ಶಿವಮೊಗ್ಗ ಡಿಸಿಸಿ ಬ್ಯಾಂಕಿಗೆ ಎಂ.ಶ್ರೀಕಾಂತ್ ಅಪೆಕ್ಸ್ ಬ್ಯಾಂಕಿನ‌ ನಾಮ ನಿರ್ದೇಶನ ಸದಸ್ಯರಾಗಿ ನೇಮಕ*

*ಶಿವಮೊಗ್ಗ ಡಿಸಿಸಿ ಬ್ಯಾಂಕಿಗೆ ಎಂ.ಶ್ರೀಕಾಂತ್ ಅಪೆಕ್ಸ್ ಬ್ಯಾಂಕಿನ‌ ನಾಮ ನಿರ್ದೇಶನ ಸದಸ್ಯರಾಗಿ ನೇಮಕ*

ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ  ಅಪೆಕ್ಸ್ ಬ್ಯಾಂಕಿನ ನಾಮ ನಿರ್ದೇಶಿತ ಸದಸ್ಯರನ್ನಾಗಿ ಕಾಂಗ್ರೆಸ್ ಮುಖಂಡರಾ ಎಂ.ಶ್ರೀಕಾಂತ್ ರವರನ್ನು ನೇಮಿಸಿ ಕರ್ನಾಟಕ ರಾಜ್ಯ ಸಹಕಾರಿ  ಅಪೆಕ್ಸ್ ಬ್ಯಾಂಕ್ ನಿಯಮಿತದ ಮುಖ್ಯ ಪ್ರಧಾನ ವ್ಯವಸ್ಥಾಪಕರು ಆದೇಶಿಸಿದ್ದಾರೆ.

ಈ ಮೊದಲು ನೇಮಕವಾಗಿದ್ದ ಅಪೆಕ್ಸ್ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಲ್.ಜಗದೀಶ್ ರವರ ನಾಮ ನಿರ್ದೇಶನವನ್ನು ತಕ್ಷಣವೇ ವಾಪಸ್ ಪಡೆಯಲಾಗಿದೆ ಎಂದು ಆದೇಶ ಪತ್ರದಲ್ಲಿದೆ.

ಎಂ.ಶ್ರೀಕಾಂತ್ ರವರ ನೇಮಕಕ್ಕೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದೆ.