ಕಾಸರಗೋಡಿನ ನವ್ಯಶ್ರೀ ಟೀಚರ್ ಈಗ ಫುಲ್ ವೈರಲ್! ಕರ್ನಾಟಕದ ಶಾಲೆಗಳಲ್ಲೂ ಈ ಪ್ರಯೋಗ ನಡೆಯಲಿ!

ಇದೊಂದು ಮಲೆಯಾಳಿ ರೀಲ್ಸ್… ಟೀಚರ್ ಬೆನ್ನ ಹಿಂದೆ ಸಾಲುಗಟ್ಟಿ ನಿಂತ ಮಕ್ಕಳು.. ” ಟೀಚರೇ… ” ಅಂತ ಟೀಚರನ್ನ ಕರೆಯುತ್ತಾರೆ…
ಅವರ ಸ್ವರದ ಗುರುತು ಹಿಡಿಯುವ ಟೀಚರ್ ಸರಿ ಸುಮಾರು ಇಪ್ಪತ್ತೈದು ಮೂವತ್ತು ಮಕ್ಕಳು ಹೆಸರು ಹೇಳುತ್ತಾರೆ, ಕೇವಲ ಎರಡು ಮೂರು ಮಕ್ಕಳ ಹತ್ರ ಇನ್ನೊಮ್ಮೆ ಕರಿ ಅಂತ ಹೇಳುತ್ತಾರೆ… ಉಳಿದಂತೆ ಅಷ್ಟೂ ಮಕ್ಕಳ ಧ್ವನಿಯಿಂದಲೇ ಮಕ್ಕಳನ್ನ ಗುರುತಿಸುತ್ತಾರೆ… ಕೇವಲ ತನ್ನ ಸ್ಟೂಡೆಂಟ್ ಗಳು ಅನ್ನುವ ಭಾವ ಇಟ್ಟುಕೊಂಡಲ್ಲಿ ಇದು ಸಾಧ್ಯವಾದೀತು ಅಂತ ಅನಿಸುವುದಿಲ್ಲ…
ಸ್ಟೂಡೆಂಟ್ ಅನ್ನುವ ಭಾವಕ್ಕಿಂತಲೂ ಮಿಗಿಲಾದ ಹೃದಯ ಸಂಬಂಧ ಇದ್ದರೆ ಮಾತ್ರ ಇದು ಸಾಧ್ಯವೇನೋ..?
ಖುಷಿ ಕೊಟ್ಟ ರೀಲ್ಸ್…

ಅಂದ ಹಾಗೆ ಇವರು ಕಾಸರಗೋಡಿನ ನವ್ಯಶ್ರೀ ಟೀಚರ್.!🙏