ದುಬೈನಲ್ಲಿ ನೋಬೆಲ್ ಕನ್ನಡಿಗ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ;* *ಶಿವಮೊಗ್ಗ ಮೂಲದ ಉದ್ಯಮಿ ಕೆ.ಆರ್.ವೆಂಕಟೇಶ್ ಗೌಡರಿಗೆ ಈ ಪ್ರಶಸ್ತಿ ನೀಡಿದ ದುಬೈ ಸಂಘಗಳು…* *ಹೇಗಿತ್ತು ಸಮಾರಂಭ? ಇಲ್ಲಿದೆ ವಿವರ…*

*ದುಬೈನಲ್ಲಿ ನೋಬೆಲ್ ಕನ್ನಡಿಗ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ;*

*ಶಿವಮೊಗ್ಗ ಮೂಲದ ಉದ್ಯಮಿ ಕೆ.ಆರ್.ವೆಂಕಟೇಶ್ ಗೌಡರಿಗೆ ಈ ಪ್ರಶಸ್ತಿ ನೀಡಿದ ದುಬೈ ಸಂಘಗಳು…*

*ಹೇಗಿತ್ತು ಸಮಾರಂಭ? ಇಲ್ಲಿದೆ ವಿವರ…*

ಕನ್ನಡಾಂಬೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ ಹಾಗೂ ದುಬೈ ಕನ್ನಡಿಗರ ಒಕ್ಕೂಟದ ವತಿಯಿಂದ ಫೆ. 22 ರಂದು ದುಬೈನಲ್ಲಿ ನಡೆದ ಕನ್ನಡ ಸಾಂಸ್ಕೃತಿಕ ಉತ್ಸವದಲ್ಲಿ ದಿ ಗ್ರಾಜುಯೇಟ್ ಕ್ಲಬ್ ಸಂಸ್ಥೆಯ ಸಂಸ್ಥಾಪಕರೂ ಹಾಗೂ ಪ್ರೇರಣಾ ಗ್ರೂಪ್ ಆಫ್ ಕಂಪನೀಸ್ ಸಂಸ್ಥೆಯ ಮಾಲೀಕರಾದ ಕೆ. ಆರ್.ವೆಂಕಟೇಶ್ ಗೌಡ ರವರಿಗೆ *ನೋಬೆಲ್ ಕನ್ನಡಿಗ* ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದಭ೯ದಲ್ಲಿ ದುಬೈನ ಭ್ರಷ್ಠಾಚಾರ ನಿಗ್ರಹ ದಳದ ಮುಖ್ಯಸ್ಥರಾದ ಫಹಾದ್ ಅಲಾಹ್ೊಶ್ಮಿ , ದುಬೈ ಕನ್ನಡ ಸಂಘ ದ ಅಧ್ಯಕ್ಷರಾದ ಸದನ್ ದಾಸ್ ರವರು, ಬೆಂಗಳೂರು ಮೂಲದ, ದುಬೈನಲ್ಲಿ ನೆಲಸಿರುವ ಯಶಸ್ವಿ ವೈದ್ಯರಾದ ಶ್ರೀಮತಿ ರಶ್ಮಿ ನಂದಕಿಶೋರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಖ್ಯಾತ ಉದ್ಯಮಿಗಳೂ, ಸಾಹಿತಿಗಳೂ, ಪ್ರಖ್ಯಾತ ವೈದ್ಯರಾದ ಅಕ್ಬರ್ ಶಾ- ಇ ಬಾಷಾ ರವರು ಅಧ್ಯಕ್ಷತೆ ವಹಿಸಿದ್ದರು.

ಕಾಯ೯ಕ್ರಮದ ರೂವಾರಿ ಗುಣವಂತ ಮಂಜುರವರ ನೇತೃತ್ವದ ಈ ಕಾಯ೯ಕ್ರಮವನ್ನು ದೂರದಶ೯ನದ ಪ್ರಖ್ಯಾತ ನಿರೂಪಕಿ *ಶ್ರೀಮತಿ ಸವಿ ಪ್ರಕಾಶ್ ರವರು ನಿರೂಪಣೆ ಮಾಡಿದರು.