ಇಸ್ಪೀಟ್ ಜೂಜಾಟ; 11 ಜನರ ಬಂಧನ

ಇಸ್ಪೀಟ್ ಜೂಜಾಟ;
11 ಜನರ ಬಂಧನ

ಬುಧವಾರ ಬೆಳಗಿನ ಜಾವ ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಳಗೇರಿ ಮಂಡ್ರಿ ಗ್ರಾಮದ ಕಾಡಿನಲ್ಲಿ 10 ರಿಂದ 15 ಜನರು ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿ, 11 ಜನರನ್ನು ಬಂಧಿಸಿದ್ದಾರೆ.

ಬಂದ ಖಚಿತ ಮಾಹಿತಿಯ ಮೇರೆಗೆ ಎಸ್ ಪಿ ಮಿಥುನ್ ಕುಮಾರ್ ಹೆಚ್ಚುವರಿ ಎಸ್ ಪಿಗಳಾದ ಅನಿಲ್ ಕುಮಾರ್ ಭೂಮಾರೆಡ್ಡಿ, ಕಾರಿಯಪ್ಪ ಎ.ಜಿ. ಮಾರ್ಗದರ್ಶದಲ್ಲಿ, ತೀರ್ಥಹಳ್ಳಿ ಡಿವೈಎಸ್ ಪಿ ಗಜಾನನ ವಾಮನ ಸುತರ, ಹೊಸನಗರ ಸಿಪಿಐ ಗುರಣ್ಣ ಹೆಬ್ಬಾರ್ ಮೇಲ್ವಿಚಾರಣೆಯಲ್ಲಿ, ಸಬ್ ಇನ್ಸ್ ಪೆಕ್ಟರ್ ರಾಜು ರೆಡ್ಡಿ ಬೆನ್ನೂರು ನೇತೃತ್ವದಲ್ಲಿ ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಇಸ್ಪೀಟು ಜೂಜಾಟ ಆಡುತ್ತಿದ್ದ *ಒಟ್ಟು 11 ಜನ ಆರೋಪಿತರನ್ನು ದಸ್ತಗಿರಿ* ಮಾಡಿ, ಜೂಜಾಟದಲ್ಲಿ *ಪಣವಾಗಿಟ್ಟಿದ್ದ ಒಟ್ಟು 12,400/- ರೂ ನಗದು ಹಣ ಮತ್ತು ಇಸ್ಪೀಟು ಎಲೆಗಳನ್ನು* ಅಮಾನತ್ತು ಪಡಿಸಿಕೊಂಡಿತು‌.

ಆರೋಪಿತಗಳ ವಿರುದ್ಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ *0028/2024 ಕಲಂ 87 ಕೆ.ಪಿ ಕಾಯ್ದೆ* ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.