ಶಿವಮೊಗ್ಗಕ್ಕೆ ಭೇಟಿ ನೀಡಿದ* *ನೂತನ ಮಹಾ ನಿರ್ದೇಶಕ ಡಾ.ರವಿಕಾಂತೇ ಗೌಡರು*

*ಶಿವಮೊಗ್ಗಕ್ಕೆ ಭೇಟಿ ನೀಡಿದ*
*ನೂತನ ಮಹಾ ನಿರ್ದೇಶಕ ಡಾ.ರವಿಕಾಂತೇ ಗೌಡರು*

ಪೂರ್ವ ವಲಯ ದಾವಣಗೆರೆಯ ನೂತನ ಮಹಾ ನಿರೀಕ್ಷಕರಾದ ಡಾ. ಬಿ. ಆರ್. ರವಿಕಾಂತೇ ಗೌಡ ರವರು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ, ಡಿಎಆರ್ ಪೊಲೀಸ್ ಸಭಾಂಗಣದ ಆವರಣದಲ್ಲಿ ಗೌರವ ವಂದನೆಗಳನ್ನು ಸ್ವೀಕರಿಸಿದರು.

ನಂತರ ಜಿಲ್ಲೆಯ ಎಲ್ಲಾ ಪೊಲೀಸ್ ನಿರೀಕ್ಷಕರು, ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ಪೊಲೀಸ್ ಉಪಾಧೀಕ್ಷಕರುಗಳೊಂದಿಗೆ ಸಭೆ ನಡೆಸಿ, ಉತ್ತಮ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಎಸ್ ಪಿ ಮಿಥುನ್ ಕುಮಾರ್ ಜಿ. ಕೆ., ಹೆಚ್ಚುವರಿ ಎಸ್ ಪಿಗಳಾದ, ಅನಿಲ್ ಕುಮಾರ್ ಭೂಮರಡ್ಡಿ, ಕಾರಿಯಪ್ಪ ಎ ಜಿ, ಡಿಎಆರ್ ಡಿವೈಎಸ್ ಪಿ ಕೃಷ್ಣಮೂರ್ತಿ,* ಶಿವಮೊಗ್ಗ ಎ ಉಪವಿಭಾಗದ ಡಿವೈಎಸ್ ಪಿ ಬಾಬು ಆಂಜನಪ್ಪ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ವಿಭಾಗದ ಡಿವೈಎಸ್ ಪಿ ಸಂಜೀವ್ ಕುಮಾರ್. ಟಿ, ಸಾಗರ ಉಪವಿಭಾಗದ ಡಿವೈಎಸ್ ಪಿ ಗೋಪಾಲಕೃಷ್ಣ ಟಿ ನಾಯಕ್, ಶಿಕಾರಿಪುರ ಉಪ ವಿಭಾಗದ ಡಿವೈಎಸ್ ಪಿ ಕೇಶವ್, ಸಿಇಎನ್ ಡಿವೈಎಸ್ ಪಿ ಕೃಷ್ಣಮೂರ್ತಿ, ಮತ್ತು ಶಿವಮೊಗ್ಗ ಜಿಲ್ಲೆಯ ಎಲ್ಲಾ ಪೊಲೀಸ್ ನಿರೀಕ್ಷಕರು ಹಾಗೂ ಪೊಲೀಸ್ ವೃತ್ತ ನಿರೀಕ್ಷಕರು ಉಪಸ್ಥಿತರಿದ್ದರು.