ಕುವೆಂಪು ವಿ.ವಿ.ಪತ್ರಿಕೋದ್ಯಮ ವಿದ್ಯಾರ್ಥಿನಿ ಭಾರ್ಗವಿ ಜಿ.ಆರ್. ಲೇಖನ….* *ಎಚ್ಚರವಿರಲಿ ಜಾಲತಾಣಗಳ ಸಾಮಾಜಿಕ ಬಳಕೆಯಲ್ಲಿ*
*ಕುವೆಂಪು ವಿ.ವಿ.ಪತ್ರಿಕೋದ್ಯಮ ವಿದ್ಯಾರ್ಥಿನಿ ಭಾರ್ಗವಿ ಜಿ.ಆರ್. ಲೇಖನ….*
*ಎಚ್ಚರವಿರಲಿ ಜಾಲತಾಣಗಳ ಸಾಮಾಜಿಕ ಬಳಕೆಯಲ್ಲಿ*
ಸಾಮಾಜಿಕ ಜಾಲತಾಣಗಳ ಸುರಕ್ಷತೆ ಎನ್ನುವುದು ಡಿಜಿಟಲ್ ಯುಗದಲ್ಲಿ ನಾವು ಎದುರಿಸುತ್ತಿರುವ ಅತಿ ದೊಡ್ಡ ಸವಾಲು.ಇಂದು ಸಾಮಾಜಿಕ ಜಾಲತಾಣ ಸಮಾಜದ ಮುಖ್ಯ ಅಂಗವಾಗಿದ್ದು, ಜಾತಿ ಮತ ಬಡವ ಶ್ರೀಮಂತ ಹಿರಿಯ ಕಿರಿಯ ಎಂಬ ಭೇದವಿಲ್ಲದೆ ಪ್ರತಿಯೊಬ್ಬರೂ ಕೂಡ ಬಳಸುವಂತಹ ಮತ್ತು ನಂಬುವಂತಹ ಮಾಧ್ಯಮವಾಗಿಬಿಟ್ಟಿದೆ.
ಅಂದಾಜು 3.81 ಶತಕೋಟಿ ಜನರು ಸಾಮಾಜಿಕ ಜಾಲತಾಣದಲ್ಲಿ ತೊಡಗಿ ಹಲವಾರು ಜನರಿಗೆ ಮನೋರಂಜನೆ, ಸುದ್ದಿ, ಮಾಹಿತಿ ಕುಳಿತಲ್ಲಿಯೇ ದೊರೆಯುವಂತೆ ಮಾಡಿದೆ. ಜನರನ್ನು ಅತಿ ವೇಗವಾಗಿ ತಲುಪುವ ಮಾಧ್ಯಮವಾಗಿ ಬೆಳೆದುಬಿಟ್ಟಿದೆ. ಜನರು ಸಾಮಾಜಿಕ ಜಾಲತಾಣಗಳ ಸೆಳೆತಕ್ಕೆ ಕಾರಣವಾಗುವುದು, ಯೂಟ್ಯೂಬ್ -ಫೇಸ್ ಬುಕ್- ವಾಟ್ಸಪ್ ನಂತಹ ಅನೇಕ ಮನೋರಂಜನೆ ಮತ್ತು ಸುದ್ದಿವಾಹಕ ತಾಣಗಳಿಂದ. ಇಂಥವುಗಳಿಂದ ಮಾಹಿತಿಯನ್ನು ಅತಿ ವೇಗವಾಗಿ ಕಳುಹಿಸಿ ಸಂಪರ್ಕ ಸಾಧಿಸಬಹುದು.
ಓ ಎಲ್ ಎಕ್ಸ್, ಅಮೆಜಾನ್ ನಂತಹ ಹಲವಾರು ತಾಣಗಳು ಇಂದು ಇಡೀ ಮಾರುಕಟ್ಟೆಯನ್ನೇ ನಮ್ಮ ಕೈ ಬೆರಳ ತುದಿಯಲ್ಲಿ ದೊರಕುವಂತೆ ಮಾಡಿರುವುದರಿಂದ ಜನರು ಸೋಮಾರಿಗಳು ಸಹ ಆಗಿದ್ದಾರೆ ಮತ್ತು ಆಕರ್ಷಣೆಗೆ ಒಳಗಾಗಲು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಭಾರತ ಸರ್ಕಾರವು ಚೀನಾದ appಗಳನ್ನು ನಿಷೇಧಿಸಿತು. ಇದಕ್ಕೆ ಸರ್ಕಾರ ಕೊಟ್ಟ ಕಾರಣ ಭಾರತೀಯರ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿದೆ, ಮತ್ತು ಮಾರಾಟ ಮಾಡಲಾಗುತ್ತಿದೆ ಎಂದು. ಹೀಗೆ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಮತ್ತು ಮಕ್ಕಳ ಭಾವಚಿತ್ರ ವಿಡಿಯೋಗಳನ್ನು ತೆಗೆದು ಅದನ್ನು ದುರುಪಯೋಗ ಪಡಿಸಲಾಗುತ್ತಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣ ಎಷ್ಟು ಉಪಕಾರಿಯೋ ಅಷ್ಟೇ ಅಪಾಯಕಾರಿ ಆಗುತ್ತಿದೆ. ಆದ್ದರಿಂದ, ಸಾಮಾಜಿಕ ಜಾಲತಾಣಗಳ ಸುರಕ್ಷತೆಯ ಬಗ್ಗೆ ಸರಕಾರ ಮತ್ತು ಜನತೆ ಎಚ್ಚರ ವಹಿಸಬೇಕಾಗುತ್ತದೆ. ಪ್ಲೇ ಸ್ಟೋರ್ ನಂತಹ ತಾಣಗಳಲ್ಲಿ ಹಲವಾರು ರೀತಿಯ ಆಪ್ ಗಳು ಸಿಗುತ್ತವೆ. ಅವುಗಳಲ್ಲಿ ಯಾವುದು ಕೆಡುಕನ್ನು ಬೆಂಬಲಿಸುತ್ತದೆಯೋ ಅದರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳ ಸತ್ಯಾಸತ್ಯತೆಯನ್ನು ತಿಳಿದು ಹಂಚಬೇಕಾಗಿದೆ ಹಾಗೂ ಸುದ್ದಿಗಳನ್ನು ಹಂಚುವಾಗ ಈ ಬಗ್ಗೆ ಸಾಮಾಜಿಕ ಕಾಳಜಿ ಗಮನಿಸಿ ಆಗುವಂತಹ ಕೆಡುಕನ್ನು ತಡೆಯಬೇಕಾಗಿದೆ.
– *ಭಾರ್ಗವಿ ಜಿ ಆರ್.*
ಕುವೆಂಪು ವಿಶ್ವ ವಿದ್ಯಾಲಯ ಶಂಕರಘಟ್ಟ.
ಪತ್ರಿಕೋಧ್ಯಮ ವಿದ್ಯಾರ್ಥಿ