ಹೊಳಲೂರು ಏತ ನೀರಾವರಿ ಯೋಜನೆ: ಸಣ್ಣ ನೀರಾವರಿ ಸಚಿವರಿಗೆ ಗ್ರಾಮಸ್ಥರ ಮನವಿ*
*ಹೊಳಲೂರು ಏತ ನೀರಾವರಿ ಯೋಜನೆ: ಸಣ್ಣ ನೀರಾವರಿ ಸಚಿವರಿಗೆ ಗ್ರಾಮಸ್ಥರ ಮನವಿ*![](https://malenaduexpress.com/wp-content/uploads/2025/02/IMG-20250214-WA0821.jpg)
ಶಿವಮೊಗ್ಗ: ಹೊಳಲೂರು ಏತ ನೀರಾವರಿ ಯೋಜನೆಯ ನಿರ್ವಹಣೆಗೆ ಗಮನಹರಿಸಬೇಕು ಎಂದು ಹೊಳಲೂರು ಸುತ್ತಮುತ್ತ ಗ್ರಾಮಗಳ ಗ್ರಾಮಸ್ಥರು ಗುರುವಾರ ಸಣ್ಣ ನೀರಾವರಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದರು.
ಹೊಳಲೂರು ಏತ ನೀರಾವರಿ ಯೋಜನೆ ತುಂಗಾ ಭದ್ರಾ ನದಿಯಿಂದ ನೀರೆತ್ತುವುದಾಗಿದೆ. ಸುತ್ತಮುತ್ತಲ ಗ್ರಾಮಗಳಾದ ಬೂದಿಗೆರೆ ಕೆರೆ, ನಾರಾಯಣ ಕೆರೆ, ಸುತ್ತುಕೋಟೆ ಅಯ್ಯನ ಕೆರೆ ಮತ್ತು ಸೀಗೆ ಕೆರೆಗಳಿಗೆ ನೀರೊದಗಿಸುವ ಯೋಜನೆಯಾಗಿದ್ದು, ಇದು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಈ ಯೋಜನೆ ನಿರ್ವಹಣೆಗೆ ತಾಂತ್ರಿಕ ನೈಪುಣ್ಯತೆ ಹೊಂದಿದ ಸಂಸ್ಥೆ ಮತ್ತು ಜನರು ಬೇಕಾಗಿದೆ. ಇಲ್ಲಿರುವ ಪಂಪ್, ಮೋಟಾರ್ ಗಳು ಕೆಟ್ಟು ಹೋಗಿವೆ ಎಂದು ಗ್ರಾಮಸ್ಥರು ತಿಳಿಸಿದರು.
ತುಂಗಾ ಏತ ನೀರಾವರಿ ವಲಯದ ಏತ ನೀರಾವರಿ ಯೋಜನೆಯಲ್ಲಿ ನಿರ್ವಹಣೆಗೋಸ್ಕರ ಟೆಂಡರ್ ಕರೆದು ನಿರ್ವಹಿಸಲಾಗುತ್ತಿದೆ. ಇಲ್ಲಿನ ಪಂಪ್ ಮತ್ತು ಮೋಟರ್ ಗಳನ್ನು ಸುಸ್ಥಿತಿಯಲ್ಲಿಡಬೇಕಾಗುತ್ತದೆ. ಪದೇ ಪದೇ ಪಂಪ್, ಮೋಟರ್ ಗಳು ಸುಟ್ಟು ಹೋಗುತ್ತಿವೆ. ಈ ಎಲ್ಲಾ ವಿಷಯ ಪರಿಶೀಲಿಸಿ ಸಮರ್ಪಕ ನಿರ್ವಹಣೆಗೆ ತಾಂತ್ರಿಕ ನೈಪುಣ್ಯತೆ ಹೊಂದಿದ ಸಂಸ್ಥೆಯವರಿಗೆ ನೀಡಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸ್ವೀಕರಿಸಿದ ಸಚಿವರು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಆರ್. ಪ್ರಸನ್ನಕುಮಾರ್, ಆಯನೂರು ಮಂಜುನಾಥ್, ಸುಂದರೇಶ್, ವೈ.ಹೆಚ್. ನಾಗರಾಜ್, ಕಲಗೋಡು ರತ್ನಾಕರ್, ಗ್ರಾಮಸ್ಥರಾದ ಹಾಲೇಶ್, ಜಿ.ಎನ್. ಶ್ರೀಧರ್, ಮಲ್ಲೇಶಪ್ಪ, ರುದ್ರಪ್ಪ, ಚಂದ್ರಪ್ಪ, ಶೇಖರಪ್ಪ,