ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಗೆ ಸರ್ಪಗಾವಲು; ಏನೆಲ್ಲ ತಯಾರಿ ನಡೆದಿದೆ?
ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಗೆ ಸರ್ಪಗಾವಲು; ಏನೆಲ್ಲ ತಯಾರಿ ನಡೆದಿದೆ?
*ಶಿವಮೊಗ್ಗ ನಗರದಲ್ಲಿ ನಾಳೆ ನಡೆಯುವ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಬಂದೋಬಸ್ತ್* ಕರ್ತವ್ಯಕ್ಕೆ *03* ಹೆಚ್ಚುವರಿ ಪೊಲೀಸ್ ಅಧೀಕ್ಷಕರು, *25* ಪೊಲೀಸ್ ಉಪಾಧೀಕ್ಷಕರು, *60* ಪೋಲಿಸ್ ನಿರೀಕ್ಷಕರು, *110* ಪೊಲೀಸ್ ಉಪನಿರೀಕ್ಷಕರು, *200* ಸಹಾಯಕ ಪೊಲೀಸ್ ನಿರೀಕ್ಷಕರು, *3,500* ಪೊಲೀಸ್ ಹೆಡ್ ಕಾನ್ಸ್ ಟೆಬಲ್, ಪೊಲೀಸ್ ಕಾನ್ಸ್ ಟೆಬಲ್ ಮತ್ತು ಗೃಹರಕ್ಷಕ ದಳ ಸಿಬ್ಬಂದಿಗಳು, *01-RAF* ತುಕಡಿ *08* ಡಿಎಆರ್ ತುಕಡಿ, *01* QRT ತುಕಡಿ, *01* DSWAT ತುಕಡಿ, *10* ಕೆಎಸ್ಆರ್.ಪಿ ತುಕಡಿಗಳು, *05* ದ್ರೋಣ್ ಕ್ಯಾಮರಾಗಳು, *100* ವಿಡಿಯಾ ಗ್ರಾಫರ್ಸ್ ಗಳನ್ನು *ನಿಯೋಜಿಸಲಾಗಿದೆ ಎಂದು ಎಸ್ ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ, ಇಂದು ಮಧ್ಯಾಹ್ನ ಶಿವಮೊಗ್ಗ ನಗರದ ಡಿಎಆರ್ ಕವಾಯತು ಮೈಧಾನದಲ್ಲಿ ಮಿಥುನ್ ಕುಮಾರ್ ಐಪಿಎಸ್* ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರು *ಪೊಲೀಸ್ ಕವಾಯಿತು ಮೈದಾನ ಶಿವಮೊಗ್ಗದಲ್ಲಿ ಬ್ರೀಫಿಂಗ್ ನಡೆಸಿ,* ಬಂದೋಬಸ್ತ್ ಸಂದರ್ಭದಲ್ಲಿ *ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಸಲಹೆ ಮತ್ತು ಸೂಚನೆಗಳನ್ನು* ನೀಡಿದರು.