ಹೆಚ್ ಡಿ ಕೆ ಶಸ್ತ್ರ ಚಿಕಿತ್ಸೆ ಹಿನ್ನೆಲೆ ನಾಳೆ ಶಾರದಾ ಪೂರ್ಯಾನಾಯ್ಕರಿಂದ ನಡೆಯಲಿದೆ ಮಹಾ ಮೃತ್ಯುಂಜಯ ಹೋಮ, ರುದ್ರ ಜಪ

ಹೆಚ್ ಡಿ ಕೆ ಶಸ್ತ್ರ ಚಿಕಿತ್ಸೆ ಹಿನ್ನೆಲೆ
ನಾಳೆ ಶಾರದಾ ಪೂರ್ಯಾನಾಯ್ಕರಿಂದ ನಡೆಯಲಿದೆ ಮಹಾ ಮೃತ್ಯುಂಜಯ ಹೋಮ, ರುದ್ರ ಜಪ

ಜೆಡಿಎಸ್ ಪಕ್ಷದ ಹಿರಿಯರೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರ ಅನಾರೋಗ್ಯದ ಹಿನ್ನೆಲೆ ನಾಳೆ ಶಸ್ತ್ರ ಚಿಕಿತ್ಸೆ ನಡೆಯಲಿದ್ದು, ಅವರು ಶೀಘ್ರ ಗುಣಮುಖರಾಗಲೆಂದು ಹಾಗೂ ಚಿಕಿತ್ಸೆ ಫಲಕಾರಿಯಾಗಲೆಂದು ನಾಳೆ ಗುರುವಾರ ಪಿಳ್ಳಂಗಿರಿಯ ಲಕ್ಷ್ಮೀರಂಗನಾಥ ದೇವಾಲಯದಲ್ಲಿ ಕುಮಾರಸ್ವಾಮಿಯವರ ಹೆಸರಿನಲ್ಲಿ ಮಹಾ ಮೃತ್ಯುಂಜಯ ಹೋಮ ಹಾಗೂ ರುದ್ರಜಪವನ್ನು ಜೆಡಿಎಸ್ ನ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶ್ರೀಮತಿ ಶಾರದಾ ಪೂರ್ಯಾನಾಯ್ಕ್ ಹಮ್ಮಿಕೊಂಡಿರುತ್ತಾರೆ.

ನಾಳೆ ಬೆಳಗ್ಗೆ 9.30 ರಿಂದ ಹೋಮ ಹಾಗೂ ಜಪ ಆರಂಭವಾಗಲಿದೆ. ಪೂರ್ಣಾಹುತಿ ಕಾರ್ಯವೂ 12.30 ಕ್ಕೆ ಸಂಪನ್ನವಾಗಲಿದ್ದು , ಎಲ್ಲರೂ ಈ ಪೂಜಾ ಕಾರ್ಯಕ್ಕೆ ಆಗಮಿಸಬೇಕೆಂದು ಶಿವಮೊಗ್ಗ ಗ್ರಾಮಾಂತರ ಜೆಡಿಎಸ್ ಕಾರ್ಯಾಧ್ಯಕ್ಷರಾದ
ಕಾಂತರಾಜ್ ಸೋಮಿನಕೊಪ್ಪ
ಕೋರಿದ್ದಾರೆ.