ಮಾಜಿ ನಗರಸಭಾ ಸದಸ್ಯರೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳೂ ಆದ ಎನ್ ಕೆ ಶ್ಯಾಮಸಂದರ್ ಮಹಾನಗರ ಪಾಲಿಕೆಯ ಆಡಳಿತ ಗೊಂದಲಗಳ ಬಗ್ಗೆ ಆಯುಕ್ತರಿಗೆ ಕೊಟ್ಟಿರೋ ಸಲಹೆಗಳೇನು?
ಮಾಜಿ ನಗರಸಭಾ ಸದಸ್ಯರೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳೂ ಆದ ಎನ್ ಕೆ ಶ್ಯಾಮಸಂದರ್ ಮಹಾನಗರ ಪಾಲಿಕೆಯ ಆಡಳಿತ ಗೊಂದಲಗಳ ಬಗ್ಗೆ ಆಯುಕ್ತರಿಗೆ ಕೊಟ್ಟಿರೋ ಸಲಹೆಗಳೇನು?
ಶಿವಮೊಗ್ಗ ಮಹಾನಗರ ಪಾಲಿಕೆಗೆ ಈ ಹಿಂದೆ ಆಯುಕ್ತರಾಗಿದ್ದ ಮಾಯಣ್ಣ ಗೌಡ ರವರು ದೂರುಗಳಿಗೆ ಸ್ಪಂದಿಸುತ್ತ ಎಲ್ಲರ ಕರೆಗಳನ್ನು ಸ್ವೀಕರಿಸುತ್ತಾ ಅವರಿಗೆ ಬಂದಂತಹ ಎಲ್ಲಾ ಕಡತಗಳನ್ನು ಒಂದೇ ದಿನದಲ್ಲಿ ಪರಿಹಾರ ಕೊಡುತ್ತಿದ್ದರು. ಅಭಿವೃದ್ಧಿ ಹಾಗೂ ಪಾಲಿಕೆಯ ಅಧಿಕಾರಿಗಳ ಸಿಬ್ಬಂದಿಗಳ ಒತ್ತಡಗಳನ್ನು ಕಡಿಮೆ ಮಾಡಿ ಹಿತ್ತಾಳೆ ಕಿವಿಯಾಗದೆ ಸಾರ್ವಜನಿಕರ ಮನ್ನಣೆ ಪಡೆದಿದ್ದರು.
ಶಿವಮೊಗ್ಗ ಪಾಲಿಕೆಗೆ ಒಳ್ಳೆಯ ಹೆಸರನ್ನು ಸಹ ತಂದಿದ್ದರು. ಹೊಸದಾಗಿ ಈ ಆಯುಕ್ತರು ಬಂದ ನಂತರ ಪಾಲಿಕೆಯ ಎಲ್ಲಾ ಕಡೆ ಗೊಂದಲ ಭ್ರಷ್ಟಾಚಾರದ ಆರೋಪಗಳು ದಿನನಿತ್ಯ ಪತ್ರಿಕೆಗಳಲ್ಲಿ ಬರುತ್ತಿರುವುದು ಲೋಕಾಯುಕ್ತ ದಾಳಿ. ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ನಂಬಿಕೆ ಇಲ್ಲದೆ ಇರುವುದು.ಎಲ್ಲೋ ಆಡಳಿತ ವೈಫಲ್ಯ ಆಗುತ್ತಿದೆ.ಇವರು ತಹಸೀಲ್ದಾರಾಗಿಯೋ ಅಥವಾ ಎಸಿ ಆಗಿಯೋ ಹೋಗಿದ್ದರೆ ಉತ್ತಮ ಅನಿಸುತ್ತದೆ.
ಪಾಲಿಕೆಯ ಕಂದಾಯ ವಿಭಾಗ ಈ ಸ್ವತ್ತು ಗೊಂದಲದಿಂದ ಸಿಬ್ಬಂದಿಗಳು ಒತ್ತಡದಲ್ಲಿ ಸಿಲುಕಿದ್ದರು.ಕಂದಾಯ ವಿಭಾಗದ ಉಪ ಆಯುಕ್ತರು ಬಂದ ನಂತರ ಕಚೇರಿಯಲ್ಲಿ ಒತ್ತಡ ಕಡಿಮೆಯಾಗಿ ತ್ವರಿತಗತಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತಿರುವುದು ಪ್ರಶಂಶನಿಯ. ಈ ಸೊತ್ತು. ಅಭಿವೃದ್ಧಿ ಶುಲ್ಕ ಖಾತೆ ಬದಲಾವಣೆ ಶುಲ್ಕ ಇನ್ನೂ ಇತರೆ ಶುಲ್ಕ ಪಾವತಿಸಲು ಚಲನ್ ಪಡೆಯುವುದು ಮುಖ್ಯ.
ಚಲನ್ ಕೊಡುವವರು 1.1/2ಗಂಟೆಗೆ ಊಟಕ್ಕೆ ಹೋಗುತ್ತಾರೆ ಪುನಃ ಮಧ್ಯಾಹ್ನ 3:00 ಗಂಟೆಗೆ ಬರುತ್ತಾರೆ. ಆದರೆ ಪಾಲಿಕೆ ಆವರಣದಲ್ಲಿರುವ ಬ್ಯಾಂಕ್ ನವರು ಎರಡುವರೆ ಗಂಟೆವರೆಗೆ ಮಾತ್ರ ಇರುತ್ತಾರೆ ನಂತರ ಬಂದ್ ಮಾಡುತ್ತಾರೆ. ಮಧ್ಯಾಹ್ನದ ನಂತರ ಚಲನ್ ಪಡೆದು ಹಣ ಕಟ್ಟಲು ತೊಂದರೆ ಆಗುತ್ತಿದೆ. ಇದರಿಂದ ಒಂದು ದಿನ ಹಣ ಕಟ್ಟಲು ಕಾಯಬೇಕು.ಪಾಲಿಕೆ ಆವರಣದಲ್ಲಿ ಬೇರೆ ಮತ್ತೊಂದು ಬ್ಯಾಂಕ್ ಅಥವಾ ಕರ್ನಾಟಕ ಒನ್ ಆರಂಭಿಸುವುದು ಒಳ್ಳೆಯದು.
ಈ ಸ್ವತ್ತಿಗೆ ಪ್ರತಿ ಮನೆಯ ದಾಖಲೆ ಪಡೆಯುವಾಗ ಕಸದ ಗಾಡಿಗಳಲ್ಲಿ ಪ್ರಚಾರಪಡಿಸಲಾಗಿತ್ತು ಅದೇ ರೀತಿ ಈಗಲೂ ಸಹ ಆಸ್ತಿ ಮಾರಾಟ ಮಾಡುವವರು ಬ್ಯಾಂಕುಗಳಲ್ಲಿ ಸಾಲ ಪಡೆಯುವವರು ತುರ್ತು ಇರುವವರು ಮಾತ್ರ ಈ ಸ್ವತ್ತು ಪಡೆಯಿರಿ. ಮಾರಾಟ ಮಾಡದೇ ಇರುವಂತಹ ಮನೆಯವರು ನಿಧಾನವಾಗಿ ಈ ಸ್ವತ್ತು ಪಡೆಯಿರಿ. ಹಾಗೆಯೇ ರೆವೆನ್ಯೂ ಮನೆಗಳು ಹಕ್ಕು ಪತ್ರಗಳಿಂದ ಕಟ್ಟಿರುವಂತಹ ಮನೆಗಳು ಪಂಚಾಯಿತಿಯಿಂದ ಆಗಿರುವಂತಹ ಖಾತೆಗಳು ಬಿ ಖಾತೆ ಮಾಡುವಂತಹ ಸ್ವತ್ತುಗಳು ಸರ್ಕಾರದ ಆದೇಶ ಬಂದ ನಂತರ ಮಾಡುತ್ತೇವೆ.
ಅಲ್ಲಿವರೆಗೆ ಅಂತಹ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಎಂದು ನಗರದ ನಾಗರಿಕರಲ್ಲಿ ಪ್ರಚಾರಪಡಿಸಿದರೆ ಸಾರ್ವಜನಿಕರು ಕಚೇರಿಗೆ ಅಲೆದಾಡುವುದು ತಪ್ಪುತ್ತದೆ ಸಾರ್ವಜನಿಕರು ಸಹಕರಿಸುತ್ತಾರೆ. ಸಿಬ್ಬಂದಿಗಳಿಗೂ ಒತ್ತಡ ಕಡಿಮೆ ಆಗುತ್ತದೆ. ಈ ಬಗ್ಗೆ ಪಾಲಿಕೆಯ ಆಡಳಿತ ಸಂಪೂರ್ಣ ವಿಫಲವಾಗಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಲಿ.