ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ @ ಚನ್ನಿ; ಪಾಕಿಸ್ತಾನಕ್ಕೆ ಬಾಂಬ್ ಹಾಕಿ- ರಾಬರ್ಟ್ ವಾದ್ರಾನನ್ನು ಗುಂಡಿಕ್ಕಿ ಕೊಲ್ಲಿ ಭದ್ರತಾ ವೈಫಲ್ಯದ ಮಾತಾಡುತ್ತಿರೋ ಕಾಂಗ್ರೆಸ್ ದೇಶದ್ರೋಹಿ ಕೆಲಸ ಮಾಡುತ್ತಿದೆ ಉಗ್ರ ಕೃತ್ಯದಲ್ಲಿ ಹತರಾದ ಮಂಜುನಾಥ್ ಅಂತಿಮಯಾತ್ರೆ- ಸಹಕರಿಸಿದ ಎಲ್ಲರಿಗೂ ಕೃತಜ್ಞತೆ…

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ @ ಚನ್ನಿ;

ಪಾಕಿಸ್ತಾನಕ್ಕೆ ಬಾಂಬ್ ಹಾಕಿ- ರಾಬರ್ಟ್ ವಾದ್ರಾನನ್ನು ಗುಂಡಿಕ್ಕಿ ಕೊಲ್ಲಿ

ಭದ್ರತಾ ವೈಫಲ್ಯದ ಮಾತಾಡುತ್ತಿರೋ ಕಾಂಗ್ರೆಸ್ ದೇಶದ್ರೋಹಿ ಕೆಲಸ ಮಾಡುತ್ತಿದೆ

ಉಗ್ರ ಕೃತ್ಯದಲ್ಲಿ ಹತರಾದ ಮಂಜುನಾಥ್ ಅಂತಿಮಯಾತ್ರೆ- ಸಹಕರಿಸಿದ ಎಲ್ಲರಿಗೂ ಕೃತಜ್ಞತೆ…

ಪಾಕಿಸ್ತಾನಕ್ಕೆ ಬಾಂಬ್ ಹಾಕಿ- ಭಾರತ ಮಾತೆಗೆ ಹೂ ಹಾಕಿ ಅನ್ನೋ ಘೋಷಣೆ ಘೋಷಣೆ ಆಗಿಯೇ ಉಳಿಯದಂತೆ ಪ್ರಧಾನಿ ಮೋದಿ, ಅಮಿತ್ ಷಾ ರನ್ನು ವಿನಂತಿಸುವೆ.

ಉಗ್ರಗಾಮಿಗಳ ಕೃತ್ಯ ಸ್ವಾಗತಿಸಿದಂತೆ ರಾಬರ್ಟ್ ವಾದ್ರನನ್ನು ಗುಂಡಿಕ್ಕಿ. ಭೂಮಿ ಮೇಲೆ ಇರೋದಕ್ಕೇ ನಾಲಾಯಕ್. ಈ ದೇಶ ಉಳಿಸಿಕೊಳ್ಳಬೇಕಿದೆ. ಇಂಥ ಸಂದರ್ಭದಲ್ಲಿ ರಾಬರ್ಟ್ ಮಾತು ಶೋಭೆ ತರುವಂಥದ್ದಲ್ಲ. ಆತ ಈ ದೇಶದಲ್ಲಿ ಬದುಕಿರೋದಕ್ಕೇ ಯೋಗ್ಯನಲ್ಲ. ಹುಚ್ಚನೊಬ್ಬನ ದೇಶಪ್ರೇಮ ಮಂಜುನಾಥ್ ಮೃತದೇಹಕ್ಕೆ ಅಂತಿಮ ನಮನದ ಮೂಲಕ ಗೊತ್ತಾಗುತ್ತೆ. ರಾಬರ್ಟ್ ಗೆ ಏನಾಗಿದೆ?

ಭಯೋತ್ಪಾದಕ ದಾಳಿಗಳು ನಡೆದಿವೆ ಹಿಂದೆಲ್ಲ. ಭಯೋತ್ಪಾದಕರು ಇರೋದೇ ಜಿಹಾದಿ ಮಾನಸಿಕತೆಯವರು. ಅವರಿಗೆ ಮನುಷ್ಯತ್ವ ಇರೋದಿಲ್ಲ. ಸ್ವರ್ಗಕ್ಕೆ ಇವರು ಹೋಗೋಕೆ ಸಾಧ್ಯವಿಲ್ಲ. ನಾವೇ ಭಿಕ್ಷೆ ಕೊಟ್ಟ ಪಾಕಿಸ್ತಾನಕ್ಕೆ ಮೊದಲು ಬಲಿ ಹಾಕಿದರೆ ಎಲ್ಲ ಸರಿಯಾಗುತ್ತೆ. ಪಾಕಿಸ್ತಾನದ ಸರ್ವನಾಶ ಆಗಲೇಬೇಕು.

ನೆಹರೂ ಮಾಡಿದ ದೇಶದ್ರೋಹದ ಕೃತ್ಯ ಇದು. ಪಾಕಿಸ್ತಾನದಲ್ಲಿ ಹಿಂದೂಗಳ ಮಾರಣಹೋಮ ನಡೆಯುತ್ತಿದೆ. ಭಾರತದಲ್ಲಿರೋ ಮುಸ್ಲೀಮರನ್ನು, ಪಾಕಿಸ್ತಾನದ ಹಿಂದೂಗಳನ್ನೊಮ್ಮೆ ನೋಡಿ.

ಭದ್ರತಾಪಡೆಯ ವಿಫಲತೆ ಅಂತ ಕಾಂಗ್ರೆಸ್ ಟೀಕಿಸುತ್ತಿದೆ. ದೇಶದ್ರೋಹದ ಮತ್ತೊಂದು ಮುಖ ಇದು. ಪ್ರಜಾಪ್ರಭುತ್ವಕ್ಕೆ ಮಾಡುತ್ತಿರೋ ದ್ರೋಹ ಇದು.ಗಾಂಧೀಜಿ, ಇಂದಿರಾಗಾಂಧಿ, ರಾಜೀವ್ ಗಾಂಧಿ ಹತ್ಯೆಯಾದ ಸಂದರ್ಭದಲ್ಲಿ ಏನು ಮಾತಾಡಿದ್ದೀರಿ? ತ್ಯಾಗ ಬಲಿದಾನದ ಮಾತಾಡ್ತೀರಿ. ನೆರೇಟಿವ್ ಸೆಟ್ ಮಾಡ್ತಿರೋ ನಿಮ್ಮ ಮಾನಸಿಕತೆ ಎಂಥದ್ದು ಕಾಂಗ್ರೆಸ್ಸಿಗರೇ…ಕರ್ನಾಟಕದಲ್ಲೂ ಭಯೋತ್ಪಾದಕ ಕೃತ್ಯ ನಡೀತಲ್ಲ… ರಾಬರ್ಟ್ ಗೆ ಕಪಾಳಮೋಕ್ಷ ಮಾಡಬಹುದಿತ್ತಲ್ಲ…

ಭಾರತದ ತಾಖತ್ತು ಏನೆಂದು ಗೊತ್ತಿದೆ ಜಗತ್ತಿಗೆ. ಮೋದಿ ಅದಾಗಲೇ ಭಯೋತ್ಪಾದಕರ ವಿರುದ್ಧ ನಿರ್ಣಯಗಳು ತೆಗೆದುಕೊಂಡಿದ್ದಾರೆ. ಪಾಕಿಸ್ತಾನದ ಎಲ್ಲ ವೀಸಾ ರದ್ದು ಮಾಡಿದೆ. ಜಾಗಖಾಲಿ ಮಾಡಲು ಪಾಕಿಸ್ತಾನಿಗಳಿಗೆ ಹೇಳಿದೆ. ವಾಯುಮಾರ್ಗ ಬಂದ್ ಮಾಡಿದೆ. ಪಾಕಿಸ್ತಾನದ ಟ್ವಿಟರ್ ಖಾತೆ ಬಂದ್ ಮಾಡಿದೆ.

ಪಾಕಿಸ್ತಾನದ ಸರ್ವನಾಶ ಖಚಿತ. ಹಿಂದೂಗಳನ್ನೇ ಮೊದಲಿಂದಲೂ ಟಾರ್ಗೆಟ್ ಮಾಡುತ್ತಾ ಬಂದಿದ್ದಾರೆ. ನೆಹರೂ ಕಾಲದಿಂದಲೂ ನಡೆಯುತ್ತಾ ಬಂದಿದೆ. ಕಾಂಗ್ರೆಸ್ ದೇಶದ್ರೋಹದ ಕೆಲಸ ಮಾಡುತ್ತಿದೆ. ಕುತಂತ್ರದ ಕೆಲಸ ಮಾಡಬೇಡಿ.

ಪಾಕಿಸ್ತಾನದಲ್ಲಿ ಹಿಂದೂಗಳ, ಷಿಯಾಗಳ ಸ್ಥಿತಿ ಹೇಗಿದೆ? ಭದ್ರತಾ ವೈಫಲ್ಯದ ಬಗ್ಗೆ ಮಾತಾಡುವ ಸಂದರ್ಭವೇ ಇದೂ? ಪಾಕಿಸ್ತಾನದ ಭಯೋತ್ಪಾದನೆಗೆ ಕಾಂಗ್ರೆಸ್ ಶಕ್ತಿ ತುಂಬುತ್ತಿದೆ. ಹಿಂದುತ್ವದ ಬಗ್ಗೆ ಎಲ್ಲಿ ಹೋಗಿ ಮಾತಾಡಲಿ?

ಭಯೋತ್ಪಾದಕ ಕೃತ್ಯ ಮಟ್ಟಹಾಕುವ ಕೆಲಸ ಸಿಎಂ ಸಿದ್ದರಾಮಯ್ಯ ಹೇಳಿ ಮಾಡಲಿ. ನಿಮ್ಮ ಕಾಲಬುಡದಲ್ಲೇ ಕೃತ್ಯ ನಡೆದರೂ ಸುಮ್ಮನಿರ್ತೀರಿ. ಮೋದಿ ಪುಣ್ಯದ ಕೆಲಸಗಳಲ್ಲಿ ಭಾಗಿಯಾಗಿ…ನಿಮ್ಮ ಪಾಪದ ಕೊಡ ತುಂಬಿದೆ ಕಾಂಗ್ರೆಸ್ಸಿಗರೇ…

ಸಿಎಂ ಆದಿಯಾಗಿ ಜವಾಬ್ದಾರಿಯುತ ನಡೆ ತೋರಿಸಲಿ.

ಹಿಂದೂಗಳಿಗೆ ಇರೋದು ಇದೊಂದೇ ರಾಷ್ಟ್ರ.