ಕವಿಸಾಲು

Gm ಶುಭೋದಯ💐

*ಕವಿಸಾಲು*

1.
ಗಡಿಯಾರ
ಸರಿ ಮಾಡುವವರು
ಸಾವಿರ ಜನರಿಲ್ಲಿ…

ಸಮಯ
ಸರಿ ಮಾಡುವವರ
ಹುಡುಕುತ್ತಿರುವೆನಿಲ್ಲಿ!

2.
ತುಂಬಾ
ಒಳ್ಳೆಯವರಾಗುವುದೂ
ಅಪರಾಧವಿಲ್ಲಿ…

ಗೊತ್ತೇ ಆಗುವುದಿಲ್ಲ ಇಲ್ಲಿ

ಜನ
ಗೌರವಿಸುತ್ತಿದ್ದಾರೋ
ಬಳಸಿಕೊಳ್ಳುತ್ತಿದ್ದಾರೋ…

– *ಶಿ.ಜು.ಪಾಶ*
8050112067
(4/1/25)