ಉತ್ತಮ ಸಮಾಜ ನಿರ್ಮಾಣದಲ್ಲಿ ಕಲೆಗಳ ಪಾತ್ರ ದೊಡ್ಡದು- ಡಾ. ನಾಗೇಶ್ ಬೆಟಕೋಟೆ*
*ಉತ್ತಮ ಸಮಾಜ ನಿರ್ಮಾಣದಲ್ಲಿ ಕಲೆಗಳ ಪಾತ್ರ ದೊಡ್ಡದು- ಡಾ. ನಾಗೇಶ್ ಬೆಟಕೋಟೆ*
ಶಿವಮೊಗ್ಗ : ಎಲ್ಲಿ ಸಾಂಸ್ಕøತಿಕ ಮನಸ್ಸುಗಳು ಇರುತ್ತೋ ಅಂತಹ ಸಮಾಜ ಉತ್ತಮವಾಗಿರುತ್ತೆ. ಕೆಲವು ಪ್ರದೇಶಗಳಿಗೆ ಸೀಮಿತವಾಗಿದ್ದ, ಇಂತಹ ವಿವಿಧ ಕಲಾ ಪ್ರಕಾರದ ಅಧ್ಯಯನದೊಂದಿಗೆ ರಾಜ್ಯ, ರಾಷ್ಟ್ರ ಮಾತ್ರವಲ್ಲದೆ ವಿದೇಶಗಳಲ್ಲೂ ಇದನ್ನು ಪಸರಿಸುವಂತ ಕಾರ್ಯವನ್ನು ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ವಿಶ್ವವಿದ್ಯಾಲಯ ಮಾಡುತ್ತಿದೆ ಎಂದು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ನಾಗೇಶ್ ಬೆಟಕೋಟೆ ಅವರು ತಿಳಿಸಿದರು.
ಅವರು ಇಂದು ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ “ಜಯಚಾಮರಾಜೇಂದ್ರ ಒಡೆಯರ್” ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ರಾಜ್ಯಮಟ್ಟದ ಪರೀಕ್ಷೆಗಳ ಪರೀಕ್ಷಕರು, ಮಾರ್ಗದರ್ಶಕರು ಹಾಗೂ ಗುರುಗಳ ಮೂಲ ದಾಖಲಾತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸದ್ಯ ವಿಶ್ವವಿದ್ಯಾಲಯದಲ್ಲಿ ಸುಮಾರು 17 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, ಇಲ್ಲಿ ಕಲಿತವರಿಗೆ ಉದ್ಯೋಗ ಸೇರಿದಂತೆ, ಹಲವು ಕ್ಷೇತ್ರಗಳಲ್ಲಿ ಮನ್ನಣೆ ದೊರೆಯುವುದರ ಜೊತೆಗೆ ನಮ್ಮ ಕಲೆ ಸಂಸ್ಕøತಿ ಉಳಿಸಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ ಸೈಯದ್ ಸನಾವುಲ್ಲ ಉಪಸ್ಥಿತರಿದ್ದರು. ಸುಮಾರು ಐದು ಜಿಲ್ಲೆಗಳಿಂದ 200ಕ್ಕೂ ಹೆಚ್ಚು ಸಂಗೀತ, ನೃತ್ಯ ಕ್ಷೇತ್ರಗಳಲ್ಲಿ ತರಬೇತಿ ನೀಡಿದ ಗುರಗಳು, ಸಂಘಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು. ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗ ಸೇರಿದಂತೆ ಹಲವರು ಹಾಜರಿದ್ದರು. ಡಿ.ಲಿಟ್ ಸಂಶೋಧನಾರ್ಥಿ ಗಣೇಶ್ ಆರ್ ಕೆಂಚನಾಲ್ ಕಾರ್ಯಕ್ರಮ ನಿರೂಪಿಸಿದರು.