ಗೃಹ ಸಚಿವ ಪರಮೇಶ್ವರ್ ಮುಂದೆ ಹೆಚ್.ಸಿ.ಯೋಗೇಶ್ ಇಟ್ಟ ಆ ಐದು ಬೇಡಿಕೆಗಳೇನು?

ಗೃಹ ಸಚಿವ ಪರಮೇಶ್ವರ್ ಮುಂದೆ ಹೆಚ್.ಸಿ.ಯೋಗೇಶ್ ಇಟ್ಟ ಆ ಐದು ಬೇಡಿಕೆಗಳೇನು?

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಂತಹ ಹೆಚ್ ಸಿ ಯೋಗೇಶ್ ರವರು ಶಿವಮೊಗ್ಗ ನಗರಕ್ಕೆ ಆಗಮಿಸಿದ್ದ ಕರ್ನಾಟಕ ರಾಜ್ಯ ಸರ್ಕಾರದ  ಗೃಹ ಮಂತ್ರಿಗಳಾದ ಡಾ. ಜಿ ಪರಮೇಶ್ವರ್ ರವರಿಗೆ ಶಿವಮೊಗ್ಗ ನಗರದಲ್ಲಿನ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರಿಗೆ ಸಂಬಂಧಿಸಿದಂತೆ ಕೆಲವು ಬೇಡಿಕೆಗಳ ಪಟ್ಟಿ ನೀಡಿದರು.

ಶಿವಮೊಗ್ಗ ನಗರವು ಬೃಹದಾಕಾರವಾಗಿ ಬೆಳೆದಿದ್ದು ಜನಸಂಖ್ಯೆಯು ಸಹ ಅಧಿಕವಾಗಿದ್ದು ಸುಮಾರು ನಾಲ್ಕು ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಪೊಲೀಸ್ ಇಲಾಖೆಯವರು ಹಾಗೂ ಅಧಿಕಾರಿಗಳು ಶಿವಮೊಗ್ಗ ನಗರದ ಸಾರ್ವಜನಿಕರೊಂದಿಗೆ ಸಹಕರಿಸುತ್ತಾ ಬಂದಿರುತ್ತಾರೆ ಹಾಗೂ ಕೆಲವು ಅವಶ್ಯಕತೆಗಳನ್ನು ನೆರವೇರಿಸಿ ಕೊಡಬೇಕೆಂದು ಅವುಗಳೆಂದರೆ
1. ಶಿವಮೊಗ್ಗದಲ್ಲಿ ಕಮಿಷನರ್ ಕಚೇರಿ ನಿರ್ಮಾಣ ಮಾಡಿಕೊಡಬೇಕಾಗಿ
2. ಶಿವಮೊಗ್ಗ ನಗರದ ಗೋಪಾಲ ಭಾಗದಲ್ಲಿ ಪೊಲೀಸ್ ಸ್ಟೇಷನ್ ನಿರ್ಮಾಣ ಮಾಡಿಕೊಡಬೇಕಾಗಿ
3. ಶಿವಮೊಗ್ಗ ನಗರದ ಏರ್ಪೋರ್ಟ್ಗೆ ನಿರ್ದಿಷ್ಟ ಪೊಲೀಸ್ ಸ್ಟೇಷನ್ ನಿರ್ಮಾಣ ಮಾಡಿಕೊಡಬೇಕಾಗಿ
4. ಶಿವಮೊಗ್ಗ ನಗರದಲ್ಲಿ ಹೆಚ್ಚಿನ ವಾಹನ ದಟ್ಟಣೆಯಿದ್ದು ಇದರ ದೃಷ್ಟಿಯಿಂದ ಟ್ರಾಫಿಕ್ ಪೊಲೀಸ್ ಸ್ಟೇಷನ್ ಪ್ರತ್ಯೇಕವಾಗಿ ಗ್ರಾಮಾಂತರ ಭಾಗಕ್ಕೆ ಹಾಗೂ ನಗರ ಭಾಗದಲ್ಲಿ ಮತ್ತೊಂದು ಟ್ರಾಫಿಕ್ ಪೊಲೀಸ್ ಠಾಣೆ ನಿರ್ಮಾಣ ಮಾಡಿಕೊಡಬೇಕಾಗಿ
5. ಪೊಲೀಸ್ ಇಲಾಖೆಯವರಿಗೆ ಆರೋಗ್ಯ ದೃಷ್ಟಿಯಿಂದ ಪೊಲೀಸ್ ವ್ಯಾಯಾಮ ಶಾಲೆ ಹಾಗೂ ಕ್ರೀಡಾಂಗಣ ನಿರ್ಮಾಣ ಮಾಡಿಕೊಡಬೇಕಾಗಿ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರಿಗೆ ಮನವಿಯನ್ನು ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಭೋವಿ ನಿಗಮ ಮಂಡಳಿ ಅಧ್ಯಕ್ಷರಾದ ರವಿಕುಮಾರ್ ರವರು, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಶಿವಕುಮಾರ್ ರವರು, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮ್ ಪಾಷಾ ರವರು, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವನಾಥ್ ಕಾಶಿ ರವರು, ಕಾಂಗ್ರೆಸ್ ಪಕ್ಷದ ಮುಖಂಡರುಗಳು ರಂಗೇಗೌಡ ರವರು, ಚಿನ್ನಪ್ಪ ರವರು, ಕಾರ್ಯಕರ್ತರು ಉಪಸ್ಥಿತರಿದ್ದರು.