ಓದಿರಿ…ಶಿವಮೊಗ್ಗ ನಗರಪಾಲಿಕೆಯ ಸಂಪೂರ್ಣ ಭ್ರಷ್ಟಾಚಾರ ಚರಿತ್ರಂ- (ಭಾಗ-1)**ಹಡಾಲು ಎದ್ದ ಶಿವಮೊಗ್ಗ ಮಹಾ ನಗರಪಾಲಿಕೆಗೆ ನಿಜವಾಗಲೂ ಕಮೀಷನರ್ ಯಾರು?**ಪಾಲಿಕೆಯೇ ದೊಡ್ಡ ಕಾಣಿಕೆ ಡಬ್ಬ!**ಆಂತರಿಕ ವರ್ಗಾವಣೆಯಲ್ಲಿ ನಡೆಯುತ್ತಿರುವುದೇನು? ಹೋದವರೆಲ್ಲ ಮತ್ತೆ ಬಂದಿದ್ದು ಹೇಗೆ?**ಪಿ ಎ ಮಂಜು ಕೈಯಲ್ಲಿ ಆಯುಕ್ತೆ ಕೈಗೊಂಬೆಯಾದರಾ?**ತುಷಾರ್ ಮತ್ತು (ವು)ಮ್ಯಾನ್ ಪವರ್ ?!*
*ಓದಿರಿ…ಶಿವಮೊಗ್ಗ ನಗರಪಾಲಿಕೆಯ ಸಂಪೂರ್ಣ ಭ್ರಷ್ಟಾಚಾರ ಚರಿತ್ರಂ- (ಭಾಗ-1)*
*ಹಡಾಲು ಎದ್ದ ಶಿವಮೊಗ್ಗ ಮಹಾ ನಗರಪಾಲಿಕೆಗೆ ನಿಜವಾಗಲೂ ಕಮೀಷನರ್ ಯಾರು?*
*ಪಾಲಿಕೆಯೇ ದೊಡ್ಡ ಕಾಣಿಕೆ ಡಬ್ಬ!*
*ಆಂತರಿಕ ವರ್ಗಾವಣೆಯಲ್ಲಿ ನಡೆಯುತ್ತಿರುವುದೇನು? ಹೋದವರೆಲ್ಲ ಮತ್ತೆ ಬಂದಿದ್ದು ಹೇಗೆ?*
*ಪಿ ಎ ಮಂಜು ಕೈಯಲ್ಲಿ ಆಯುಕ್ತೆ ಕೈಗೊಂಬೆಯಾದರಾ?*
*ತುಷಾರ್ ಮತ್ತು (ವು)ಮ್ಯಾನ್ ಪವರ್ ?!*
ಶಿವಮೊಗ್ಗ ಮಹಾನಗರ ಪಾಲಿಕೆ ಹಡಾಲು ಎದ್ದು ಹೋಗಿದೆ. ಏನೋ ಉದ್ಧಾರ ಮಾಡುತ್ತೀನಿ ಅಂತ ಆಯುಕ್ತರಾಗಿ ಪ್ರಭಾವದ ಮೇಲೆ ಬಂದು ಕುಳಿತ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್ ಶಿವಮೊಗ್ಗದ ಜನರ ಹಿಡಿಶಾಪಕ್ಕೆ ಪ್ರತಿನಿತ್ಯ ತುತ್ತಾಗುತ್ತಿದ್ದಾರೆ. ಭ್ರಷ್ಟರ ಸಂತೆಯನ್ನು ಸುತ್ತಮುತ್ತ ಕಟ್ಟಿಕೊಂಡಿರುವ ಆಯುಕ್ತರು ಶಿವಮೊಗ್ಗ ನಗರವನ್ನು ಅದೇನು ಉದ್ಧಾರ ಮಾಡುತ್ತಾರೋ? ಇವರು ಬಂದ ಮೇಲೆ ಶಿವಮೊಗ್ಗ ಕುರೂಪವಾಗುತ್ತಿದೆ! ಆಂತರಿಕ ವರ್ಗಾವಣೆ, ಕೆಟ್ಟ ಆಡಳಿತ, ಹಣದ ಹುಚ್ಚು ಹೊಳೆಯಲ್ಲಿ ಪಾಲಿಕೆ ಭ್ರಷ್ಟರ ಪಾಲಾಗುತ್ತಿದೆ!!
ಕಮೀಷನರ್ ಶಿವಮೊಗ್ಗದಲ್ಲಿ ಇದ್ದಾರಾ? ಇದ್ದರೆ, ಕಮೀಷನರ್ ಅಂತ ಇರೋರು ಶ್ರೀಮತಿ ಕವಿತಾ ಯೋಗಪ್ಪನವರ್ ಅವರೇನಾ? ಆಯುಕ್ತರು ನಗರ ಪಾಲಿಕೆಯಲ್ಲಿ ಯಾವಾಗ ಇರುತ್ತಾರೆ? ಇರೋದೇ ಇಲ್ಲ ಅಂದ್ರೆ ಯಾಕಿರೋದಿಲ್ಲ? ಪಾಲಿಕೆ ಕಚೇರಿಯಲ್ಲಿದ್ದು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಕಮೀಷನರ್ ಇಲ್ಲಿ ಇದ್ದರೆಷ್ಟು? ಬಿಟ್ಟರೆಷ್ಟು? ರಾತ್ರಿ ಎಂಟಾದರೆ ಸಾಕು ಆಯುಕ್ತರ ಮನೆಯೇ ಆಫೀಸಾಗಿ ಪರಿವರ್ತನೆ ಆಗುತ್ತಾ? ಭ್ರಷ್ಟರ ಕಾರಣದಿಂದ ಆಯುಕ್ತೆ ಅಧಿಕಾರದ ಹಾದಿ ತಪ್ಪುತ್ತಿದ್ದಾರಾ?
ಶಿವಮೊಗ್ಗದ ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿಲ್ಲವಾದ್ದರಿಂದ ಈ ಹಿಂದೆಯೂ ಇಲ್ಲಿಯೇ ಬೇರೆ ಹುದ್ದೆ ನಿಭಾಯಿಸಿದ್ದ ಶ್ರೀಮತಿ ಕವಿತಾ ಯೋಗಪ್ಪನವರ್ ತಮ್ಮ ಬದಲಿಗೆ ಆಡಳಿತಕ್ಕೆ, ಅದಕ್ಕೆ ಇದಕ್ಕೆ ಅಂತ ಪಿ ಎ ಮಂಜುನಾಥ್ ಎಂಬ ಲೋಕಾಯುಕ್ತ ಬಲೆ ಗಿರಾಕಿಯನ್ನೇ ನೇಮಿಸಿಬಿಟ್ಟಿದ್ದಾರಾ? ಆಯುಕ್ತೆಗಿಂತ ಹೆಚ್ಚಾಗಿ ಪಾಲಿಕೆಯಲ್ಲಿ ಅಧಿಕಾರ ಅಂತ ನಡೀತಿರೋದು ಇದೇ ಪಿ ಎ ಮಂಜುನಾಥ್ ಕಡೆಯಿಂದ! ಇಡೀ ಪಾಲಿಕೆಯಲ್ಲಿ ಲಾವ್ ಲಾವ್…ಜಾವ್ ಜಾವ್ ಥರದ ವರ್ಗಾವಣೆಗಳಿಗೆಲ್ಲ ಮೂಲವ್ಯಾಧಿಯೇ ಈ ಮಂಜುನಾಥ್…
ಪಿ ಎ ಮಂಜು @ ಸೈಟ್ ಸೆಕ್ಷನ್ ಮಂಜು @ ಲೋಕಾಯುಕ್ತ ಟ್ರ್ಯಾಪ್ ಮಂಜು ಶಿವಮೊಗ್ಗ ಮಹಾನಗರ ಪಾಲಿಕೆ ನಡೆಸುತ್ತಿದ್ದಾರೆಂದರೆ ಆಯುಕ್ತೆಯ ಕೆಲಸವೇನು? ಮನೆಯಲ್ಲಿ ಕುಂತು ಸೈನು ಹಾಕುವುದಾ? ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.
ಪಾಲಿಕೆ ಮುಂದೊಂದು ಕಾಣಿಕೆ ಡಬ್ಬ ಇಟ್ಟುಬಿಟ್ಟರೆ ಬಹಳ ಒಳ್ಳೆಯದೇನೋ? ಇ- ಖಾತಾ ಹೆಸರಲ್ಲಂತೂ ಲಕ್ಷ ಲಕ್ಷ ಲೂಟಿ ನಡೆಯುತ್ತಿದ್ದರೂ ಆಯುಕ್ತೆ ಕವಿತಾ ಮೇಡಂ ಗಪ್ ಚುಪ್. ಇನ್ನು, ಆಂತರಿಕವಾಗಿಯೇ ನಡೆಯುತ್ತಿರುವ ವರ್ಗಾವಣೆ ಹೆಸರಲ್ಲಿ ನಡೆಯುತ್ತಿರುವ ಎತ್ತುವಳಿ ಅಂತಿಮವಾಗಿ ಎಲ್ಲದನ್ನೂ ಬೀದಿಗೆ ತರುತ್ತಿದೆ. ಅಧಿಕಾರಿಗಳು ಇಲ್ಲಿ ಜನ ಸೇವೆಗಲ್ಲ…ತಾವು ಉದ್ಧಾರ ಆಗೋಕೆ ಇರುವಂತಿದೆ. ಪಿಎ ಮಂಜುನಾಥ್ ಪಾಲಿಕೆಯ ಶ್ಯಾಡೋ ಕಮೀಷನರ್ ಆಗಿಹೋಗಿರುವುದರ ಭಯಾನಕತೆ ಆಯುಕ್ತೆ ಕವಿತಾರವರಿಗೆ ಮುಂದಿನ ದಿನಗಳಲ್ಲಿ ಅರ್ಥವಾಗಬಹುದು!
ಭೋಜರಾಜ್ ಗೆ ವಾಟರ್ ಬೋರ್ಡಿಗೆ ವರ್ಗಾಯಿಸಿದ್ದರೆ ಅತ್ತ ಇತ್ತ ಕುಪ್ಪಳಿಸುವಂತೆ ಕುಪ್ಪರಾಜ್ ಗೆ ಮಾಡಲಾಗಿದೆ. ಕೇಸ್ ವರ್ಕರ್ ಜಾನ್ಸನ್ ಸೇರಿದಂತೆ ಹಲವರ ಆಂತರಿಕ ವರ್ಗಾವಣೆ ಗುಮಾನಿ ಹುಟ್ಟಿಸುತ್ತಿದೆ. ಕಾಣಿಕೆ ಕಾರ್ಯಕ್ರಮಗಳು ಇಲ್ಲಿ ಬೀದಿಗೆ ಬೀಳುತ್ತಿವೆ. ವರ್ಗವಾದವರಲ್ಲಿ ಬಹುತೇಕರು ಮತ್ತದೇ ಜಾಗಗಳಲ್ಲಿ ಪ್ರತ್ಯಕ್ಷರಾಗುತ್ತಿರುವ ಹಿಂದೆ ಏನಿರಲು ಸಾಧ್ಯ? ಕಂದಾಯಾಧಿಕಾರಿಯಾಗಿದ್ದ ವಿಜಯಲಕ್ಷ್ಮೀ ಇಂಥ ಸಹವಾಸವೇ ಬೇಡವೆಂದು ಕಾಲ್ಕಿತ್ತಿದ್ದಾರೆ.
ಲಂಚ ಪಡೆದು ಭ್ರಷ್ಟರ ಪಟ್ಟಿಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಪಿ ಎ ಮಂಜು ಯಾವ ಯಾವ ಭ್ರಷ್ಟರಿಗೆ ಎಲ್ಲೆಲ್ಲಿ ಹುದ್ದೆ ದಯಪಾಲಿಸುತ್ತಿದ್ದಾರೆ ಎಂದು ಆಯುಕ್ತೆ ಕವಿತಾರವರು ಯಾಕಾದರೂ ತಲೆ ಕೆಡಿಸಿಕೊಳ್ಳುತ್ತಾರೆ?
ಹಣ ಕೊಟ್ಟು ಈ ಜಾಗಕ್ಕೆ ಬಂದು ಕೂತಂತಿರುವ ಕೆಲವರು ಆ ಹಣ ವಸೂಲಿಗೆ ಜನರನ್ನು ಬಲಿ ಕಾ ಬಕ್ರಾ ಮಾಡುತ್ತಿರುವುದು ಹಾಡಹಗಲೇ ನಡೆಯುತ್ತಿದೆ. ಮಂತ್ರಿಗಳು, ಶಾಸಕರು ಇಂಥ ಉಡಾಳರನ್ನು ಅವರವರ ಜಾಗಗಳಿಂದ ಉಡೀಸ್ ಮಾಡಿದರೆ ಜನ ನೆಮ್ಮದಿಯಿಂದಿದ್ದಾರು!!ಆಯುಕ್ತರು ನಿರ್ಧರಿಸಬೇಕಾಗಿದ್ದನ್ನು ಪಿ ಎ ಮಂಜು ನಿರ್ಧರಿಸುತ್ತಾರೆಂದರೆ, ಕವಿತಾ ಮೇಡಂ ಹೋಗಿ ತಲುಪಲಿರುವ ಜಾಗ ಜೈಲಾಗದಿರಲೆಂದು ಆಶಿಸೋಣ.
ಒಂದಿಷ್ಟು ಹಳೆಯ ಆಯುಕ್ತರ ಇಷ್ಟಾರ್ಥ ಪೂರೈಸುತ್ತಲೇ ಬೆಳೆದ ಪಿ ಎ ಮಂಜು, ಈಗ ಹೆಬ್ಬಾವಿನಂತೆ ಸುತ್ತಿಕೊಂಡಿರುವುದು ಶಿವಮೊಗ್ಗದ ಆಯುಕ್ತರಿಗೆ!!
ಯಾರ ಫೋನೂ ರಿಸೀವ್ ಮಾಡದ, ಸಾರ್ವಜನಿಕರು ಹುಡುಕಿಕೊಂಡು ಕಚೇರಿಗೆ ಹೋದರೂ ಕೈಗೆ ಸಿಗದ, ಶಿವಮೊಗ್ಗ ನಗರ ಪ್ರದಕ್ಷಿಣೆ ಏನೆಂಬುದೇ ಗೊತ್ತಿಲ್ಲದ, ಯಾರಿಗೂ ಸ್ಪಂದಿಸದ, ಸಮಸ್ಯೆಗಳನ್ನು ಬಗೆಹರಿಸದ ಶಿವಮೊಗ್ಗ ಪಾಲಿಕೆ ಕಮೀಷನರ್ ಶ್ರೀಮತಿ ಕವಿತಾ ಯೋಗಪ್ಪನವರ್ ಶಿವಮೊಗ್ಗ ಕಂಡ ಅತ್ಯಂತ ಕೆಟ್ಟ ಆಡಳಿತ ನೀಡುತ್ತಿರುವ ಕಮೀಷನರ್…ಹಾಗಂತ ಹೇಳುವುದು ಅನಿವಾರ್ಯವಾಗುತ್ತಿದೆ!!
ಕೊನೆ ಮಾತು ಮತ್ತೊಂದಿದೆ; ಈ ಪಾಲಿಕೆಯಲ್ಲಿ ಮತ್ತೊಬ್ಬ ಶ್ಯಾಡೋ ಕಮೀಷನರ್ ಅವತಾರಿ ಇದೆ. ಆಡಳಿತ ಆಯುಕ್ತ ತುಷಾರ್ ಮ್ಯಾನ್ ಪವರಿನಿಂದ ಬಂದ ಲಕಲಕ ಮಹಿಳಾ ಮಣಿಯೊಬ್ಬರ ಕಡೇನೇ ಆಡಳಿತದ ಕಣ್ಣಿಟ್ಟಿರುತ್ತಾರೆಂಬುದನ್ನು ಅಲ್ಲಿನ ಗೋಡೆ ಗೋಡೆಗಳೂ ಕತೆ ಹೇಳುವಂತಾಗಿದೆ. ಕೆಲಸ ಮಾಡದೆಯೇ, ಪ್ರಭಾವದಿಂದ ಎಲ್ಲದನ್ನೂ ಮಾಡುತ್ತಿರುವ ಲಲನಾ ಮಣಿ ಒಂದು ಕಡೆಗಿದ್ದರೆ, ಆಯುಕ್ತೆಗೂ ಆಪ್ತೆಯಾಗಿರುವ ಈಕೆಯಿಂದ ಹಲವು ಹಗರಣಗಳು ರೆಕ್ಕೆ ಪುಕ್ಕ ಕಟ್ಟಿಕೊಳ್ಳುತ್ತಿವೆ.
ಶಿವಮೊಗ್ಗದ ಜನತೆಯನ್ನು ಕಾಪಾಡುವವರು ಯಾರು? ಸದ್ಯಕ್ಕೆ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇದೇ ದೊಡ್ಡ ಯಕ್ಷ ಪ್ರಶ್ನೆ…
– *ಶಿ.ಜು.ಪಾಶ*