ಶೋಭಾ ಮಳವಳ್ಳಿ ಬರೆದಿದ್ದಾರೆ- ಮಕ್ಕಳನ್ನೇಕೆ ಕೊಲ್ಲುತ್ತಿದೆ ಹೃದಯ?*
*ಶೋಭಾ ಮಳವಳ್ಳಿ ಬರೆದಿದ್ದಾರೆ- ಮಕ್ಕಳನ್ನೇಕೆ ಕೊಲ್ಲುತ್ತಿದೆ ಹೃದಯ?*
#ಘಟನೆ- 1
ಕೇವಲ 16 ನೇ ವಯಸ್ಸಿಗೆ ಹೃದಯಾಘಾತದಿಂದ ಉಸಿರು ಚೆಲ್ಲಿದ್ದಾನೆ ಚಿಕ್ಕನಾಯಕನಹಳ್ಳಿಯ ರಾಹುಲ್. 10 ನೇ ತರಗತಿ ಓದುತ್ತಿದ್ದ ರಾಹುಲ್, ನಿನ್ನೆ ಶಾಲೆಗೆ ಹೋಗಿ ಮನೆಗೆ ವಾಪಸ್ ಬಂದಿದ್ದ. ರಾತ್ರಿ 9:30 ರ ಸುಮಾರಿಗೆ ಎದೆ ನೋವು ಕಾಣಿಸಿಕೊಂಡಿತು. ತಕ್ಷಣವೇ ರಾಹುಲ್ ನನ್ನು ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗಲಿಲ್ಲ.
#ಘಟನೆ -2
ಮೊನ್ನೆ 20ನೇ ತಾರೀಕು, ತೆಲಂಗಾಣದ ಕಮಾರೆಡ್ಡಿ ಜಿಲ್ಲೆಯಲ್ಲಿ 16 ವಯಸ್ಸಿನ ಶ್ರೀನಿಧಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಮನೆಯಿಂದ ಆರಾಮಾಗಿ ಬಂದ ಶ್ರೀನಿಧಿ, ಶಾಲಾ ಅಂಗಳದಲ್ಲೇ ಕುಸಿದುಬಿದ್ದವಳು ಏಳಲೇ ಇಲ್ಲ.
#ಘಟನೆ- 3
ತಿಂಗಳ ಹಿಂದೆ, ತೆಲಂಗಾಣದಲ್ಲೇ ಅಲಿಘಡ ಜಿಲ್ಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿ ಮೋಹಿತ್ ಚೌಧರಿ ಎಂಬ ಬಾಲಕ ಸಹ ಸಹ ಶಾಲೆಯಲ್ಲೇ ಹಾರ್ಟ್ ಅಟ್ಯಾಕ್ನಿಂದ ಮೃತಪಟ್ಟಿದ್ದ.
#ಘಟನೆ- 4
12 ವರ್ಷದ ಮೋಹಿತ್, ಕ್ರೀಡಾ ಸ್ಪರ್ಧೆಗೆ ಸಿದ್ಧವಾಗುತ್ತಿದ್ದ ವೇಳೆ ಮೈದಾನದಲ್ಲೇ ಕುಸಿದು ಜೀವಬಿಟ್ಟ.
ಅಲಿಘಡ ಜಲ್ಲೆಯ 8 ವರ್ಷದ ದೀಕ್ಷ್ ಎಂಬ ಬಾಲಕ ಆಟವಾಡುತ್ತಲೇ ಹೃದಯಾಘಾತಕ್ಕೀಡಾದ.
#ಘಟನೆ – 5
ಫೆಬ್ರವರಿ ತಿಂಗಳಲ್ಲೇ 23 ವರ್ಷದ ಯುವತಿಗೆ, ಮದುವೆ ಸಮಾರಂಭದಲ್ಲಿ ಡಾನ್ಸ್ ಮಾಡುತ್ತಲೇ ಕುಸಿದು ಹೃದಯಾಘಾತಕ್ಕೀಡಾದ ವಿಡಿಯೋ ದೇಶದಾದ್ಯಂತ ವೈರಲ್ ಆಗಿತ್ತು.
ಕಳೆದ 2 ವರ್ಷದ ಅವಧಿಯಲ್ಲಿ ಹೃದಯಸ್ತಂಭನದಿಂದ ಸಾವಿಗೀಡಾಗುವವರ ಸಂಖ್ಯೆ ಶೇ.22ರಷ್ಟು ಹೆಚ್ಚಿದೆಯಂತೆ. ಇವರಾರಿಗೂ ಆರೋಗ್ಯ ಸಮಸ್ಯೆ, ಎದೆನೋವು, ಉಸಿರಾಟದ ತೊಂದರೆ ಇರಲಿಲ್ಲ ಅಂತಿದ್ದಾರೆ ಅಲಿಘಡ ವಿವಿ ಪ್ರೊಫೆಸರ್ಗಳು. ಆಡಿ, ಬೆಳೆದು ಬದುಕುಬೇಕಾದ ಮಕ್ಕಳು ಕಣ್ಣೆದುರೇ ಕುಸಿದು ಬಿದ್ದು ಉಸಿರು ಚೆಲ್ಲುತ್ತಿದ್ದಾರೆ. ಕಾರಣ ಹುಡುಕಬೇಕಾದ, ಚಿಕಿತ್ಸೆ ತಿಳಿಸಬೇಕಾದ ವೈದ್ಯಲೋಕ ಮಾತ್ರ ಮೌನವ್ರತದಲ್ಲಿದೆ..😥
– *ಶೋಭಾ ಮಳವಳ್ಳಿ*