ಸ್ವಾತಂತ್ರ್ಯೋತ್ಸವದ ಪರೇಡ್ ವೇಳೆ ಅಸ್ವಸ್ಥರಾಗಿ ಬಿದ್ದ ಮಕ್ಕಳು : ತಕ್ಷಣ ಕಾರ್ಯಪ್ರವೃತ್ತರಾದ ಡಾ. ಧನಂಜಯ ಸರ್ಜಿ

ಸ್ವಾತಂತ್ರ್ಯೋತ್ಸವದ ಪರೇಡ್ ವೇಳೆ ಅಸ್ವಸ್ಥರಾಗಿ ಬಿದ್ದ ಮಕ್ಕಳು : ತಕ್ಷಣ ಕಾರ್ಯಪ್ರವೃತ್ತರಾದ ಡಾ. ಧನಂಜಯ ಸರ್ಜಿ

ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು, ತಾಲೂಕಿನ ಹಲವು ಶಾಲೆಯ ಮಕ್ಕಳು ಸ್ವಾತಂತ್ರ್ಯೋತ್ಸವದ ಪಥಸಂಚಲನಕ್ಕಾಗಿ ಆಗಮಿಸಿದ್ದರು. ಈ ವೇಳೆ ಪಥಸಂಚಲನದಲ್ಲಿ ಭಾಗಿಯಾಗಿದ್ದ 3 ಮಕ್ಕಳು
ದಿಢೀರ್ ಕೆಳಗೆ ಬಿದ್ದಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ, ಅಲ್ಲಿಯೇ ಇದ್ದ ಸರ್ಕಾರಿ ಆಂಬುಲೆನ್ಸ್ ನಲ್ಲಿ ಬಾಲಕಿಯನ್ನ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಈ ವೇಳೆ ಬಾಲಕಿಯನ್ನು ಮಾತನಾಡಿಸಿ ಏನು ತೊಂದರೆ ಇಲ್ಲ ಎಂದು ಆತ್ಮವಿಶ್ವಾಸ ತುಂಬಿದ್ದಾರೆ.

ಈ ಬಗ್ಗೆ ಪ್ರತಿಕ್ರಿಸಿದ ಡಾ. ಧನಂಜಯ ಸರ್ಜಿ, ಅಸ್ವಸ್ಥಳಾಗಿ ಬಿದ್ದ ಬಾಲಕಿ ಸ್ವಲ್ಪಕಾಲ ಒದ್ದಾಡುತ್ತಿದ್ದಳು, ಉಸಿರಾಡುವುದಕ್ಕೂ ಕಷ್ಟವಾಗುತ್ತಿತ್ತು, ಆತಂಕ ಮತ್ತು ಒತ್ತಡದಿಂದ ಗಾಬರಿ ಯಾಗಿದ್ದಳು, ಹೃದಯಬಡಿತ, ಬಿ.ಪಿ ತಪಾಸಣೆ ಮಾಡಿ, ಸಹಜ ಸ್ಥಿತಿಗೆ ಬಂದ ನಂತರ ಆ ಬಾಲಕಿಯ ಬಳಿ ಮಾತನಾಡಿ ಸಮಾಧಾನ ಮಾಡಿ ಆತ್ಮವಿಶ್ವಾಸ ತುಂಬಿದ್ದೇನೆ, ಇಂದು ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದಂತಹ ಸ್ವಾತಂತ್ರ ದಿನಾಚರಣೆಯ ಪಥಸಂಚಲನದ ವೇಳೆ ಮೂರು ಮಕ್ಕಳು ಅಸ್ವಸ್ಥರಾಗಿ ಬಿದ್ದಿದ್ದಾರೆ.. ಇದು ಸಹಜವಾದದ್ದು, ತುಂಬಾ ಹೊತ್ತು ನಿಂತ ಜಾಗದಲ್ಲೇ ನಿಂತಿರುವುದು ಮತ್ತು ನೀರು ಕುಡಿಯದೆ ಇರುವುದರಿಂದ ತಲೆಚಕ್ರ ಬರುವುದು, ಅಸ್ವಸ್ಥರಾಗುವುದು ಸಹಜ. ಅಸ್ವಸ್ಥರಾಗಿ ಬಿದ್ದ ತಕ್ಷಣ ರೋಗಿಯನ್ನ ತಕ್ಷಣ ಎತ್ತಿಕೊಂಡು ಬರಬಾರದು ಬದಲಾಗಿ ಸಮ ಸ್ಥಿತಿಯಲ್ಲಿ ಅವರನ್ನು ಮಲಗಿಸಿ ಕಾಲನ್ನು ಮೇಲೆ ಮಾಡಬೇಕು,

ಯಾಕೆಂದರೆ ಗ್ಲುಕೋಸ್ ಅಂಶ ಕಡಿಮೆಯಾಗಿರುವುದರಿಂದ ತಲೆ ಸುತ್ತು ಬರುತ್ತದೆ.  ಸಾಮಾನ್ಯವಾಗಿ ಸಕ್ಕರೆ ಮತ್ತು ಬಿಪಿ ಅಂಶ ದೇಹದಲ್ಲಿ ಕಡಿಮೆಯಾದಾಗ ಈ ರೀತಿ ಅಸ್ವಸ್ಥರಾಗುತ್ತಾರೆ. ಈ ರೀತಿ ಆದಾಗ ನೀರು ಕುಡಿಸುವುದು, ಎತ್ತಿಕೊಂಡು ಹೋಗುವುದು, ಕೂರಿಸುವುದು ಮಾಡಬಾರದು, ಸಮ ಸ್ಥಿತಿಯಲ್ಲಿ ಮಲಗಿಸಿ ಕಾಲನ್ನು ಮೇಲೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.