ಹೆಚ್.ಆರ್.ಬಸವರಾಜಪ್ಪ ನೇತೃತ್ವದಲ್ಲಿ ರೈತರ ಕರಾಳ ದಿನಾಚರಣೆಒಕ್ಕಲೆಬ್ಬಿಸುತ್ತಿರುವ ಸರ್ಕಾರದ ವಿರುದ್ಧ ರೈತಾಕ್ರೋಶ

ಹೆಚ್.ಆರ್.ಬಸವರಾಜಪ್ಪ ನೇತೃತ್ವದಲ್ಲಿ ರೈತರ ಕರಾಳ ದಿನಾಚರಣೆ

ಒಕ್ಕಲೆಬ್ಬಿಸುತ್ತಿರುವ ಸರ್ಕಾರದ ವಿರುದ್ಧ ರೈತಾಕ್ರೋಶ

ಇಂದು ಶಿವಮೊಗ್ಗದಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಂಡಿದ್ದ ‘ರೈತರ ಕರಾಳ ದಿನಾಚರಣೆ’ ಪ್ರತಿಭಟನೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪನವರ ನೇತೃತ್ವದಲ್ಲಿ ನಡೆಸಲಾಯಿತು.

ಈ ಸಭೆಯಲ್ಲಿ ರಾಜ್ಯಾಧ್ಯಕ್ಷರು ಮಾತನಾಡಿ,
ಕೇಂದ್ರ & ರಾಜ್ಯ ಸರ್ಕಾರ ರೈತ ವಿರೋಧಿ ನಿಲುವುಗಳನ್ನು ತಾಳುತ್ತಿವೆ. MSPಯನ್ನು ಇವತ್ತಿನವರಗೂ ಜಾರಿ ಮಾಡಿಲ್ಲ, ವಿದ್ಯುತ್ ಖಾಸಗೀಕರಣ ಮಾಡುವುದಿಲ್ಲವೆಂದು ಘೋಷಿಸಿಲ್ಲ, ಬೆಳೆ ವಿಮೆ ಪರಿಹಾರ, ಅತಿವೃಷ್ಟಿ ಹಾನಿ ಪರಿಹಾರ ಇನ್ನೂ ಸಮರ್ಪಕವಾಗಿ ರೈತರಿಗೆ ತಲುಪಿಲ್ಲ, ಜಿಂದಾಲ್ ಗೆ ಅಗ್ಗದ ದರದಲ್ಲಿ ಸಾವಿರಾರು ಎಕರೆ ಭೂಮಿಯನ್ನು ನೀಡುತ್ತಿರುವದನ್ನು ತಕ್ಷಣವೇ ನಿಲ್ಲಿಸಬೇಕು, ಸರ್ಕಾರ ಬಗರ್ ಹುಕ್ಕುಂ ಸಾಗುವಾಳಿದಾರರನ್ನು ಒಕ್ಕಲೆಬ್ಬಿಸುತ್ತಿವೆ ಇದನ್ನು ತಕ್ಷಣವೇ ನಿಲ್ಲಿಸಬೇಕು, ಪರಿಸರವನ್ನು ಹಾಳು ಮಾಡಿ ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯುವಂತ ಕೆಲಸವನ್ನು ತಕ್ಷಣವೇ ಕೈಬಿಡಬೇಕು ಇನ್ನೂ ಅನೇಕ ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸುತ್ತಿದ್ದೇವೆ. ಸರ್ಕಾರ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಲ್ಲಿಸಿ ರೈತ ಪರವಾದ ನಿಲುವುಗಳನ್ನು ತಾಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಚಳುವಳಿಯನ್ನು ತೀವ್ರಗೊಳಿಸಬೇಕಾಗುತ್ತದೆ ಎಂದರು.

ಈ ಸಂಧರ್ಭದಲ್ಲಿ
ರಾಜ್ಯ ಉಪಾಧ್ಯಕ್ಷರಾದ ಟಿ.ಎಂ ಚಂದ್ರಪ್ಪ,
ಜಿಲ್ಲಾಧ್ಯಕ್ಷರಾದ ಕೆ. ರಾಘವೇಂದ್ರ,
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ ಜಗದೀಶ್
ಜಿಲ್ಲಾ ಉಪಾಧ್ಯಕ್ಷರಾದ ಎಂ.ಮಂಜಪ್ಪ, ಎಂ.ಮಹದೇವಪ್ಪ
ಜಿಲ್ಲಾ ಹಸಿರುಸೇನೆ ಸಂಚಾಪಕರಾದ ಎಂ.ಡಿ ನಾಗರಾಜ್,
ಗ್ರಾಮಾಂತರ ಅಧ್ಯಕ್ಷರಾದ ಕಸಟ್ಟಿ ರುದ್ರೇಶ್,
ಶಿವಮೊಗ್ಗ ತಾ|| ಅಧ್ಯಕ್ಷರಾದ ಸಿ.ಚಂದ್ರಪ್ಪ,
ಪ್ರಧಾನ ಕಾರ್ಯದರ್ಶಿ ಜ್ಞಾನೇಶ್,
ಭದ್ರಾವತಿ ತಾ|| ಅಧ್ಯಕ್ಷರಾದ ಜಿ.ಎನ್ ಪಂಚಾಕ್ಷರಿ,
ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ,
ಶಿಕಾರಿಪುರ ತಾ||ಅಧ್ಯಕ್ಷರಾದ ಶಿವಮೂರ್ತಪ್ಪ ಮೊದಲಾದವರು ಹಾಜರಿದ್ದರು.