ಇ- ಸ್ವತ್ತು ಹೆಸರಲ್ಲಿ ಹಣ ಪಡೆದ ಪ್ರಕರಣ;**ಕೆಲಸ ಕಳೆದುಕೊಂಡ ಆಶಾರಿಗೆ ಮತ್ತೆ ಕೆಲಸ ಕೊಡಿಸಲು ನಿಂತರಾ ಪಾಲಿಕೆಯ ಎಲೆಕ್ಟ್ರಿಕಲ್ ವಿಭಾಗದ ಇಂಜಿನಿಯರ್ ಗಳು?*

*ಇ- ಸ್ವತ್ತು ಹೆಸರಲ್ಲಿ ಹಣ ಪಡೆದ ಪ್ರಕರಣ;*

*ಕೆಲಸ ಕಳೆದುಕೊಂಡ ಆಶಾರಿಗೆ ಮತ್ತೆ ಕೆಲಸ ಕೊಡಿಸಲು ನಿಂತರಾ ಪಾಲಿಕೆಯ ಎಲೆಕ್ಟ್ರಿಕಲ್ ವಿಭಾಗದ ಇಂಜಿನಿಯರ್ ಗಳು?*

ಮೊದಲೇ ಭ್ರಷ್ಟಾಚಾರದ ಕೂಪವಾಗಿರುವ ಶಿವಮೊಗ್ಗ ಮಹಾನಗರ ಪಾಲಿಕೆ ಈಗ ಸಾಕಷ್ಟು ಸುದ್ದಿಯಲ್ಲಿದೆ. ಇಲ್ಲಿ ಯಾರು ಕಮೀಷನರ್? ಯಾರು ಶ್ಯಾಡೋ ಕಮೀಷನರ್? ಎಂಬ ಚರ್ಚೆಗಳಿರುವಾಗಲೇ ಇತ್ತೀಚೆಗಷ್ಟೇ ಇ- ಸ್ವತ್ತು ವಿಚಾರದಲ್ಲಿ ಹಣ ಪಡೆದ ಆರೋಪದ ಮೇಲೆ ಕೆಲಸ ಕಳೆದುಕೊಂಡಿದ್ದ ಪಾಲಿಕೆಯ ಎಲೆಕ್ಟ್ರಿಕಲ್ ವಿಭಾಗದ ಡಾಟಾ ಆಪರೇಟರ್ ಆಶಾ ಪರ ಕೆಲ ಇಂಜಿನಿಯರ್ ಗಳು ವಿಶೇಷ ಕಾಳಜಿ ವಹಿಸಿಕೊಂಡು ಮತ್ತೆ ಅದೇ ಜಾಗಕ್ಕೆ ಕರೆತರಲು ಪ್ರಯತ್ನಿಸುತ್ತಿರುವ ಸುದ್ದಿ ಬಹಿರಂಗವಾಗಿದೆ!

ಪ್ರಾದೇಶಿಕ ಆಯುಕ್ತರಿಂದ ಹಿಡಿದು ಶಿವಮೊಗ್ಗದ ಶಾಸಕ ಚೆನ್ನಿಯವರ ಗಮನಕ್ಕೂ ಹೋಗಿ ಸಾಕಷ್ಟು ಅಲ್ಲೋಲ ಕಲ್ಲೋಲ ಎಬ್ಬಿಸಿದ್ದ ಇ- ಸ್ವತ್ತು ಹೆಸರಲ್ಲಿ ಹಣ ಪಡೆದ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ಆಶಾರವರನ್ನು ಮತ್ತೆ ಯಥಾ ಜಾಗಕ್ಕೆ ಕರೆತರುವ ಪ್ರಯತ್ನದಲ್ಲಿ ಎಇ ಹಾಗೂ ಪ್ರಭಾರ ಎಇಇ ಹರೀಶ್, ಇಂಜಿನಿಯರ್ ಗಳಾದ ಪವನ್, ಶಿವಕುಮಾರ್, ಬೀದಿ ದೀಪ ಸರಿಪಡಿಸೋ ವಿಭಾಗದ ದೊರೆಸ್ವಾಮಿ, ಪ್ರೀತಿಯವರೆಲ್ಲ ಇರೋ ಮಾನವೀಯ ಕಳಕಳಿಯ ತಂಡ ತೊಡಗಿಕೊಂಡಂತಿದೆ. ಈ ವಿಚಾರವಾಗಿ ಆಯುಕ್ತರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ನಡೆದಿದೆ.

ಗಂಭೀರ ಆರೋಪದ ಮೇಲೆ ಕೆಲಸದಿಂದ ತೆಗೆದುಹಾಕಲಾಗಿದ್ದರೂ ಡಾಟಾ ಆಪರೇಟರ್ ಆಶಾ ಪರ ಇಷ್ಟೆಲ್ಲ ಪ್ರಭಾವಿತ ಅಧಿಕಾರಿಗಳು ಪ್ರಭಾವ ಬೀರುತ್ತಿರುವ ಹಿನ್ನೆಲೆ ಏನು? ಇದು ಪಾಲಿಕೆಯೊಳಗಿನ ಎಲ್ಲ ಸಿಬ್ಬಂದಿಗೂ ಗೊತ್ತಿರೋ ವಿಚಾರ!

ಭ್ರಷ್ಟರಿಗೆ ಮತ್ತೆ ಅವಕಾಶ ಕಲ್ಪಿಸಿಕೊಡುತ್ತಾರಾ ಆಯುಕ್ತರು? ಕಾದು ನೋಡಬೇಕಿದೆ…

ಅಂದಹಾಗೆ, ಎಇ ಹರೀಶ್ ರವರಿಗೆ ಎಇಇ ಪ್ರಭಾರ ನೀಡಿರುವುದೇಕೆ? ಇದೇ ಎಲೆಕ್ಟ್ರಿಕಲ್ ವಿಭಾಗದಲ್ಲಿ ಆರು ಜನ ಎಇಇಗಳಿದ್ದಾರಲ್ಲ…ಆಯುಕ್ತರು ಗಮನಿಸಬೇಕಿದೆ.