ಜಿಲ್ಲಾಧಿಕಾರಿಗಳು ಗಮನ ಹರಿಸುವರಾ? ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮ ಸುಂದರ್ ಬಹಿರಂಗ ಪತ್ರ

ಜಿಲ್ಲಾಧಿಕಾರಿಗಳು ಗಮನ ಹರಿಸುವರಾ?

ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮ ಸುಂದರ್ ಬಹಿರಂಗ ಪತ್ರ

ಶಿವಮೊಗ್ಗನಗರದಲ್ಲಿ ನಡೆದಿರುವ ಸ್ಮಾರ್ಟ್ ಸಿಟಿ ಯೋಜನೆಯಡಿ 24*7 ಕುಡಿಯುವ ನೀರಿನ ಸಂಪರ್ಕಗಳನ್ನು ಹೊಸಮನೆ ಬಡಾವಣೆಯ ಸುಬ್ಬಯ್ಯ ಕಾಂಪ್ಲೆಕ್ಸ್ ಪಕ್ಕದ ಮುಖ್ಯ ರಸ್ತೆಗಳಲ್ಲಿ ಕೆಲವು ಮನೆಗೆ ಸಂಪರ್ಕವನ್ನು ನೀಡಿರುವುದಿಲ್ಲ ಹಾಗೂ ಮೀಟರ್ ಗಳನ್ನು ಅಳವಡಿಸಿರುವುದಿಲ್ಲ.

ರಸ್ತೆಗಳ ಮೇಲೆ ನೀರು ಸೋರಿಕೆ ಆಗುತ್ತಿದೆ ಅದೇ ರೀತಿ ಶರಾವತಿ ನಗರ ಬಡಾವಣೆಯ ವೀಣಾ ಶಾರದ ಕೆಳಗಿನ ರಸ್ತೆಯ ಮೂರನೇ ತಿರುವಿನಲ್ಲಿ ಅಲ್ಲೂ ಸಹ ಕೆಲವು ಮನೆಗಳಿಗೆ ಸಂಪರ್ಕ ನೀಡದೆ ಮನೆಯ ಮಾಲೀಕರು ದೂರು ನೀಡಿದ ಮೇರೆಗೆ ಬಂದು ಪರಿಶೀಲಿಸಿ ಗುಂಡಿ ತೋಡಿ ಒಂದು ತಿಂಗಳಾದರೂ ಸರಿಪಡಿಸಿ ಗುಂಡಿ ಮುಚ್ಚೆದೆ ಹೋಗಿದ್ದಾರೆ.
ಸರಿಪಡಿಸಲು ಚಾರ್ಜ್ ಆಗುತ್ತೆ ಎಂದು ತಿಳಿಸಿದ್ದಾರಂತೆ.

ಅದೇ ರೀತಿ, ಹೊಸಮನೆ ಬಡಾವಣೆಯ ಬೋವಿ ಕಾಲೋನಿಯಲ್ಲೂ ಎರಡು ಮೂರು ಮನೆಗಳಿಗೆ ಭೂಗತ ಕೇಬಲ್ ಅಳವಡಿಸಿ ವಿದ್ಯುತ್ ಸಂಪರ್ಕ ನೀಡದೆ ಹೋಗಿದ್ದಾರೆ ಅವರು ಸಹ ಗಮನಕ್ಕೆ ತಂದರು ಮೆಸ್ಕಾಂ ಗೆ ಹೋಗಿ ಖಾಸಗಿ ಅವರಿಂದ ಮಾಡಿಸಿಕೊಳ್ಳಿ ಎಂಬ ಉತ್ತರ ಸ್ಮಾರ್ಟ್ ಸಿಟಿ ಅಧಿಕಾರಿ ವರ್ಗದಿಂದ ಬಂದಿರುತ್ತದೆ. 8 *14 ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ಕೂಲಿಗೆ ಹೋಗುವ ಈ ಬಡ ಜನರು ಏನು ಮಾಡಲಿಕ್ಕೂ ಆಗದೆ ವಿದ್ಯುತ್ ಸಂಪರ್ಕ ಪಡೆಯದೆ ಜೀವಿಸುತ್ತಿದ್ದಾರೆ.

ಇಂತಹ ಹಲವಾರು ಲೋಪಗಳಿದ್ದರೂ ಸಂಪೂರ್ಣ ಕಾಮಗಾರಿ ಆಗದೆ ತರಾತುರಿಯಲ್ಲೇ ಸ್ಮಾರ್ಟ್ ಸಿಟಿಯಡಿ ಕಾಮಗಾರಿ ಮುಕ್ತಾಯ ಮಾಡಿ ಸರ್ಕಾರಕ್ಕೆ ಹಸ್ತಾಂತರ ಮಾಡಿ, ಈಗ ನಿರ್ವಹಣೆಯನ್ನು ಮಾಡದೆ ಸಾರ್ವಜನಿಕರಿಗೆ ತೊಂದರೆಯನ್ನು ಕೊಡುತ್ತಿರುವುದು ನ್ಯಾಯ ಸಮ್ಮತವೇ?

ಈ ಬಗ್ಗೆ ಸ್ಥಳೀಯ ಶಾಸಕರು ಗಮನ ಹರಿಸಬೇಕು. ಹಾಗೆಯೇ, ಜಿಲ್ಲಾ ಉಸ್ತುವಾರಿ ಸಚಿವರು ಸ್ಮಾರ್ಟ್ ಸಿಟಿಯ ಯೋಜನೆಯ ಅಧಿಕಾರಿಗಳಿಗೆ ಚಳಿ ಬಿಡಿಸಬೇಕು. ತಕ್ಷಣ ಈ ಕಾಮಗಾರಿಗಳನ್ನು ಮುಕ್ತಾಯ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಬೇಕು ಎಂದು ಆಗ್ರಹಿಸುತ್ತೇನೆ.

*ಎನ್ ಕೆ ಶ್ಯಾಮಸುಂದರ್, ಮಾಜಿನಗರ ಸಭಾ ಸದಸ್ಯರು ಹಾಗೂ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಕಾಂಗ್ರೆಸ್ ಶಿವಮೊಗ್ಗ*