ಸುರೇಶ್ ಎನ್ ಶಿಕಾರಿಪುರ ವಿಶೇಷ ಲೇಖನ;ರಾಸಿ ರೊಕ್ಕ ಇರೋರೆಲ್ಲ ರಾಚೂಟಪ್ನಂಗಿರಬೇಕು. ರತನ್ ಟಾಟಾರ ಹಾಗೆ ಇರಬೇಕು
ಸುರೇಶ್ ಎನ್ ಶಿಕಾರಿಪುರ ವಿಶೇಷ ಲೇಖನ;
ರಾಸಿ ರೊಕ್ಕ ಇರೋರೆಲ್ಲ ರಾಚೂಟಪ್ನಂಗಿರಬೇಕು. ರತನ್ ಟಾಟಾರ ಹಾಗೆ ಇರಬೇಕು.
‘ರಾಸಿ ರೊಕ್ಕ ಇರೋರೆಲ್ಲ ರಾಚೂಟಪ್ಪನಂಗಿರಬೇಕು’ ಅಂತ ಬಂಗಾರದ ಮನುಷ್ಯ ಸಿನಿಮಾದ ‘ಹನಿ ಹನಿ ಕೂಡಿದ್ರೆ ಹಳ್ಳ ತೆನೆ ತೆನೆಗೂಡುದ್ರೆ ಬಳ್ಳ’ ಎನ್ನೋ ಹಾಡಲ್ಲಿ ಒಂದು ಸಾಲು ಬರತ್ತೆ. ದೊಡ್ಡ ಗುಣದ ಕೊಡುಗೈ ದಾನಿ ವಿಶಾಲ ಹೃದಯಿ ರಾಚೂತಪ್ಪನೆಂಬ ಸಾಹುಕಾರನನ್ನ ಕುರಿತು ಕಳ್ಳತನ ಬಿಟ್ಟು ಮೈ ಬಗ್ಗಿಸಿ ದುಡಿದು ಒಕ್ಕಲು ಮಾಡಿದ ರೈತನೊಬ್ಬ ಕಣಹಬ್ಬದಲ್ಲಿ ಹಾಡುತ್ತಾ ಉದ್ಗರಿಸುವ ರೀತಿಯಿದು. ರತನ್ ಟಾಟಾ ಅವರ ಸಾವಿನ ಈ ವಿಷಾದಮಯ ಸಂದರ್ಭದಲ್ಲಿ ನನಗೆ ನೆನಪಾದುದೇ ಈ ಹಾಡು. ಒಂದು ಕಡೆ ಜನರ ರಕ್ತ ಹೀರಿ ಒಂದೇ ಒಂದೇ ಒಂದು ದಶಕದ ಅವಧಿಯಲ್ಲಿ ಜಗತ್ತಿನ ಹತ್ತು ದೊಡ್ಡ ಶ್ರೀಮಂತರ ಪಟ್ಟಿಯಲ್ಲಿ ಮೊದಲರ್ಧದ ಸಂಖ್ಯೆಗಳಲ್ಲಿ ಏರಿಳಿಯುತ್ತಾ ಆಟಾಟೋಪ ಮರೆಯುತ್ತಿರುವ ಅಂಬಾನಿ ಅದಾನಿಯಂತಹ ದೋಚಣ್ಣಗಳು. ಮತ್ತೊಂದೆಡೆ ದೇಶಕ್ಕೂ ದೇಶದ ಜನತೆಗೂ ಚೂರಿ ಹಾಕದೆ ಅಂತರ್ರಾಷ್ಟ್ರೀಯ ಮಟ್ಟಕ್ಕೆ ಉದ್ಯಮ ಕಟ್ಟಿ ಬಂದ ಲಾಭದ ಒಂದಷ್ಟು ಪಾಲನ್ನು ತಾಯ್ನಾಡಿನ ನಾನಾ ಕ್ಷೇತ್ರದ ಸೇವೆಗೆ ವಿನಿಯೋಗಿಸಿದವರು. ಯಾವ ಹಮ್ಮು ಬಿಮ್ಮು ವೈಭವದ ತೋರಿಕೆಯೂ ಇಲ್ಲದೆ ಸರಳವಾಗಿ ಬದುಕು ನೆಡೆಸಿ ಸಾರ್ಥಕವಾಗಿ ಬದುಕಿದ ರತನ್ ಟಾಟಾಜೀ ಅವರಂತವರು. ಈ ನೆಲದ ರೈತರು ಉಪಯೋಗಿಸುವ ಗುದ್ದಲಿ ಹಾರೆ ಪಿಕಾಸಿ ಸಲಿಕೆ ನೇಗಿಲ ಕುಡ ಕುಂಟೆಯ ಕುಟ ಟ್ರಾಕ್ಟರು ಮೊದಲಾದ ವಸ್ತು ಯಂತ್ರಗಳಿಂದ ಹಿಡಿದು ಮಧ್ಯಮವರ್ಗದ ಬಡ ಕುಟುಂಬದ ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಅನುಕೂಲವಾಗುವ ಕಡಿಮೆ ಬೆಲೆಯ ಉತ್ತಮ ದರ್ಜೆಯ ಆಟೋ ರಿಕ್ಷಾ, ಟಾಟಾ ಏಸಿ, ಟಿಲ್ಲರ್, ಲಗ್ಗೇಜ್ ಆಟೋ, ಮೆಟಾಡೋರ್ ಗಳಿಂದ ಹಿಡಿದು ಕ್ಯಾಂಟರ್, ಲಾರಿ, ಟ್ರಿಪ್ಪರ್ ಇತ್ಯಾದಿ ಸರಕು ಸಾಗಾಣಿಕಾ ವಾಹನಗಳ ವರೆಗೆ, ನಾವೂ ಕಾರಿನಲ್ಲಿ ಕುಳಿತು ಓಡಾಡಬೇಕೆಂಬ ಕನಸು ಹೊತ್ತು ದುಬಾರಿ ಕಾರು ಕರೀದಿಸಲಾಗದೆ ಕನಸಿಗೆ ಸೀಮಿತವಾಗಿದ್ದ ಬಹುಸಂಖ್ಯಾತ ಮಧ್ಯಮ ವರ್ಗದ ಜನಕ್ಕೂ ಕೈಗೆಟಕುವ ಬೆಲೆಯ ಸಣ್ಣ ಸಣ್ಣ ಅಂದದ ಕಾರುಗಳು, ಅದರಲ್ಲೂ ನ್ಯಾನೊ ಕಾರುಗಳನ್ನ ತಯಾರಿಸಿ ಕೊಟ್ಟವರು. ಇದೆಲ್ಲದರ ಹಿಂದೆ ಕೇವಲ ವ್ಯಾಪಾರಿ ಉದ್ದೇಶ ಮಾತ್ರವೇ ಇರಲಿಲ್ಲ. ಟಾಟಾ ಅವರ ಕಣ್ಣಲ್ಲಿ ಈ ದೇಶದ ಬಡವರಿದ್ದರು ನಿರುದ್ಯೋಗಿ ಯುವ ಸಮುದಾಯವಿತ್ತು ರೈತರಿದ್ದರು ಮಧ್ಯಮ ವರ್ಗವಿತ್ತು. ರೀಜನಬಲ್ ರೇಟು, ಸಹನೀಯ ಬಡ್ಡಿ ಕಂತುಗಳಿಗೆ ಇವನ್ನೆಲ್ಲಾ ಟಾಟಾ ಕಂಪನಿ ಒದಗಿಸಿತ್ತು. ಟಾಟಾ ಈ ದೇಶದ ಜನತೆಯ ಹೃದಯದಲ್ಲಿ ಸ್ಥಾನ ಪಡೆದಿದೆ. ಜನ ಟಾಟಾ ಕಂಪನಿಯ ಉತ್ಪನ್ನಗಳ ಮೇಲೆ ನಂಬಿಕೆ ವಿಶ್ವಾಸ ಗೌರವಗಳನ್ನು ಇಟ್ಟುಕೊಂಡಿದ್ದಾರೆ. ಇದೆಲ್ಲಾ ಒಂದು ದೇಶದ ಕಟ್ಟ ಕಡೆಯ ಬಡವನಿಂದ ಹಿಡಿದು ತುತ್ತ ತುದಿಯ ಧನಿಕನನ್ನು ದೃಷ್ಠಿಯಲ್ಲಿ ಇರಿಸಿಕೊಂಡು ಟಾಟಾ ಸಂಸ್ಥೆ ಸಲ್ಲಿಸಿದ ಸೇವೆ ಎಂದರೆ ತಪ್ಪಾಗಲಿಕ್ಕಿಲ್ಲ.
ದೇಶದ ನೈಸರ್ಗಿಕ ವಿಪತ್ತುಗಳು ಸಂಭವಿಸಿದಾಗ, ಅಪಾರ ಪ್ರಮಾಣದ ಆರ್ಥಿಕ ನೆರವು, ಆಹಾರ ಬಟ್ಟೆಯ ನೆರವು ಎಲ್ಲವನ್ನೂ ಧಾರಾಳವಾಗಿ ಕೊಟ್ಟಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಲಕ್ಷಾಂತರ ಯುವಕ ಯುವತಿಯರಿಗೆ ಉದ್ಯೋಗ, ಆರೋಗ್ಯ ಸೇವೆ, ಶಿಕ್ಷಣ ಸೇವೆ, ಸ್ಕಾಲರ್ಷಿಪ್, ಲೈಬ್ರೆರೀಸ್, ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಲೆಕ್ಕವಿಲ್ಲದಷ್ಟು ಕ್ಷೇತ್ರಗಳಿಗೆ ಟಾಟಾ ಸಂಸ್ಥೆಯ ಕೊಡುಗೆ ಇದೆ. ಭಾರತದ ಉದ್ಯಮವನ್ನು ವಿಶ್ವದ ಭೂಪಟದಲ್ಲಿ ಬಲಿಷ್ಠವಾಗಿ ಕಟ್ಟುವ ಮೂಲಕ ಭಾರತದ ಘನತೆಯನ್ನು ವಿಸ್ತರಿಸಿದರು ರತನ್ ಟಾಟಾ. ಟಾಟಾ ಉತ್ಪನ್ನಗಳು ಜಗತ್ತಿನಾದ್ಯಂತ ಮಾರುಕಟ್ಟೆ ಪಡೆಯುವ ಮೂಲಕ ವಿಶ್ವಾಸಾರ್ಹ ಭಾರತೀಯ ಕಂಪನಿಯಾಗಿ ನಮ್ಮ ದೇಶಕ್ಕೆ ರತನ್ ನೇತೃತ್ವದ ಟಾಟಾ ಗ್ರೂಪ್ ಗೌರವ ಪ್ರತಿಷ್ಠೆಗಳನ್ನು ತಂದು ಕೊಟ್ಟಿದದೆ. ಭಾರತವೂ ಸೇರಿ ಜಗತ್ತಿನ ನಾನಾ ದೇಶಗಳು ತಮ್ಮ ದೇಶದ ಪ್ರತಿಷ್ಠಿತ ಪ್ರಶಸ್ತಿ ಗೌರವ ಮನ್ನಣೆಗಳನ್ನು ನೀಡಿ ಟಾಟಾ ಅವರನ್ನು ಗೌರವಿಸಿದೆ. ಜಗತ್ತೇ ರತನ್ ಟಾಟಾ ಅವರನ್ನು ಪ್ರೀತಿಸುವ ಸತ್ಕರಿಸುವ ಗೌರವಿಸುವ ಮಟ್ಟಕ್ಕೆ ಟಾಟಾ ಕೇವಲ ಉದ್ಯಮದಿಂದ ಮಾತ್ರ ಬೆಳೆದದ್ದಲ್ಲ. ಅವರ ಆಶಯಗಳಿಂದ ವಿಶ್ವಶಾಂತಿಗಾಗಿ ಸೌಹಾರ್ದತೆಗಾಗಿ ಟಾಟಾ ಅವರು ಸದಾ ಮಿಡಿದವರು ತುಡಿದವರು. ಉದ್ಯಮ ಬೆಳೆಯಬೇಕಾದರೆ ವಿಶ್ವಶಾಂತಿಯೂ ಅಸ್ಟೇ ಮುಖ್ಯ. ಯುದ್ಧಗಳಾಗಲೀ ಯುದ್ಧ ಭೀತಿಗಳಾಗಲಿ, ಯುದ್ಧಧ ಖಾಯಿಲೆಯಾಗಲೀ ಇಲ್ಲದೆ ಹೋದರೆ ಜಗತ್ತಿನ ಬಡ ಮದ್ಯಮ ವರ್ಗದ ದೇಶಗಳು ಆರ್ಥಿಕವಾಗಿ ಸಬಲವಾಗಲು ಹೂಡಿಕೆ ಮಾಡಲು ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಾಗುತ್ತದೆ ಎಂತಲೇ ಟಾಟಾ ಅವರು ಸದಾ ವಿಶ್ವಶಾಂತಿ ಮತ್ತು ಸೌಹಾರ್ದದ ಪರವಾಗಿದ್ದರು. ಜಗತ್ತೆ ಗುರುತಿಸಿದ ಟಾಟಾ ಭಾರತದಲ್ಲಿ ಸರಳವಾದ ಬಟ್ಟೆ ತೊಟ್ಟು, ಆಡಂಬರವಿಲ್ಲದೆ ಅದ್ದೂರಿ ಇಲ್ಲದೆ ವೈಭವದ ಚೆಲ್ಲಾಟವಿಲ್ಲದೆ ಸಂತನಂತೆ ಓಡಾಡಿದರು. ನೆಲದ ಮೇಲೆ ಕುಂತರು, ಊರು ಕೇರಿ ಗುಡಿ ಚರ್ಚು ಮಸೀದಿ ಅಂತೆಲ್ಲಾ ಸಂದರ್ಶನ ನೀಡಬೇಕಾದಾಗ ಯಾವ ಹೆಚ್ಚುಗಾರಿಕೆಯೂ ಇಲ್ಲದೆ ಭಕ್ತನಾಗಿ ಸಹೃದಯಿಯಾಗಿ ಹೋಗುತ್ತಿದ್ದರು. ನಿಜವಾದ ದೇಶಭಕ್ತ ನಿಜವಾದ ದೇಶಪ್ರೇಮಿ ದೇಶ ಸೇವಕ ಟಾಟಾ.
ಟಾಟಾ ಸಂಸ್ಥೆ ರೈತರಿಗೊ ಕಾಡುಗೊ ಗ್ರಾಮೀಣ ಜನರಿಗೋ ತೊಂದರೆಯಾಗುವ ಅವರ ಭೂಮಿಯನ್ನು ಸರ್ಕಾರದಿಂದ ಪಡೆಯುವ ವಿಚಾರದಲ್ಲಿ ಯಡವಿದಾಗ ಇಲ್ಲವೇ ಮುನ್ನುಗ್ಗಿದಾಗ ಈ ದೇಶದ ಜನತೆ ತೋರಿದ ಉಗ್ರ ಪ್ರತಿರೋಧವನ್ನೂ ಎದುರಿಸಿದೆ. ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆದುಕೊಂಡಿದೆ. ನ್ಯಾನೋ ಕಾರು ತಯಾರಿಕಾ ಘಟಕಕ್ಕೆ ಭೂಮಿ ಸ್ವಾಧೀನದ ಕುರಿತು ರತನ್ ಟಾಟಾ ಬಹುದೊಡ್ಡ ಪ್ರತಿರೋಧ ಎದುರಿಸಬೇಕಾಯಿತು. ದೇಶದ ಜನತೆಯ ಮುಂದೆ ಸೋಲೊಪ್ಪಿಕೊಂಡು ಯೋಜನೆಯನ್ನು ಬೇರೊಂದು ರಾಜ್ಯಕ್ಕೆ ಕೊಂಡೊಯ್ಯಬೇಕಾಯಿತು. ರತನ್ ಟಾಟಾ ಜನತೆಯ ಹೋರಾಟಕ್ಕೆ ಮಣಿದರು. ಆಳುವ ವರ್ಗವನ್ನೇ ಕೊಂಡುಕೊಂಡು ಇಡೀ ದೇಶದ ಜನತೆಯ ಮೇಲೆ ನಿಯಂತ್ರಣ ಸಾಧಿಸುವ ರಾಕ್ಷಸ ಪ್ರವೃತ್ತಿಯ ಉದ್ಯಮಿ ಆಗಲಿಲ್ಲ ಟಾಟಾ. ಅಂಬಾನಿ ಅದಾನಿಗಳಂತಹಾ ಗುಜರಾತಿ ತಿಗಣೆಗಳು ಆಳುವ ನಾಯಕರನ್ನು ತಮ್ಮ ಬೂಟಿನ ಒಳಗೆ ಮೆಟ್ಟಿಕೊಂಡು ಇಲ್ಲಿಯ ನೆಲ ಹೊಲ ಜಲ ಗ್ರಾಮ ಸಂತೆ ಚಿಲ್ಲರೆ ವ್ಯಾಪಾರ ಮಾರುಕಟ್ಟೆ ಸಂತೆ ಎಲ್ಲವನ್ನೂ ನುಂಗಿ ನೀರುಕುಡಿದು ಗಡರಿಕೆ ಹಾಕಿ ತೇಗತೊಡಗಿದ್ದಾರೆ. ಆದಷ್ಟು ಜನರ ತಲೆ ಕೂದಲು ಮಾತ್ರವಲ್ಲ ಮರ್ಮಾಂಗದ ಮೇಲಿನ ಕೂದಲನ್ನೂ ಬೋಳಿಸಿಕೊಂಡು ತಮ್ಮ ಖಜಾನೆ ತುಂಬಿಕೊಂಡು ಮೆರೆಯುವ ಘಟಾಸುರ ಬುದ್ಧಿಯ ಉದ್ಯಮಿಗಳಿವರು. ಟಾಟಾ ಅವರು ಈ ದೇಶದ ಬಡವರು ಮಧ್ಯಮವರ್ಗದವರು ರೈತರು ವಿದ್ಯಾವಂತ ಯುವಕರನ್ನು ನೋಡಿದ ದೃಷ್ಟಿಯೇ ಬೇರೆ. ಈ ಎರಡು ಘಟಾಸುರ ಉದ್ಯಮಿಗಳು ನೋಡುತ್ತಿರುವ ರೀತಿಯೇ ಬೇರೆ. ಆಳುವವರ ಗುಲಾಮಗಿರಿ ಅತ್ಯಂತ ಅಪಾಯಕಾರಿ. ಬಂಡವಾಳಶಾಹಿಗಳ ಅಂತಃಕ್ಕರಣವಿಲ್ಲದ ಮಹತ್ವಾಕಾಂಕ್ಷೆ ಅದಕ್ಕಿಂತಲೂ ಅಪಾಯಕಾರಿ.
ರಾಸಿ ರೊಕ್ಕ ಇರೋರೆಲ್ಲ ರಾಚೂಟಪ್ನಂಗಿರಬೇಕು. ರತನ್ ಟಾಟಾರ ಹಾಗೆ ಇರಬೇಕು. ಪದ್ಮಭೂಷಣ, ಪದ್ಮವಿಭೂಷಣ ಭಾರತ ರತ್ನ ರತನ್ ಟಾಟಾ ಅವರು ನಮ್ಮನ್ನ ಅಗಲಿದ್ದಾರೆ. ಭಾರತದ ಸ್ವಾತಂತ್ರ್ಯ ಚಳುವಳಿಯಿಂದ ಹಿಡಿದು ಈ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಟಾಟಾ ಕುಟುಂಬದ ಪಾತ್ರ ಕೊಡುಗೆ ಅವಿಸ್ಮರಣೀಯ. ಭಾತರ ಮಾತೆಯ ಪ್ರೀತಿಯ ಮಗ ಟಾಟಾ ಅವರು ನಮ್ಮ ಸದಾ ಕಾಲದ ಸ್ಫೂರ್ತಿಯಾಗಿರುತ್ತಾರೆ…
– *ಸುರೇಶ ಎನ್ ಶಿಕಾರಿಪುರ*