಳ್ಳುತ್ತಿದೆ.

ನಾಗಮಂಗಲ ಘಟನೆ- ಮಸೀದಿಯಿಂದ ತಲವಾರ್ ಬಂದ್ವು, ಕಲ್ಲು ತೂರಾಟ ಆಗಿದೆ. ಮಾಸ್ಕ್ ಗಳ ಖರೀದಿಯನ್ನು ಚಲುವರಾಯ ಸ್ವಾಮಿಗಳೇ ಹೇಳಿದ್ದಾರೆ. ಸತೀಶ್ ಜಾರಕೊಹೊಳಿ, ಗೃಹಮಂತ್ರಿ ಪರಮೇಶ್ವರ್  ಕೂಡ ಹಗುರವಾಗಿ ತಗೊಂಡಿದ್ದಾರೆ. ದಿಟ್ಟ ಹೆಜ್ಜೆ ರಾಜ್ಯ ಸರ್ಕಾರ ಇಡ್ತಿಲ್ಲ.

ಪಿಎಫ್ ಐ ಯಂಥ ಸಂಸ್ಥೆಗಳಿಗೆ ರಾಜ್ಯ ಸರಕಾರವೇ ಕುಮ್ಮಕ್ಕು ಕೊಡುವಂತಾಗುತ್ತದೆ. ಯೂಸೂಫ್ ಮತ್ತು ನಾಝಿರ್ ಕೇರಳದವರು. ಇವರು ಸಿಕ್ಕ ಆರೋಪಿಗಳಲ್ಲಿ ಪ್ರಮುಖರು.

ಗಲಭೆಗೆ ತಲವಾರು, ಪೆಟ್ರೋಲ್ ಬಾಂಬ್ ಬಳಸಲಾಗುತ್ತಿದೆ. ಇದು ಸಣ್ಣ ಕೆಲಸವಲ್ಲ. ಪ್ರಧಾನಿ ಇಷ್ಟೆಲ್ಲ ಗಂಭೀರವಾಗಿ ಹೇಳಿರುವಾಗ ಇದರಲ್ಲಿ ವಿದೇಶಿ ಸಂಚಿದೆ. ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಬಹಳಷ್ಟು ಗಣಪತಿಗಳ ವಿಸರ್ಜನೆ ಇನ್ನೂ ಬಹಳಷ್ಟಿದೆ. ಕೂಡಲೇ ಕ್ರಮ ಕೈಗೊಳ್ಳಿ.

ನಾಳೆ ಹಿಂದೂಮಹಾಸಭಾ ಗಣಪತಿ ವಿಸರ್ಜನೆ ಶಿವಮೊಗ್ಗದಲ್ಲಿ ನಡೆಯುತ್ತಿದೆ.ಇದನ್ನೂ ಗಂಭೀರವಾಗಿ ಪರಿಗಣಿಸಿ, ಇಲ್ಲಿ ಗಲಭೆ ಆಗದ ಹಾಗೆ ಗಡಿ ಭದ್ರ ಪಡಿಸಿ. ಶಾಂತಿಯಿಂದ ಮೆರವಣಿಗೆ ಆಗಬೇಕಿದೆ.ಕಿಡಿಗೇಡಿಗಳನ್ನು ಕಟ್ಟಿಹಾಕಿ.

ನಾಗಮಂಗಲದ ಜನತೆಗೆ ಸಾಂತ್ವನ ಹೇಳೋಕೆ ಹೋದವರಿಗೆ ಅರೆಸ್ಟ್ ಮಾಡ್ತಿದ್ದಾರೆ. ಕೆಲವರು ಸವಾಲು ಹಾಕ್ತಿದ್ದಾರೆ, ಬರಲಿ ನೋಡೋಣ ಅಂತ. ಪೊಲೀಸ್ ಮನವಿ ಮೇಲೆ ಹೋಗಿದ್ದ ಹಿಂದೂ ಸಮಾಜ ವಾಪಸ್ ಬಂದಿದೆ. ಇಂಥ ರಾಷ್ಟ್ರದ್ರೋಹಿಗಳ ವಿರುದ್ಧ ಕಠಿಣ ಕ್ರಮ ಆಗಬೇಕು. ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡಬೇಡಿ. ಶಾಂತರೀತಿಯಲ್ಲಿರೋದು ದೌರ್ಬಲ್ಯವಲ್ಲ.

ಎಲ್ಲರೂ ಅಣ್ಣತಮ್ಮಂದಿರಂತಿದ್ದಾರೆ. ಇಂಥ ಕರ್ನಾಟಕದಲ್ಲಿ ರಾಷ್ಟ್ರದ್ರೋಹಿ ಕೆಲಸಕ್ಕೆ ಅವಕಾಶ ಕೊಡಬೇಡಿ. ಹಗುರವಾಗಿ ರಾಜ್ಯ ಸರ್ಕಾರ ಮಾತಾಡಬಾರದು.

ಗಣಪತಿಗಳ ಮೆರವಣಿಗೆಯಲ್ಲಿ ಹಾರ, ಸ್ವೀಟು ಕೊಡೋದು ನಾಟಕೀಯವಾಗಬಾರದು. ಕೇರಳದಿಂದ ಬರುವವರ ಮೇಲೆ ನಿಗಾ ಇಡಬೇಕು.

ವಾಲ್ಮೀಕಿ ನಿಗಮದ ಹಗರಣ.ಆತ್ಮಹತ್ಯೆ ಮಾಡಿಕೊಂಡಿದ್ದ ಅಧಿಕಾರಿಯ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರೂ.,ಗಳ ಪರಿಹಾರ ಬಂದಿಲ್ಲ. ರಾಷ್ಟ್ರಭಕ್ತರ ಬಳಗದಿಂದ 5 ಲಕ್ಷ ನೀಡಿದ್ದೇವೆ. ಸಚಿವರು ಈಗಲಾದರೂ ಅವರ ಮನೆಗೆ ಹೋಗಿ ಪರಿಹಾರ ಕೊಟ್ಟುಬರಲಿ.
ಆತ್ಮಹತ್ಯೆ ಆಗಿರೋದ್ರಿಂದ ಕೆಲಸ ಕೊಡಲ್ಲ ಅಂತೆಲ್ಲ ಮಾತಿತ್ತು. ಅಟ್ರಾಸಿಟಿ ಪರಿಹಾರವೂ ಕುಟುಂಬಕ್ಕೆ ದಕ್ಕಬೇಕು.

ಮುನಿರತ್ನ ಪ್ರಕರಣ ಅಸಹ್ಯಕರ.