ದ್ರೋಹ- ವಂಚನೆ ಪ್ರಕರಣ;* *ಬೊಮ್ಮನಕಟ್ಟೆಯ ಜಯಮ್ಮ, ವಂದನಾ ಟಾಕೀಸ್ ಕೆ ಆರ್ ಪುರಂ ವಾಸಿ ಮಾರುತಿಗೆ ಜೈಲು ಶಿಕ್ಷೆ*
*ದ್ರೋಹ- ವಂಚನೆ ಪ್ರಕರಣ;*
*ಬೊಮ್ಮನಕಟ್ಟೆಯ ಜಯಮ್ಮ, ವಂದನಾ ಟಾಕೀಸ್ ಕೆ ಆರ್ ಪುರಂ ವಾಸಿ ಮಾರುತಿಗೆ ಜೈಲು ಶಿಕ್ಷೆ*
ದ್ರೋಹ, ವಂಚನೆ ಪ್ರಕರಣದಲ್ಲಿ ಆರೋಪಿತರಾಗಿದ್ದ ಬೊಮ್ಮನಕಟ್ಟೆಯ ಜಯಮ್ಮ ಮತ್ತು ವಂದನಾ ಟಾಕೀಸ್ ಕೆ.ಆರ್.ಪುರಂ ರಸ್ತೆ ವಾಸಿ ಮಾರುತಿಯನ್ನು ನ್ಯಾಯಾಲಯ 2 ವರ್ಷದ ಸಾದಾ ಕಾರಾಗೃಹ ವಾಸ ಹಾಗೂ ತಲಾ 22 ಸಾವಿರ ₹ ಗಳ ದಂಡ ವಿಧಿಸಿ ಆದೇಶಿಸಿದೆ.
ಏನಿದು ವಿವರ? ಏನಿದು ಪ್ರಕರಣ? ಇಲ್ಲಿದೆ ಪೊಲೀಸ್ ನೀಡಿದ ಸಂಪೂರ್ಣ ಮಾಹಿತಿ…
2018 ನೇ ಸಾಲಿನಲ್ಲಿ *ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದ್ರೋಹ, ವಂಚನೆ* ಗೆ ಸಂಬಂಧಿಸಿದಂತೆ *ಗುನ್ನೆ ಸಂಖ್ಯೆ 0079/2018 ಕಲಂ 406, 420, 323, 342,504, 506, 114 ಸಹಿತ 34 ಐಪಿಸಿ* ಪ್ರಕರಣ ದಾಖಲಾಗಿರುತ್ತದೆ.
ಆಗಿನ ತನಿಖಾಧಿಕಾರಿ ಗಳಾದ ದೇವರಾಜ ಜಿ. ಪೊಲೀಸ್ ಇನ್ಸಪೆಕ್ಟರ್, ಮಹಿಳಾ ಠಾಣೆ* ರವರು ತನಿಖೆಯನ್ನು ಪೂರ್ಣಗೊಳಿಸಿ *ಘನ 2 ನೇ ಜೆ.ಎಂ.ಎಫ್.ಸಿ ನ್ಯಾಯಾಲಯ, ಶಿವಮೊಗ್ಗ* ಕ್ಕೆ ಆರೋಪಿತರ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿರುತ್ತಾರೆ.
ಘನ ಸರ್ಕಾರದ ಪರವಾಗಿ ಕಿರಣ್ ಕುಮಾರ್ ಸರ್ಕಾರಿ ಅಭಿಯೋಜಕರು* ಪ್ರಕರಣದ ವಾದವನ್ನು ಮಂಡಿಸಿದ್ದು ಘನ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿತರಾದ *ಶ್ರೀಮತಿ ಜಯಮ್ಮ, 67 ವರ್ಷ, ಬೊಮ್ಮನಕಟ್ಟೆ, ಶಿವಮೊಗ್ಗ ಮತ್ತು ಮಾರುತಿ, 49 ವರ್ಷ, ವಂದನಾ ಟಾಕೀಸ್, ಕೆ. ಆರ್. ಪುರಂ, ಶಿವಮೊಗ್ಗ* ಇವರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ದಿನಾಂಕ: 22/04/ 2025 ರಂದು *ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಶಾರದಾ ಕೊಪ್ಪದ* ರವರು ಆರೋಪಿತರಿಗೆ ತಲಾ *02 ವರ್ಷ ಸಾದಾ ಕಾರವಾಸ ಹಾಗೂ ತಲಾ 22,000/- ರೂ ದಂಡ ದಂಡ ಕಟ್ಟಲು ವಿಫಲವಾದಲ್ಲಿ 06 ತಿಂಗಳ ಸಾದಾ ಕಾರವಾಸ ಶಿಕ್ಷೆ* ವಿಧಿಸಿ ಆದೇಶಿಸಿರುತ್ತಾರೆ.