ಗೌರವಧನದೊಂದಿಗೆ ಮಹಿಳೆಯರಿಗೆ* *ಎಲ್.ಐ.ಸಿ.ಯಿಂದ ಉದ್ಯೋಗಾವಕಾಶ*
*ಗೌರವಧನದೊಂದಿಗೆ ಮಹಿಳೆಯರಿಗೆ* *ಎಲ್.ಐ.ಸಿ.ಯಿಂದ ಉದ್ಯೋಗಾವಕಾಶ*
ದೇಶದ ಬಹುದೊಡ್ಡ ಜೀವವಿಮಾ ಸಂಸ್ಥೆಯಾದ ಲೈಫ್ ಇನ್ಸೂರೆನ್ಸ್ ಕಾಪೊ೯ರೇಷನ್ ಆಫ್ ಇಂಡಿಯಾ (ಎಲ್.ಐ.ಸಿ.) ಮಹಿಳೆಯರಿಗಾಗಿ ಬಿಮಾಸಖಿ ನಾಮಾಂಕಿತದಲ್ಲಿ ಗೌರವಧನದೊಂದಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವ ಯೋಜನೆಯೊಂದನ್ನು ಪರಿಚಯಿಸಿದೆ.
ಕನಿಷ್ಟ ಹತ್ತನೆ ತರಗತಿ ಪಾಸಾಗಿರುವ 18 ರಿಂದ 70 ವಷ೯ ವಯೋಮಿತಿಯ ಮಹಿಳೆಯರು ಈ ವಿಶೇಷ ಯೋಜನೆಯ ಲಾಭ ಪಡೆಯಬಹುದು, ಪದವಿ ಇನ್ನಿತರೆ ಶಿಕ್ಷಣ ಪಡೆದು ಉದ್ಯೋಗದ ನಿರೀಕ್ಷೆಯಲ್ಲಿರುವವರು ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಹೊಂದಲು ಬಿಮಾಸಖಿ ನೆರವಾಗಲಿದೆ.
ಈ ಕುರಿತು ಆಸಕ್ತ ಮಹಿಳೆಯರಿಗಾಗಿ ನಗರದ ಶ್ರೀ ಕಲಾ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಸಂಸ್ಥೆ ಸಭಾಂಗಣದಲ್ಲಿ ಇದೇ ಫೆ-22ರಂದು ಶನಿವಾರ ಬೆಳಿಗ್ಗೆ 11ಗಂಟೆಗೆ ಮಾಹಿತಿ ಶಿಬಿರ ಏಪ೯ಡಿಸಿದೆ, ಎಲ್.ಐ.ಸಿ.ಯ ಅಭಿವೃದ್ಧಿ ಅಧಿಕಾರಿಗಳಾದ ಯು. ದೀಪಿಕಾ ಶಿಬಿರದಲ್ಲಿ ಮಾಹಿತಿ ನೀಡಲಿದ್ದಾರೆ.
ಎಸ್.ಎಸ್.ಎಲ್.ಸಿ. ಮಾಕ್೯ಕಾಡ್೯, ಪಾಸ್ ಪೋರ್ಟ್ ಸೈಜ್ ಫೋಟೋ-4, ಆಧಾರ್+ಪಾನ್ ಕಾಡ್೯, ಬ್ಯಾಂಕ್ ಪಾಸ್ ಬುಕ್ ದಾಖಲೆಗಳೊಂದಿಗೆ ಶಿಬಿರದಲ್ಲಿ ಭಾಗವಹಿಸಬಹುದು, ಹೆಚ್ಚಿನ ಮಾಹಿತಿಗಾಗಿ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರ, ಒಂದನೆ ಮಹಡಿ, ನಿವೃತ್ತ ನೌಕರರ ಸಂಘ, ಆರ್.ಟಿ.ಒ. ಆಫೀಸ್ ರಸ್ತೆ, ಶಿವಮೊಗ್ಗ. ಮೊಬೈಲ್ : 9448143165/9342158359 ಸಂಪರ್ಕಿಸಬಹುದು.