ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;ಆರ್ ಎಸ್ ಎಸ್ ಬಗ್ಗೆ ಕೊಲ್ಲೋ ಮಾತಾಡಿರೋ ಖರ್ಗೆ ಮೇಲೂ ಸುಮೋಟೋ ಕೇಸ್ ಹಾಕಿಕ್ರಾಂತಿವೀರ ಬ್ರಿಗೇಡ್ ರಥ ಸಪ್ತಮಿ ದಿನ, ಡಿ.4 ರಂದು ಬಸವನ ಬಾಗೇವಾಡಿಯಲ್ಲಿ ಉದ್ಘಾಟನೆ

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;

ಆರ್ ಎಸ್ ಎಸ್ ಬಗ್ಗೆ ಕೊಲ್ಲೋ ಮಾತಾಡಿರೋ ಖರ್ಗೆ ಮೇಲೂ ಸುಮೋಟೋ ಕೇಸ್ ಹಾಕಿ

ಕ್ರಾಂತಿವೀರ ಬ್ರಿಗೇಡ್ ರಥ ಸಪ್ತಮಿ ದಿನ, ಡಿ.4 ರಂದು ಬಸವನ ಬಾಗೇವಾಡಿಯಲ್ಲಿ ಉದ್ಘಾಟನೆ

ಬಿಜೆಪಿ, ಆರ್ ಎಸ್ ಎಸ್ ಕಂಡಲ್ಲಿ ಕೊಲ್ಲುವ ಮಾತಾಡಿದ್ದಾರೆ ಮಲ್ಲಿಕಾರ್ಜುನ ಖರ್ಗೆ. ಆರ್ ಎಸ್ ಎಸ್ ಇಲ್ಲದೇ ಇರುತ್ತಿದ್ದರೆ ದೇಶ ಏನಾಗುತ್ತಿತ್ತು ಕಲ್ಪಿಸಿಕೊಳ್ಳಲು ಸಾಧ್ಯವೇ?
ಹಿರಿಯ ರಾಜಕಾರಣಿ ಬಾಯಲ್ಲಿ ಇಂಥ ಪದ ಬರಬಾರದಿತ್ತು. ಉದ್ವೇಗದಲ್ಲಿ ಹೇಳಿದ್ದರೆ ಕ್ಷಮೆ ಕೇಳಿ. ನೆಹರೂ, ಇಂದಿರಾಗಾಂಧಿ ಕೈಯಲ್ಲೇ ಆರ್ ಎಸ್ ಎಸ್ ನಾಶ ಮಾಡಲು ಸಾಧ್ಯವಾಗಿಲ್ಲ. ನಿಮ್ಮನ್ನು ನಾವು ಗಣನೆಗೇ ತೆಗೆದುಕೊಂಡಿಲ್ಲ.

ಪೊಲೀಸರು ಸುಮೋಟೋ ಕೇಸ್ ನನ್ನ ಮೇಲೆ ಕೊಲ್ಲುತ್ತಾರೆ ಎಂದು ಹೇಳಿದ್ದಕ್ಕೆ ಹಾಕಿದ್ದಾರೆ. ಈಗ ಕೊಲ್ಲಿ ಎಂದಿರುವ ಖರ್ಗೆ ಮೇಲೂ ಸುಮೋಟೋ ಕೇಸ್ ಹಾಕಿ. ನಾನು ಹೇಳಿದ ಮೂರು ಅಂಶಗಳ ಬಗ್ಗೆ ಚರ್ಚೆ ಇಲ್ಲ ಕಾಂಗ್ರೆಸ್ ನಲ್ಲಿ. ವಕ್ಫ್ ಆಸ್ತಿ ಲೂಟಿ ಮಾಡುತ್ತಿರುವ ಮುಸ್ಲೀಮರು, ಶೇ. 4 ರಷ್ಟು ಗುತ್ತಿಗೆ ಮೀಸಲಾತಿ ಮುಸ್ಲೀಮರಿಗೆ ಕೊಡಲು ಒಪ್ಪಿಗೆ ಇದೆಯಾ? ಅಂಬೇಡ್ಕರ್ ಅವಮಾನಕ್ಕೆ ಒಪ್ಪಿಗೆ ಇದೆಯಾ ಕಾಂಗ್ರೆಸ್ಸಿಗರೇ?

ಜಾತಿ ಜನಗಣತಿ ವಿಚಾರದಲ್ಲಿ ಸಿಎಂದು ಉತ್ತರ ಕುಮಾರನ ಪೌರುಷವೇ? ಚುನಾವಣೆಯ ಟೂಲ್ ಕಿಟ್ಟಾ ಹಿಂದುಳಿದವರು, ದಲಿತರು? ಮೊದಲು ಕ್ಯಾಬಿನೆಟ್ ನಲ್ಲಿಡಿ. ಚರ್ಚೆ ಆಗಲಿ…ದುರುಪಯೋಗ ಮಾಡಿಕೊಳ್ಳುವುದು ಬೇಡ.

ಅಹಿಂದ ಸಮಾವೇಶ ಜಾತಿ ಜನಗಣತಿ ತಂದ ಮೇಲೆ ಮಾಡಿ. ಎರಡು ಬಾರಿ ಸಿಎಂ ಆದ್ರೂ ತಂದಿಲ್ಲ. ಮತ್ತೆ ತಿರಸ್ಕಾರ ಮಾಡುವ ದಿನಗಳು ದೂರವಿಲ್ಲ. ಜೈಲಿಗೆ ಹೋದ ಮೇಲೆ ದುಃಖಿತರಾಗುವ ಮುನ್ನ ಎಚ್ಚೆತ್ತುಕೊಳ್ಳಿ.

ಶೇ.40 ಆರೋಪ. ನಾನು ಶುಭ್ರ. ಪೋಕ್ಸೋ, ಭ್ರಷ್ಟಾಚಾರ ಸೇರಿದಂತೆ ಯಾವುದೂ ನನ್ನ ಮೇಲೆ ಕೇಸಿಲ್ಲ. ಕೆಂಪಣ್ಣ ಕಾಂಗ್ರೆಸ್ ಏಜೆಂಟ್ ಎಂಬುದು ಈಗ ಪ್ರೂವ್ ಆಯ್ತಲ್ಲ. ಕಾಂಗ್ರೆಸ್ ಕ್ಷಮೆ ಕೇಳಲಿ…

ನಿರೀಕ್ಷೆ ಮೀರಿ ಕ್ರಾಂತಿವೀರ ಬ್ರಿಗೇಡ್ ಗೆ ಸಿಗುತ್ತಿದೆ. ರಥ ಸಪ್ತಮಿ ದಿನ, ಡಿ.4 ರಂದು ಬಸವನ ಬಾಗೇವಾಡಿಯಲ್ಲಿ ಉದ್ಘಾಟನೆ ಆಗಲಿದೆ. ಲಕ್ಷಕ್ಕೂ ಹೆಚ್ಚಿನ ಭಕ್ತರ ಮುಂದೆ ಉದ್ಘಾಟನೆ. ಡಿ.2 ರಂದು ನೂರಕ್ಕೂ ಹೆಚ್ಚಿನ ಜನ ಸೇರಿ ಪದಾಧಿಕಾರಿಗಳ ಘೋಷಣೆ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಅಲ್ಲಿ ವಕ್ಫ್ ಆಸ್ತಿ ಎಂದು ಪಹಣಿಯಲ್ಲಿರೋದನ್ನು ಕಿತ್ತೆಸೆಯುವವರೆಗೆ ಹೋರಾಟ.