ಎಂ.ಎಲ್.ಸಿ. ಶ್ರೀಮತಿ ಬಲ್ಕೀಶ್ ಬಾನು ನೇತೃತ್ವದಲ್ಲಿ ಹಜ್ ಯಾತ್ರಿಗಳ ವಿಶೇಷ ತರಬೇತಿ ಕಾರ್ಯಕ್ರಮ;* *ಗಣ್ಯರ ಶುಭಹಾರೈಕೆಗಳ ಸಮುದ್ರದಲ್ಲಿ ಮಿಂದೆದ್ದ ಹಜ್ ಯಾತ್ರಿಗಳು*
*ಎಂ.ಎಲ್.ಸಿ. ಶ್ರೀಮತಿ ಬಲ್ಕೀಶ್ ಬಾನು ನೇತೃತ್ವದಲ್ಲಿ ಹಜ್ ಯಾತ್ರಿಗಳ ವಿಶೇಷ ತರಬೇತಿ ಕಾರ್ಯಕ್ರಮ;*
*ಗಣ್ಯರ ಶುಭಹಾರೈಕೆಗಳ ಸಮುದ್ರದಲ್ಲಿ ಮಿಂದೆದ್ದ ಹಜ್ ಯಾತ್ರಿಗಳು*

ಶಿವಮೊಗ್ಗ: ರಾಜ್ಯ ಸರ್ಕಾರದ ಪರವಾಗಿ ರಾಜ್ಯ ಮತ್ತು ಶಿವಮೊಗ್ಗ ಜಿಲ್ಲಾ ಹಜ್ ಸಮಿತಿ ವತಿಯಿಂದ ಮಂಗಳವಾರದಂದು ಶಿವಮೊಗ್ಗದ ಮದಾರಿ ಪಾಳ್ಯದ ಹೆವೆನ್ ಪ್ಯಾಲೆಸ್‌ನಲ್ಲಿ ಶಿವಮೊಗ್ಗ, ಹಾಸನ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಹಜ್ ಯಾತ್ರಿಗಳಿಗೆ ಒಂದು ದಿನದ ತರಬೇತಿ ವಿಧಾನ ಪರಿಷತ್ ಸದಸ್ಯೆ ಹಾಗೂ ಜಿಲ್ಲಾ ಹಜ್ ಸಮಿತಿ ಅಧ್ಯಕ್ಷೆ ಶ್ರೀಮತಿ ಬಲ್ಕೀಶ್ ಬಾನುರವರ ನೇತೃತ್ವದಲ್ಲಿ ನಡೆಯಿತು.
ಶಿವಮೊಗ್ಗ ಜಿಲ್ಲೆಯಿಂದ 188, ಹಾಸನದಿಂದ 125, ಚಿಕ್ಕಮ ಗಳೂರುನಿಂದ 117 ಹಾಗೂ ದಾವಣಗೆರೆಯಿಂದ 153 ಯಾತ್ರಿಗಳಿಗೆ ತರಬೇತಿ ನೀಡಲಾಯಿತು. ಈ ತರಬೇತಿ ನೀಡಲು ಬೆಂಗಳೂರಿನಿಂದ ಸಂಪನ್ಮೂಲ ವ್ಯಕ್ತಿಗಳು ಬಂದಿದ್ದರು.
ಹಜ್ ಕಮಿಟಿ ರಾಜ್ಯಾಧ್ಯಕ್ಷ ಜುಲ್ಫೀಕರ್ ಟಿಪ್ಪು ಮಾತನಾಡಿ, ಯಾತ್ರಾರ್ಥಿಗಳು ನಿಗದಿತ ದಿನದಂದು ಬೆಂಗಳೂರಿನ ಹಜ್ ಭವನಕ್ಕೆ ಬಂದು, ಅಲ್ಲಿನ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು, ಯಾವುದೇ ಸಮಸ್ಯೆಯಾದರೂ ಕೂಡಲೇ ಹಜ್ ಕಮಿಟಿಗೆ ಸಂಪರ್ಕಿಸಬೇಕೆಂದರು.
ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್, ಸೂಡಾ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಪ್ರಸನ್ನ ಕುಮಾರ್, ಕಲಗೋಡು ರತ್ನಾಕರ್ ಸೇರಿದಂತೆ ಹಲವು ಮುಖಂಡರು ಯಾತ್ರಾರ್ಥಿಗಳಿಗೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಕೇವಲ ಮುಸ್ಲಿಂರು ಮಾತ್ರವಲ್ಲದೆ, ಉಳಿದ ಧರ್ಮದವರು ಕೂಡ ಇದಕ್ಕೆ ಸಹಕಾರ ನೀಡಿದರು.
ಹಜ್ ಯಾತ್ರಿಗಳ ತರಬೇತಿ ಶಿಬಿರದ ಯಶಸ್ಸಿಗಾಗಿ 7 ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿತ್ತು. ಒಂದೊಂದು ಸಮಿತಿಯಲ್ಲಿ ವಿವಿಧ ಇಲಾಖೆಗಳ ಅಲ್ಪಸಂಖ್ಯಾತ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ಆಯ್ಕೆಮಾಡಲಾಗಿತ್ತು.
ಈ ವರ್ಷ ರಾಜ್ಯದಿಂದ 8ಸಾವಿರಕ್ಕೂ ಹೆಚ್ಚು ಹಜ್ ಯಾತ್ರಿಗಳು ಯಾತ್ರೆ ಕೈಗೊಂಡಿದ್ದು, ಏ.29ರಿಂದ ಮೇ 15ರವರೆಗೆ ಪ್ರತಿದಿನ ಬೆಂಗಳೂರಿನಿಂದ ವಿಮಾನ ಹೊರಡಲಿದೆ. ಯಾತ್ರಿಗಳಿಗೆ ಆಯಾ ಜಿಲ್ಲೆಗಳಲ್ಲಿ ವ್ಯಾಕ್ಸಿ ನೇಷನ್ ಕೂಡ ಹಾಕಲಾಯ್ತು ಎಂದು ಕಾರ್ಯಕ್ರಮದ ಉಸ್ತುವಾರಿ ಎಂ.ಎಲ್.ಸಿ ಶ್ರೀಮತಿ ಬಲ್ಕೀಶ್ ಬಾನು ವಿವರಿಸಿದರು.
ಇದೇ ಸಂದರ್ಭದಲ್ಲಿ ಆಯೋಜ ಕರನ್ನು ಕೂಡ ಸನ್ಮಾನಿಸಲಾಯಿತು. ಯಾತ್ರಿಗಳಿಗೆ ಹೆಲ್ತ್ ಕಾರ್ಡ್ ನೀಡಲಾಯಿತು.