ಶಿವಮೊಗ್ಗ ರಂಗಾಯಣ: ನಾಟಕ ನಿರ್ದೇಶಕರಿಂದ ಅರ್ಜಿ ಆಹ್ವಾನ*

*ಶಿವಮೊಗ್ಗ ರಂಗಾಯಣ: ನಾಟಕ ನಿರ್ದೇಶಕರಿಂದ ಅರ್ಜಿ ಆಹ್ವಾನ*

ಶಿವಮೊಗ್ಗ

ಶಿವಮೊಗ್ಗ ರಂಗಾಯಣವು ಏಪ್ರಿಲ್ 2025ರಲ್ಲಿ ಆಯೋಜಿಸುತ್ತಿರುವ ಮಕ್ಕಳ ಬೇಸಿಗೆ ಶಿಬಿರ-2025ಕ್ಕೆ ಮಕ್ಕಳಿಗೆ ರಂಗತರಬೇತಿ, ನಾಟಕ ನಿರ್ದೇಶನ ಮಾಡಲು ರಂಗಭೂಮಿಯ ಹಿನ್ನಲೆಯುಳ್ಳ, ನಾಟಕದಲ್ಲಿ ಅಭಿನಯಿಸಿರುವ ಮತ್ತು ನಾಟಕ ನಿರ್ಮಾಣದಲ್ಲಿ ಪರಿಣಿತಿ ಹೊಂದಿರುವ 23-40 ವರ್ಷ ವಯೋಮಿತಿಯ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಸ್ವವಿವರದೊಂದಿಗೆ ಆಡಳಿತಾಧಿಕಾರಿಗಳು, ರಂಗಾಯಣ, ಶಿವಮೊಗ್ಗ ಇವರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಅಥವಾ ಇ-ಮೇಲ್ admn.rangayanashivamogga@gmail.com ಮೂಲಕ ಮಾ. 05 ರೊಳಗಾಗಿ ಸಲ್ಲಿಸುವುದು.
ಶಿವಮೊಗ್ಗ ರಂಗಾಯಣದ ಶಿಬಿರದಲ್ಲಿ 25 ದಿನಗಳು ಕಡ್ಡಾಯವಾಗಿ ಉಪಸ್ಥಿತರಿರಬೇಕು. ಗೌರವ ಸಂಭಾವನೆ ರೂ. 16,000/- ಜೊತೆಗೆ ವಸತಿ, ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಆಯ್ಕೆಗೆ ಸಂಬAಧಿಸಿದAತೆ ರಂಗಾಯಣದ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ರಂಗಾಯಣದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-256353 ನ್ನು ಸಂಪರ್ಕಿಸುವುದು.