ಹಳೇ ಮುಗಳಗೆರೆ ಗ್ರಾಮದಲ್ಲಿ ಗಮನಸೆಳೆದಸ್ವಚ್ಛ ಗ್ರಾಮ- ಸ್ವಚ್ಛ ಪರಿಸರ

ಹಳೇ ಮುಗಳಗೆರೆ ಗ್ರಾಮದಲ್ಲಿ ಗಮನಸೆಳೆದ

ಸ್ವಚ್ಛ ಗ್ರಾಮ- ಸ್ವಚ್ಛ ಪರಿಸರ

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ, ಶಿವಮೊಗ್ಗ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯಿಂದ  ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ- 2024 ಹಳೇಮುಗಳಗೆರೆ ಗ್ರಾಮದಲ್ಲಿ ನಡೆಯಿತು.

ಸ್ವಚ್ಛ ಗ್ರಾಮ ಸ್ವಚ್ಛ ಪರಿಸರ ಎಂಬ ಧ್ಯೇಯದೊಂದಿಗೆ ಶಿವಮೊಗ್ಗ ಜಿಲ್ಲೆಯ,ಶಿಕಾರಿಪುರ ತಾಲೂಕಿನ ಹಳೇಮುಗಳಗೆರೆ ಗ್ರಾಮದಲ್ಲಿ ಗ್ರಾಮದ ಬೀದಿಗಳಲ್ಲಿ ಕಸ ತೆಗದು ಸ್ವಚ್ಛಗೊಳಿಸಲಾಯಿತು.

ಮಕ್ಕಳು ಜಾಥಾದಲ್ಲಿ ಪಾಲ್ಗೊಂಡು ಘೋಷ ವಾಕ್ಯಗಳೊಂದಿಗೆ ಊರಿನ ಗ್ರಾಮಸ್ಥರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಲಾಯಿತು. ಸ್ವಚ್ಛ ಗ್ರಾಮ ಸ್ವಸ್ಥ ಗ್ರಾಮ, ಸ್ವಚ್ಚತೆ ಕಾಪಾಡಿ ಡೆಂಗ್ಯೂ ಮಲೇರಿಯಾ ಓಡಿಸಿ , ಆರೋಗ್ಯವೇ ಭಾಗ್ಯ , ಎಂಬ ಘೋಷವಾಕ್ಯಗಳು ಕೂಗಿದರು.ಸುತ್ತಲಿನ ಪರಿಸರ ಸ್ವಚ್ಛವಾಗಿರಲಿ. ಪ್ರತಿಯೊಬ್ಬ ಮಹಿಳೆ ತಮ್ಮ ಮನೆ ಸ್ವಚ್ಛವಾಗಿಟ್ಟುಕೊಳ್ಳುವ ಜತೆಗೆ ಅಂಗಳ, ಮನೆಯ ಹಿತ್ತಲ, ಓಣಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿಸ್ವಚ್ಛತೆ ಕಾಪಾಡಬೇಕು, ಆಗ ಮಾತ್ರ ಗ್ರಾಮ ನೈರ್ಮಲ್ಯದಿಂದಿರಲು ಸಾಧ್ಯ.ಗ್ರಾಮದ ಎಲ್ಲರೂ ತಮ್ಮ ಮನೆಯ ಸುತ್ತ ಯಾವುದೇ ಕಸ ಬಿಸಾಡಬಾರದು. ಇದರಿಂದ ಗ್ರಾಮದಲ್ಲಿ ಅನೈರ್ಮಲ್ಯ ಹೆಚ್ಚುತ್ತದೆ. ಕೃಷಿ ವಿದ್ಯಾರ್ಥಿಗಳು ಶ್ರಮದಾನ ಮಾಡಿ ಊರಿನಲ್ಲಿ ಕಸ ಹಾಯಿಸಿ ಎಲ್ಲವನ್ನೂ ಟ್ರ್ಯಾಕ್ಟರ್ನಲ್ಲಿ ತುಂಬಿದರು.