ಶಿವಮೊಗ್ಗದ ಸರ್ಕಾರಿ ನೌಕರರ ವಿಕಾಸ ಕೇಂದ್ರದಲ್ಲಿ ಸದ್ದೋ ಸದ್ದು… ಸರ್ಕಾರಿ ಅಧಿಕಾರಿಗಳೇ ಕಂಗಾಲು!ಮೌನ ಮೂಡಿಸುವರಾ ಕೇಂದ್ರದ ಗೌರವಾಧ್ಯಕ್ಷರಾದ ಡಿ ಸಿ ಗುರುದತ್ತ ಹೆಗಡೆ?

ಶಿವಮೊಗ್ಗದ ಸರ್ಕಾರಿ ನೌಕರರ ವಿಕಾಸ ಕೇಂದ್ರದಲ್ಲಿ ಸದ್ದೋ ಸದ್ದು… ಸರ್ಕಾರಿ ಅಧಿಕಾರಿಗಳೇ ಕಂಗಾಲು!

ಮೌನ ಮೂಡಿಸುವರಾ ಕೇಂದ್ರದ ಗೌರವಾಧ್ಯಕ್ಷರಾದ ಡಿ ಸಿ ಗುರುದತ್ತ ಹೆಗಡೆ?

ಶಿವಮೊಗ್ಗದ ನಿಶ್ಯಬ್ದದ ಸ್ಥಳಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಬಸವನಗುಡಿ ಬಡಾವಣೆಯ ಸರ್ಕಾರಿ ಅಧಿಕಾರಿಗಳ ಕ್ವಾಟ್ರಸ್ ಇದೀಗ ಸದ್ದುಗದ್ದಲದಿಂದ ಸುದ್ದಿಯಾಗುತ್ತಿದೆ!

ಬಸವನ ಗುಡಿಯಲ್ಲಿರುವ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಸಿ.ಎಸ್.ಷಡಾಕ್ಷರಿಯವರ ಕನಸಿನ ಕೂಸಾದ ಶಿವಮೊಗ್ಗದ ಸರ್ಕಾರಿ ನೌಕರರ ವಿಕಾಸ ಕೇಂದ್ರ ಬಹಳಷ್ಟು ಅಧಿಕಾರಿಗಳ, ಅವರ ಕುಟುಂಬಗಳ, ವಿದ್ಯಾಭ್ಯಾಸದಲ್ಲಿ ತೊಡಗಿರುವ ಅವರ ಮಕ್ಕಳ ತಲೆನೋವಿಗೆ ಕಾರಣವಾಗುತ್ತಿದೆ!

ಸರ್ಕಾರಿ ನೌಕರರ ನೆಮ್ಮದಿಗೆ ಕಾರಣವಾಗಬೇಕಿದ್ದ ಈ ಸರ್ಕಾರಿ ನೌಕರರ ವಿಕಾಸ ಕೇಂದ್ರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಧ್ವನಿ ವರ್ಧಕಗಳ ಸದ್ದು ಎದೆ ಸೀಳುವಂತೆ ರಾತ್ರಿ ಘರ್ಜಿಸುತ್ತಿರುವುದು ಸರ್ಕಾರಿ ಅಧಿಕಾರಿಗಳ ಪಾಲಿಗೆ ನುಂಗಲಾರದ ತುತ್ತಾಗಿದೆ.

ಸದ್ದು ಗದ್ದಲದಿಂದ ಪ್ರತಿರಾತ್ರಿ ತೊಂದರೆಗೊಳಗಾದರೂ ಸರ್ಕಾರಿ ಅಧಿಕಾರಿಗಳು, ಅವರ ಕುಟುಂಬ ವರ್ಗ ಹೇಳುವಂತಿಲ್ಲ, ಅನುಭವಿಸುವಂತಿಲ್ಲ. ಅನುಭವಿಸಲಾರದೇ ಅನುಭವಿಸುವ ಪರಿಸ್ಥಿತಿ ಅವರದು!

ಶಿವಮೊಗ್ಗದ ಜಿಲ್ಲಾಧಿಕಾರಿಗಳೇ ಈ ಶಿವಮೊಗ್ಗ ಸರ್ಕಾರಿ ನೌಕರರ ವಿಕಾಸ ಕೇಂದ್ರಕ್ಕೆ ಗೌರವ ಅಧ್ಯಕ್ಷರು. ಇನ್ನೂ ವಿಶೇಷವೆಂದರೆ, ಈ ವಿಕಾಸ ಕೇಂದ್ರದ ಪಕ್ಕದಲ್ಲಿಯೇ ಸಂಘದ ರಾಜ್ಯಾಧ್ಯಕ್ಷರ ನಿವಾಸ, ನಿವಾಸದೊಳಗೆ ಕುಟುಂಬವಿದೆ. ಅಂತೆಯೇ, ಜಿಲ್ಲಾಧಿಕಾರಿಗಳ ಮನೆ ಕೂಡ ಕೂಗಳತೆ ದೂರದಲ್ಲಿಯೇ ಇದೆ.

ಈಗಲಾದರೂ ಸದ್ದು ಗದ್ದಲ ಮಾಡಿ ಸರ್ಕಾರಿ ಅಧಿಕಾರಿಗಳ ಮನೆ, ಮನ ಕಲಕುತ್ತಿರುವ ಸರ್ಕಾರಿ ನೌಕರರ ವಿಕಾಸ ಕೇಂದ್ರದ ಸದ್ದಡಗಿಸುವರೇ? ಸರ್ಕಾರಿ ಜನಕ್ಕೆ ನೆಮ್ಮದಿ ಕೊಡುವರೇ?