ಚುನಾವಣಾ ನಿವೃತ್ತಿ ಘೋಷಿಸಿದರೂ ಶಿವಮೊಗ್ಗ ಹೌಸಿಂಗ್ ಸೊಸೈಟಿಯಲ್ಲಿ 384 ಮತ ಸಿಕ್ಕವು! ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಪೂರ್ಣಿಮಾ ಸುನಿಲ್

 

*🙏*ಚುನಾವಣಾ ಕಣದಿಂದ ನಿವೃತ್ತಿಯಾದರೂ ಮತ ಹಾಕಿದ 384 ಜನ ಮತದಾರರಿಗೆ ಹಾಗೂ ಸೊಸೈಟಿ ಸದಸ್ಯರಿಗೆ, ಹಿರಿಯರಿಗೆ ಕೃತಜ್ಞತೆಗಳು🙏*

ಶಿವಮೊಗ್ಗ : ಶಿವಮೊಗ್ಗ ಹೌಸಿಂಗ್‌ ಕೋ ಆಪರೇಟಿವ್‌ ಸೊಸೈಟಿ ಆಡಳಿತ ಮಂಡಳಿಗೆ ಜನವರಿ 12 ರಂದು ಚುನಾವಣೆ ನಡೆದಿದ್ದು, ಈ ಚುನಾವಣೆಗೆ ಮಹಿಳಾ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದೆ. ಆ ನಂತರ ನಾನು ವೈಯಕ್ತಿಕ ಕಾರಣದಿಂದ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೆ. ನಾಮಪತ್ರ ಹಿಂತೆಗೆದುಕೊಳ್ಳಲು ಅವಧಿ ಮೀರಿದ್ದರಿಂದ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ್ದೆ. ನಾನು ಚುನಾವಣಾ ಕಣದಿಂದ ಹಿಂದೆ ಸರಿದು ನಿವೃತ್ತರಾಗಿದ್ದರೂ ಒಂದು ಕ್ಷಣವೂ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸದಿದ್ದರೂ, ಓಡಾಟ ಮಾಡಿ ಮತ ಕೇಳದಿದ್ದರೂ ಅಭಿಮಾನ, ಪ್ರೀತಿಯಿಂದ ಚುನಾವಣೆಯಲ್ಲಿ 384 ಮತಗಳನ್ನು ನೀಡಿದ್ದೀರಿ. ಎಲ್ಲರಿಗೂ ಕೃತಜ್ಞತೆಗಳು ಎಂದು ಪೂರ್ಣಿಮಾ ಸುನೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.